ಆಹಾರ ಹಾಳು ಮಾಡೆಡಿ

February 18, 2012 ರ 6:16 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಆಹಾರ ಮಂತ್ರಾಲಯ ಮದುವೆ ಮುಂತಾದ ಸಮಾರಂಭಲ್ಲಿ ಪೋಲು ಮಾಡುವ ಆಹಾರ ವಸ್ತುಗಳ ಗಮನಿಸಿ,ಅಂತಾ ನಷ್ಟವ ತಡೆವ ಬಗ್ಗೆ ಆಲೋಚಿಸುತ್ತಾ ಇದ್ದು-ಇದು ಇಂದ್ರಾಣ ಸುದ್ದಿ.
ಕಾನೂನು ಮಾಡಿ ಆಹಾರ ವಸ್ತುಗಳ ನಷ್ಟವ ತಡೆವದು ಹೇಂಗೋ ಗೊಂತಿಲ್ಲೆ.
ನಮ್ಮವು ಅನುಪತ್ಯಂಗಳಲ್ಲಿ ಆಹಾರ ಹಾಳು ಮಾಡುದು ಕಾಂಬಾಗ ಬೇಜಾರ ಆವುತ್ತು.ಬೇಡ ಹೇಳಿದರೂ ಬಡುಸುದು,ಮಕ್ಕೊಗೂ ಎರಡು ಕೈಲು ಅಶನ ಹಾಕುದು,ಸಾರಿನ ಕೊದಿಲಿನ ತೋಡಿ ಹಾಕುದು ಎಲ್ಲಾ ನಡತ್ತು.ದೊಡ್ಡವೂ ಕೂಡಾ ರುಚಿ ನೋಡಲೆ ಹೇಳಿ ಎಲ್ಲಾ ಬಗೆ ಆಂತೊಂಬದು,ಅರ್ಧರ್ಧ ತಿಂದು,ಕಲಸಿ ಇಡುಕ್ಕುದು ಎಲ್ಲಾ ಜೆಂಬ್ರಲ್ಲೂ ಅವಿಚ್ಛಿನ್ನವಾಗಿ ನಡೆತ್ತು.ಅಗತ್ಯ ಇಲ್ಲದ್ದರೂ ನಾಕು ಬಗೆ ತಾಳು,ಚಟ್ನಿ,ಅವಿಲು,ಮೆಣಸುಕಾಯಿ-ಹೀಂಗೆ ಮಾಡಿಸುದು,ಎರಡೊ ಮೂರೊ ಸಿಹಿ ಮಾಡಿಸುದು,ಅದರ ಎಲ್ಲರಿಂಗೂ ವೋತಾಪ್ರ ಬಡಿಸಿಕೊಂಡು ಹೋಪದು -ಈ ತುಟ್ಟಿಯ ಕಾಲಲ್ಲಿ ಅದು ದೊಡ್ಡ ತಪ್ಪು.ಸಂಪ್ರದಾಯ ,ಮರ್ಯಾದೆ,ಅಂತಸ್ತು ಹೇಳುವ ಒಂದು ಭ್ರಮೆಲಿ ಸಿಕ್ಕಿ ನಾವು ಇದರ ಕಂಡೂ ಕಾಣದ್ದ ಹಾಂಗೆ ನಟಿಸುತ್ತಾ ಇದ್ದು! ಸಾಂಪ್ರದಾಯಿಕ ಪಂಕ್ತಿ ಭೋಜನ ಒಳ್ಳೆದೇ,ನವಗೆ ತೃಪ್ತಿ ಅಪ್ಪದು ಹಾಂಗೆ ಉಂಡರೆ ಮಾತ್ರ-ಎಲ್ಲಾ ಸರಿ.ಆದರೆ ದುಂದು ವೆಚ್ಚವ ,ಚೆಲ್ಲಿ ಹಾಳು ಮಾಡುದರ ತಪ್ಪಿಸಲೆ ನಾವು ಕ್ರಮ ತೆಕ್ಕೊಳದ್ದೆ ಆಗ.ಎರಡೆ ಬಗೆ ತಾಳು,ಅವಿಲು ಸಾಲದೊ?ಒಂದೇ ಸಿಹಿ,ಖಾರ ಸಾಲದೊ?ಆರಿಂಗೆ ಬೇಕೊ ಕೇಳಿಯೇ ಬಡಿಸುದು ಮಾಡಲೆ ಆಗದೊ? ನವಗೆ ಯಾವದು ಬೇಡದೊ ಅದು ಬಪ್ಪಾಗ ಕೈ ಅಡ್ಡ ಹಿಡಿಯೆಕು.ಬಡಿಸುವವು ಉಂಬವರಲ್ಲಿ ಆರು ಕೈ ಅಡ್ದ ಹಿಡಿತ್ತವೊ ಅವಕ್ಕೆ ಬಡಿಸಲೆ ಆಗ.
ಮಾಡಿಸುವವೂ,ಬಡಿಸುವವೂ,ಉಂಬವೂ ಈ ವಿಷಯವ ಗಮನಿಸಿ,ಹೊಂದಾಣಿಕೆ ಮಾಡಿಕೊಂಬದು ಅಗತ್ಯ.ಆರಿಂಗೆ ಎಲ್ಲಾ ಬಗೆ ಬೇಡದೊ,ಆರೋಗ್ಯದ ಕಾರಣಂದ ತಿಂಬಲೆ ಆಗದೊ ಅಂತವಕ್ಕೆ ಬಫೆ ವ್ಯವಸ್ಥೆಯೇ ಒಳ್ಳೆದು.
ಆಹಾರ ದೇವರ ಕೊಡುಗೆ,ಅನ್ನಂ ನ ನಿಂದ್ಯಾತ್ ಹೇಳಿ ಆರ್ಯೋಕ್ತಿ.ಅನ್ನ ಹಾಳು ಮಾಡುದು ಅನ್ನದ ನಿಂದೆಯೇ.ಅದರ ತಡೆವದು ಸಂಪ್ರದಾಯಕ್ಕೆ ವಿರೋಧ ಅಲ್ಲ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಒಳ್ಳೆ ಚಿಂತನಾರ್ಹ ವಿಷಯ ಮಾವ. ಜೆಂಬ್ರಂಗಳಲ್ಲಿ ಅಂತೆ ಆಹಾರ ಹಾಳು ಮಾಡುವ ಬದಲು ಎಷ್ಟು ಬೇಕೋ ಅಷ್ಟೇ ಬಳುಸಿ, ಒಳುದ್ದದರ ಹತ್ರಲ್ಲಿಪ್ಪ ಅನಾಥಾಶ್ರಮಕ್ಕೊ, ಅಥವಾ ಆರಾರು ಪಾಪದೋರಿಂಗೊ ಮಣ್ಣ ಕೊಟ್ರೆ ನಮ್ಮ ಲೆಕ್ಕಲ್ಲಿ ಅವುದೇ ಪಾಯಸ ಉಂಡಾಂಗಾವುತ್ತು ಅಲ್ಲದಾ?

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಇದಾ ಹೀಂಗೆಲ್ಲ ಹೇಳಿ ತಪ್ಪುಸಿಯೊಂಬಲೆ ಎಡಿಯ ಅತೋ.. 😉
  ನಾವು ಬಳುಸುದು ಬಳುಸುದೇ … 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮತ್ತೆ ಮನೆ ಎಜಮಾನ ಕಮ್ಮಿ ಬಳ್ಸಿ.. ಕಮ್ಮಿ ಬಳ್ಸಿ…, ಒಳುದ್ದರ ಅನಾಥಾಶ್ರಮಕ್ಕೆ ಕೊಡ್ಳೆ ಬೇಕು ಹೇಳ್ವ ಸ್ಟೈಲ್, ಪೈಪೋಟಿ ಸುರುವಕ್ಕಪ್ಪೋ!!!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಅಪ್ಪನ್ನೇ…

  ಜಯಶ್ರೀ ನೀರಮೂಲೆ

  jayashree.neeramoole Reply:

  ಒಪ್ಪಣ್ಣ ಹೇಳಿಕೊಟ್ಟ ‘ಸಣ್ಣ ನೂರು’ ವಿಧಾನ ಎಲ್ಲ ಬಳಸಿಗೊಂಡು ನಾವೇ ಜೆಮ್ಬ್ರ ಸುಧಾರುಸುವ ಹಾಂಗೆ ಆದರೆ ಈ ಸಮಸ್ಯೆಗ ಎಲ್ಲ ತಕ್ಕ ಮಟ್ಟಿ೦ಗೆ ಪರಿಹಾರ ಅಕ್ಕೋ ಹೇಳಿ…

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಯೋಚನೆ ಮಾಡಿ ನಮ್ಮ ನಿತ್ಯಜೀವನಲ್ಲಿ ಅಳವಡಿಸೆಕ್ಕಾದ ವಿಷಯ.ಆಹಾರ ಹಾಳು ಮಾಡುಲೆ ಆಗ,ಒಳುದ್ದದರ ಇಡ್ಕದ್ದೆ ಹಶು ಹೊಟ್ಟೆಗೆ ಎತ್ತುಸುವ ಪ್ರಯತ್ನವನ್ನೂ ಮಾಡೇಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಪುಣಚ ಡಾಕ್ಟ್ರುವೇಣೂರಣ್ಣನೆಗೆಗಾರ°ಗಣೇಶ ಮಾವ°ಮುಳಿಯ ಭಾವಬೋಸ ಬಾವಚೂರಿಬೈಲು ದೀಪಕ್ಕಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಅಕ್ಷರದಣ್ಣಸಂಪಾದಕ°ಶ್ಯಾಮಣ್ಣರಾಜಣ್ಣಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ಒಪ್ಪಕ್ಕಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿಡೈಮಂಡು ಭಾವಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ