Oppanna.com

ನೀರ್ಚಾಲು ಶಾಲೆಗೆ ೯೩% ರಿಸಲ್ಟು ಅಡ.

ಬರದೋರು :   ದೊಡ್ಡಭಾವ°    on   29/04/2011    6 ಒಪ್ಪಂಗೊ

ಕಳುದ ತಿಂಗಳು ಕಳುದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ರಿಸಲ್ಟು ಬಂದಾತಿದಾ, ಕೇರಳಲ್ಲಿ. ಎಪ್ರೀಲು ತಿಂಗಳಿಲ್ಲಿಯೇ ರಿಸಲ್ಟು ಬಸ್ಸು ಇದು ಸುರು ಅಡ. ಆದರೂ ಬೈಲಿನ ಕಥೆಲಿ ಬಪ್ಪ ಕಾರಣ ನೀರ್ಚಾಲು ಶಾಲೆಯ ರಿಸಲ್ಟಿಂಗೆ ಒಂದು ಪ್ರಾಧಾನ್ಯ ಇದ್ದು ಅಲ್ಲದೋ…?

ಎಂತ ಮಾಡ್ಸು, ೧೭೭ ರಲ್ಲಿ ೧೬೫ ಪಾಸು, ಹೇಳಿರೆ ೯೩% ಮಾಂತ್ರ ಇದ್ದಷ್ಟೆ ಹೇದು ಬೇಜಾರ ನವಗೆ 😉

ನಾವು ಪಾಠ ಮಾಡಿದ ಫಿಸಿಕ್ಸಿಲ್ಲಿ ಎಲ್ಲೋರೂ ಪಾಸು ಹೇಳಿ ಸಂತೋಷವೂ ಇದ್ದು  🙂

6 thoughts on “ನೀರ್ಚಾಲು ಶಾಲೆಗೆ ೯೩% ರಿಸಲ್ಟು ಅಡ.

  1. ಎಸ್ಸೆಸ್ಸೆಲ್ಸಿ ಪರೀಕ್ಷೆಲಿ ಉತ್ತಮ ಸಾಧನೆ ಮಾಡಿದ ಶಾಲೆಗೊಕ್ಕೆ ಶುಭಾಶಯಂಗೊ

  2. ಅಡ್ಕತ್ತಿಮಾರುಮಾವ° ಹೇಳಿದ್ದದು ನಿಜವೇ. ಇದರ ಬಗ್ಗೆ ರಜ್ಜ ಆಲೋಚನೆ ಮಾಡೆಕ್ಕು.

  3. ಫಲಿತಾಂಶ ತಿಳುದು ತುಂಬಾ ಸಂತೋಶ ಆತು…ಎಂಗಳ ಮೀಯಪದವು ಶಾಲೆಲಿ ಕೂಡಾ ೯೩% ಬಯಿಂದು ಹೇಳಿ ತಿಳುದು ಬಂತು….ದೊಡ್ಡ ಬೇಜಾರದ ಸಂಗತಿ ಹೇಳಿರೆ ಕೇರಳದ ವಿದ್ಯಾಬ್ಯಾಸದ ಮಟ್ಟ ತುಂಬಾ ಕುಸುದ್ದು …ಇಲ್ಲಿ First claas ತೆಗದ ಮಕ್ಕೊಗೆ ಕೂಡಾ ಕರ್ನಾಟಕದ ಕೋಲೇಜಿಲಿ ಸೀಟು ಸಿಕ್ಕುದು ಕಸ್ತ್ತ ಆಯಿದು….ಹಾಂಗಾಗಿ ಹೆಚ್ಹಿನ ನಮ್ಮೋರು ಇಲ್ಲಿಯಾಣ ಶಾಲಗೊಕ್ಕೆ ಮಕ್ಕಳ ಕಳುಹಿಸುದು ಬಿಟ್ಟು ಇಂಗ್ಲಿಶ್ ಮೀಡಿಯಮ್, ಕರ್ನಾಟಕದ ಶಾಲಗೊಕ್ಕೆ ಕಳುಸುತ್ತವು..ಸರಕಾರಿ ಶಾಲಗ ಹೆಡ್ಡರ ಸೋಮಾರಿಗಳ ಸ್ರುಸ್ಟ್ಟಿ ಮಾಡುವ ಕಾರ್ಖಾನೆ ಆಉತ್ತಾ ಇದ್ದು ಆ ಬಗ್ಗೆ ಶಿಕ್ಶಕರು,ಹೆತ್ತವರು ಆಲೋಚನೆ ಮಾಡೆಕ್ಕಾದ ಅವಶ್ಯಕತೆ ತುಂಬಾ ಇದ್ದು ಹೇಳಿ ತೋರುತ್ತು.. ಈ ಕುರಿತು ಒಂದು ಆರೋಗ್ಯಕರ ಚರ್ಚ್ಹೆ ನಡದರೂ ಒಳ್ಳೆದಿತ್ತು ಅಲ್ಲದಾ ದೊಡ್ಡ ಬಾವಾ..??

  4. ನೀರ್ಚಾಲು ಶಾಲೆಯ ಫಲಿತಾ೦ಶ ನೋಡಿ ಸಮಾಧಾನ ಆತು.ಗುರುಗೊ ಎಷ್ಟು ಪ್ರಯತ್ನಪಟ್ಟರೂ ಪರೀಕ್ಷೆ ಬರವದು ಮಕ್ಕೊ ಅಲ್ಲದೋ ದೊಡ್ಡಭಾವ?ಬಪ್ಪ ವರುಷ೦ಗಳಲ್ಲಿ, ಒಳುದ ವಿಷಯ೦ಗಳಲ್ಲಿಯೂ ಭೌತಶಾಸ್ತ್ರದ ರಿಸಲ್ಟು ಬರಳಿ ಹೇಳಿ ಹಾರಸುತ್ತೆ.

  5. ದೊಡ್ಡಬಾವಾ..
    ಶಾಲೆಯ ರಿಸಳ್ಟು ಬಂದದು ನೋಡಿ ಭಾರೀ ಕೊಶಿ ಆತು.

    ಗೆದ್ದ ಎಲ್ಲ ಮಕ್ಕೊಗೆ, ಗೆಲ್ಲುಸಿದ ಎಲ್ಲಾ ಗುರುಗೊಕ್ಕೆ ಅಭಿನಂದನೆಗೊ.
    ಬಪ್ಪೊರಿಶ ನೂರಕ್ಕೆ ನೂರು ಬರಳಿ ಹೇಳ್ತದು ಬೈಲಿನೋರ ಹಾರಯಿಕೆ.

    ಹೇಳಿದಾಂಗೆ, ಬೈಲಿನ ಸಾರಡಿ ಪುಳ್ಯಕ್ಕೊ ಆರಾರಿತ್ತಿದ್ದವೋ ಕ್ಳಾಸಿಲಿ? 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×