Oppanna.com

ಭಗವದ್ಗೀತೆಯ ಅಭಿಯಾನ

ಬರದೋರು :   ಗೋಪಾಲಣ್ಣ    on   10/01/2012    9 ಒಪ್ಪಂಗೊ

ಗೋಪಾಲಣ್ಣ

ಕಳೆದ ಐದು ವರ್ಷಂದ ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮೊನ್ನೆ ಬೆಂಗಳೂರಿಲಿ ಪರಿಸಮಾಪ್ತಿ ಆತು.
ಇದರ ಬಗ್ಗೆ ಪತ್ರಿಕೆಗಳ ವರದಿ ತುಂಬಾ ಬಯಿಂದು.ವಿವರ ಅದರಲ್ಲಿ ನೋಡುಲಕ್ಕು.
ಭಗವದ್ಗೀತೆಯ ಬಗ್ಗೆ ಸಣ್ಣ ಉಪನ್ಯಾಸಂಗಳ ಆ ಸ್ವಾಮೀಜಿ ತುಂಬಾ ಲಾಯ್ಕಲ್ಲಿ ಜನಸಾಮಾನ್ಯರಿಂಗೆ ಅರ್ಥ ಅಪ್ಪ ಹಾಂಗೆ ಕೊಟ್ಟಿದವು.ಸಮಾಜದ ಎಲ್ಲಾ ಸಮುದಾಯಂಗಳ ಸಂಘಸಂಸ್ಥೆಗಳ ಸಹಕಾರಂದ ದೊಡ್ಡ ಗೀತಾ ತತ್ತ್ವ ಪ್ರಚಾರ ಕಾರ್ಯಕ್ರಮಂಗಳ ಮಾಡಿದ್ದವು.ಗೀತಾ ಪ್ರೆಸ್ ನ ಕನ್ನಡ ಭಗವದ್ಗೀತೆಯ ಸುಲಭ ಬೆಲೆಯ ಆವೃತ್ತಿಯ ನೂರಾರು ಹಂಚಿದ್ದವು.ಕುಳಾಯಿ ಮತ್ತೆ ಕಣ್ಯಾರ[ಕುಂಬಳೆ]ಲಿ ಆದ ಅವರ ಕಾರ್ಯಕ್ರಮಂಗಳ ಆನು ನೋಡಿದ್ದೆ.ತುಂಬಾ ಲಾಯ್ಕ ಇತ್ತು.ಅವರ ಬದ್ಧತೆ ಪ್ರಶಂಸಾರ್ಹ.
ಸಮಾಜಲ್ಲಿ ಗುಪ್ತಗಾಮಿನಿಯಾಗಿ ಈ ಅಭಿಯಾನದ ಪ್ರಭಾವ ಇಲ್ಲದ್ದೆ ಇರ.

9 thoughts on “ಭಗವದ್ಗೀತೆಯ ಅಭಿಯಾನ

  1. ನಮ್ಮ ದೇಶಲ್ಲಿ ಹಗಲು ಬಣಚ್ಚು ಹಾಕಿ ದಾರಿ ತೋರ್ಸೆಕ್ಕಾದ ಗೆತಿ ಆತು ಹೇಳ್ತದಕ್ಕೆ ಇದೊ೦ದು ಉದಾಹರಣೆ.
    ಕಳುದ ವರುಷ ಮುಗುದ ದಿನ, ಗುರುಗಳ ಉಪನ್ಯಾಸವ ಕೇಳ್ತ ಯೋಗ ಎನಗೂ ಸಿಕ್ಕಿದ್ದು.

  2. ಗೀತೆಯ ಬಿಟ್ಟು ನಮ್ಮ ಜೀವನವೇ ಇಲ್ಲೇ… ‘ಭಗವದ್ಗೀತಾ ಅಭಿಯಾನ’ ನಡೆಸಿದ ಸ್ವರ್ಣವಲ್ಲಿ ಶ್ರೀಗಳಿಂಗೆ ಶಿರಸಾ ನಮನಗಳು…

  3. ಕಳುದ ತಿಂಗಳು ಆದ ಅಭಿಯಾನಲ್ಲಿ ಭಾಗವಹಿಸುವ ಭಾಗ್ಯಎನಗೂ ಸಿಕ್ಕಿತ್ತು.
    ಹರೆರಾಮ.

  4. 🙂
    ಒಳ್ಳೆ ಶುದ್ದಿ ಮಾವಾ..
    ಆನುದೇ ಪೇಪರಿಲ್ಲಿ ಓದಿದ್ದೆ..
    ಅವ್ವು ಮಾಡಿದ ಉಪನ್ಯಾಸಂಗೊ ಎಲ್ಲಿಯಾರೂ ಸಿಕ್ಕುಗೋ?

    1. “ಜ್ಜ್ನಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ”
      ಸ್ವರ್ಣವಲ್ಲೀ ಗುರುಗೊ ಕಳೆದ ಒಂದು ದಶಕಂದ ಶಿರಸಿಯ ಯೊಗ ಮಂದಿರಲ್ಲಿ ಶ್ರೀಮದ್ ಭಗವದ್ಗೀತಾ ಸಪ್ತಾಹ ನೆಡಶುತ್ತಾ ಬಯಿಂದವು. ೨೦೦೪ರಲ್ಲಿ ಅಭಿಯಾನ ನೆಡಶುವ ಸುಯೋಗ ಎಂಗೊಗೆ ಕೈಗಾಲ್ಲಿಯೂ ಬಯಿಂದು. ಈ ಅಭಿಯಾನಲ್ಲಿ ಗೀತೆಯ ಐವತ್ತು ಲಕ್ಷ ಪ್ರತಿ ಜನರ ಕೈ ಸೇರಿದ್ದಡ. ಅದಲ್ಲದ್ದೆ ಇಲೆಕ್ತ್ರಾನಿಕ್ ಮೀಡಿಯದ ಮೂಲಕವೂ ಹಲವರ ತಲುಪಿಕ್ಕು. ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ) ಅವರ ಪ್ರವಚನ ಮಾಲೆ ನಿತ್ಯ ಸಂಯುಕ್ತ ಕರ್ನಾಟಕ, ಹುಬ್ಬಲ್ಲಿ ಆವೃತ್ತಿಲಿ ಬತ್ತು.
      ಅವರ ‘ಶ್ರೀಮದ್ಭಗವದ್ಗೀತಾ ಅಧ್ಯಾತ್ಮ ವಿದ್ಯೆ’ , ‘ಶ್ರೀಮದ್ಭಗವದ್ಗೀತಾ ಭಕ್ತಿಯೋಗ’ & ‘ಶ್ರೀಮದ್ಭಗವದ್ಗೀತಾ ಕರ್ಮಯೋಗ’ ಹೇಳುವ ಮೂರು ಪ್ರವಚನ ಸಂಪುಟ ಪ್ರಿಂಟು ಆಯಿದು.
      ಸಂಪರ್ಕಕ್ಕೆಃ
      ಶ್ರೀ ಭಗವತ್ಪಾದ ಪ್ರಕಾಶನ
      ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
      ಅಂಚೆಃ ಮಠದೇವಳ-೫೮೧ ೩೩೬
      08384-279359, 279311, 279477

      1. ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ). ಇದು ಮೊದಲನೆ ಆರು ಅಧ್ಯಾಯಂಗಳ ವ್ಯಾಖ್ಯಾನದ್ದು, ಇನ್ನೂ ಎರಡು ಸಂಪುಟಲ್ಲಿ ಪ್ರಕಟ ಆವುತ್ತಡ (ಮಾಹಿತಿ–ದಶಂಬರದ-೧೧ ಸ್ವರ್ಣವಲ್ಲೀ ಪ್ರಭಾ ಸಂಚಿಕೆಂದ)

        1. ಗೀತೆ ಹೇಳಿರೆ ಉರುದು ಬೀಳುವ ಜೆನಂಗೊ ಇಪ್ಪ ಈ ಕಾಲಲ್ಲಿ ಸ್ವರ್ಣವಲ್ಲೀ ಶ್ರೀ ಗಳ ಅಭಿಯಾನ ಅಭಿನಂದನಾರ್ಹ.
          @ ಕುಮಾರಣ್ಣ, ಒಳ್ಳೆ ಮಾಹಿತಿಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×