ಪೆರಡಾಲ ವಸ೦ತ ವೇದ ಪಾಠಶಾಲೆ

ಪೆರಡಾಲ ಉದನೇಶ್ವರ ದೇವಸ್ಥಾನಲ್ಲಿ ಈ ವರುಷದ ವಸ೦ತ ವೇದ ಪಾಠಶಾಲೆ ಎಪ್ರಿಲು 3 ನೆಯ ತಾರೀಕು ಉದ್ಘಾಟನೆ ಆಯಿದು.ಶ್ರೀ ಈಶ್ವರ ಭಟ್ ಹಸ೦ತಡ್ಕ,ಇವು ದೀಪ ಹೊತ್ತುಸಿ ಉದ್ಘಾಟನೆ ಮಾಡಿದವು.

ವೇದಮೂರ್ತಿಗಳಾದ ಶ್ರೀ ವೆ೦ಕಟೇಶ್ವರ ಭಟ್,ಶ್ರೀ ಸತ್ಯೇಶ್ವರ ಭಟ್,ಶ್ರೀ ಸದಾಶಿವ ಭಟ್ ಇವು ಪ್ರತಿ ವರುಷದ ಹಾ೦ಗೆ  ವೇದಪಾಠ ಹೇಳಿಕೊಟ್ಟು  ಮಕ್ಕೊಗೆ ಮಾರ್ಗದರ್ಶನ ಮಾಡುತ್ತಾ ಇದ್ದವು.ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ಶಿವರಾಮ ಭಟ್ ಸಹಕರಿಸುತ್ತಾ ಇದ್ದವು.

ಈ ವರುಷ ಎ೦ಭತ್ತನಾಲ್ಕು ಮಕ್ಕೊ ,ಮೇ ತಿ೦ಗಳ ಅಖೇರಿವರೆಗೆ ನೆಡೆತ್ತ ಈ  ಶಿಬಿರಲ್ಲಿ ಕಲಿತ್ತಾ ಇದ್ದವು.ಒಟ್ಟು ನಾಲ್ಕು ವರುಷದ ತರಗತಿಗೊನೆಡೆತ್ತಾ ಇದ್ದು ಹೇಳ್ತದು ಸ೦ತೋಷದಾಯಕ ವಿಷಯ.

ಕಾಸರಗೋಡು-ಹೊಸದುರ್ಗ ಹೈವ ಬ್ರಾಹ್ಮಣ ಮಹಾಸಭೆಯ ಪೋಷಕತ್ವಲ್ಲಿ ನೆಡೆತ್ತಾ ಇಪ್ಪ ಈ ಶಾಲೆ ಸುಗಮವಾಗಿ ಮುನ್ನೆಡೆಯೆಕ್ಕಾರೆ ಸಮಾಜದ ಬ೦ಧುಗಳ ಸಹಾಯದ  ಅಗತ್ಯವೂ ಕಾಣುತ್ತಾ ಇದ್ದು. ಆಸಕ್ತ ದಾನಿಗೊ ಒ೦ದರಿ ಈ ಶಿಬಿರಕ್ಕೆ ಭೇಟಿ ಕೊಡೆಕ್ಕು ಹೇಳಿ ವಿನ೦ತಿ.

 

ಮು೦ದಿನ ಜನಾ೦ಗ

ಮು೦ದಿನ ಜನಾ೦ಗ

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ

ಮುಳಿಯ ಭಾವ

   

You may also like...

5 Responses

 1. ವಸಂತ ವೇದಪಾಠಶಾಲೆ ನಿರಂತರವಾಗಿ ವಿಪ್ರರ ತಯಾರುಮಾಡುತ್ತಿರಲಿ.
  “ವೇದಾಧ್ಯಯನತೋ ವಿಪ್ರಃ” ಅಲ್ಲದಾ? ನಮ್ಮ “ವಿಪ್ರ”ತ್ವ ದ ಆರಂಭ/ಆಧಾರ ಇಂತಹ ಪಾಠಶಾಲೆಗಳಲ್ಲಿಯೇ ಅಪ್ಪದು.
  ಪೆರಡಾಲಲ್ಲಿ ವಟುಗಳ, ಗುರುಗಳ ಉತ್ಸಾಹ ಶ್ಲಾಘನೀಯವಾಗಿದ್ದು.
  ಕೆಲವು ಅನಿಸಿಕೆಗ ಹೀಂಗಿದ್ದು –
  ಇಲ್ಲಿ ಕಲಿವ ವಟುಗಕ್ಕೆಒಂದು “ಗ್ರಂಥಾಲಯ” ದ ವ್ಯವಸ್ಥೆ ಇದ್ದರೆ ತುಂಬಾ ಒಳ್ಳೆದು.
  ಎಡೆಡೆಲ್ಲಿ ಕೆಲವು ಪ್ರಸಿದ್ಧ ವ್ಯಕ್ತಿಗಳ `ವ್ಯಾಖ್ಯಾನಂಗ/ಉಪನ್ಯಾಸ’ದ ಆಯೋಜನೆ ಮಾಡಿರೆ ತುಂಬಾ ಉಪಕಾರ ಅಕ್ಕು. (ಸಣ್ಣ ಮಕ್ಕೊಗೆ ಅರ್ಥ ಆವ್ತ ನಮುನೆದು)
  ಎರಡು ತಿಂಗಳಿಲ್ಲಿ ಸಂಸ್ಕೃತಸಂಭಾಷಣೆಯ ಸಾಮರ್ಥ್ಯವುದೆ ಮಕ್ಕೊಗೆ ಸಿಕ್ಕುವ ಹಾಂಗಾಯೆಕು.

 2. parvathi marakini says:

  ಎಂಬತ್ತ ನಾಲ್ಕು ಮಕ್ಕೊ ಶಿಬಿರಲ್ಲಿ ಭಾಗವಹಿಸುತ್ತಾ ಇಪ್ಪದರ ಓದಿ ಸಂತೋಷ ಆತು.. ಈಗಾಣ ಕಾಲಲ್ಲಿ ಇಷ್ತು ಮಕ್ಕೊ ಸೇರುದು ಸಂತೋಷದ ಸಂಗತಿ… ಶಿಬಿರ ಚೆಂದಕ್ಕೆ ನಡೆಯಲಿ..

 3. Shreekrishna says:

  25 varsha hinde aanu hopaga eddastte makko egalu eddavu… keli kushi aathu.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *