Oppanna.com

04-ಅಗೋಸ್ತು-2013: ಶ್ರೀಗುರುಗೊ "ಅಟ್ಟಿನಳಗೆ"ಯ ಕಟ್ಟ ಬಿಚ್ಚಿದ ಸುಮುಹೂರ್ತ

ಬರದೋರು :   ಶರ್ಮಪ್ಪಚ್ಚಿ    on   05/08/2013    10 ಒಪ್ಪಂಗೊ

ಹರೇ ರಾಮ,
ನಿನ್ನೆ ನಮ್ಮ ಬೈಲಿನ ದಿನಚರಿಲಿ ಒಂದು ವಿಶೇಶ ದಿನವಾಗಿ ಮೂಡಿ ಬಂತು.
ಬೈಲಿಲ್ಲಿ ಪ್ರಕಟವಾದ ಶುದ್ದಿಗಳ ಸಂಗ್ರಹ ಮಾಡಿ ಅದರ “ಅಟ್ಟಿನಳಗೆ” ಹೇಳ್ತ ಪುಸ್ತಕ ರೂಪಲ್ಲಿ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳ ದಿವ್ಯ ಹಸ್ತಂದ ಲೋಕಾರ್ಪಣೆ ಮಾಡಿದ ಶುಭ ದಿನವೇ ಇದು.
ಇದರೊಟ್ಟಿ೦ಗೆ, ಏಪ್ರಿಲ್ ತಿಂಗಳಲ್ಲಿ ಪುತ್ತೂರಿಲ್ಲಿ ನೆಡದ “ಅಷ್ಟಾವಧಾನ” ಇದರ ಡಿ.ವಿ.ಡಿ ಇದನ್ನೂ ಲೋಕಾರ್ಪಣೆ ಮಾಡಿದ ಶುಭ ದಿನ ಕೂಡಾ.
ಶ್ರೀ ಗುರುಗೋ ಮಹಾ ಮಂಡಲ ಅಧ್ಯಕ್ಷರ ಹತ್ರೆ ಒಪ್ಪಣ್ಣ ಬಳಗ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದು ಹೇಳ್ತ ಸಂದೇಶವನ್ನು ಕೊಟ್ಟಿದವು.
ಗುರಿಕ್ಕಾರ್ರ ಸಮಾವೇಶ ಮತ್ತೆ ಬಾಯಾರು + ಉಡುಪಿ ವಲಯದ ಭಿಕ್ಷಾ ಸೇವೆಯ ಈ ದಿನ ಮೂರು ಸಾವಿರಕ್ಕೂ ಮಿಕ್ಕಿ ಜೆನ ಸೇರಿದ ಈ ಸಭೆಲಿ ಶ್ರಿಗುರುಗಳಿಂದ ಬಿಡುಗಡೆ ಮಾಡಿದ ಅ ಕ್ಷಣ ರೋಮಾಂಚನ ಮಾಡಿದ ದಿವ್ಯ ಸನ್ನಿವೇಶವೇ ಸರಿ.
ಒಂದು ಪುಸ್ತಕ, ಡಿ.ವಿ.ಡಿ ಹೆರ ತರೆಕಾರೆ ಅದಕ್ಕೆ ಇಪ್ಪ ಶ್ರಮ ಅಪಾರ. ಅದರ ಹೀಂಗಿಪ್ಪ ಸಭೆಲಿ ಅಯೋಜನೆ ಮಾದುವದು ಸುಲಭದ ಮಾತಲ್ಲ.
ಇದೆಲ್ಲವನ್ನೂ ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ ನಮ್ಮ ತಂಡದ ಕೆಲಸ ಶ್ಲಾಘನೀಯ.
ಪ್ರತ್ಯಕ್ಷವಾಗಿ ಮತ್ತೆ ಪರೋಕ್ಷವಾಗಿ ನಿರ್ವಹಣೆ ಮಾಡಿದ ತಂಡಕ್ಕೂ, ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಎಲ್ಲೋರಿಂಗೂ ತುಂಬು ಹೃದಯದ ಧನ್ಯವಾದಂಗೊ
ನಮ್ಮ ಮುಂದಾಣ ಕಾರ್ಯಂಗಳಲ್ಲಿಯೂ ಎಲ್ಲರೂ ಈ ರೀತಿ ಕೈ ಜೋಡುಸಿ ಕಾರ್ಯಕ್ರಮಂಗಳ ಯಶಸ್ವಿಗೊಳುಸೆಕ್ಕು ಹೇಳ್ತ ಪ್ರಾರ್ಥನೆಯೊಂದಿಂಗೆ,
ಹರೇ ರಾಮ
ಶರ್ಮಪ್ಪಚ್ಚಿ
~
ಸೂ:

  • ಪುಸ್ತಕ ಬೇಕಾದಲ್ಲಿ ಈ ಶುದ್ದಿಗೆ ಒಪ್ಪ ಕೊಟ್ರಾತು, ಅಲ್ಲದ್ದರೆ ಈ ನಂಬ್ರಕ್ಕೆ ಪೋನುಮಾಡ್ಳಕ್ಕು: 9448271447 / 9448360344 / 9449806563)
  • ಕಾರ್ಯಕ್ರಮದ ಸಂದರ್ಭಲ್ಲಿ ತೆಗದ ಕೆಲವು ಪಟಂಗೊ ಇಲ್ಲಿದ್ದು:
    ಪಟ ತೆಗದ್ದು: ಯೇನಂಕೂಡ್ಳಣ್ಣ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

10 thoughts on “04-ಅಗೋಸ್ತು-2013: ಶ್ರೀಗುರುಗೊ "ಅಟ್ಟಿನಳಗೆ"ಯ ಕಟ್ಟ ಬಿಚ್ಚಿದ ಸುಮುಹೂರ್ತ

  1. ಹರೇರಾಮಾ, ಅಟ್ಟಿನಳಗೆ ಸೂಪರ್. ಒಂದೆಲಗದಷ್ಟು ಲಾಯಿಕಿರ ಜಾನ್ಸಿ ಬಿಡುಸಿ ಓದುವಗ ಲಾಯಿಕಿದ್ದ್ನನ್ನೆ? ಅಡಿಗೆಸತ್ಯಣ್ಣನ ಜೋಕು ಆಪುಸ್ತಕಕ್ಕೆ ಒಂದು ತೂಕ ಹೆಚ್ಹಿಗೆ ಮಾಡ್ತು ಹೇಳ್ತಕ್ಕೆ ಸಂಶಯೈಲ್ಲೆ

  2. ಬೈಲಿನ ಸಾಧನೆಯ ಹಂಚಿಕೊಂಬಲೆ ನವಗೆ ಸಂತೋಷ ಆಗ್ತು..ಇನ್ನು ಮುಂದೆಯು ಗುರುಗಳ ಆಶೀರ್ವಾದಲ್ಲಿ ಬೈಲಿನ ಎಲ್ಲರ ಸಹಕಾರಲ್ಲಿ ಮುಂದಿನ ಯೊಜನೆಗಳೂ ಸಮಾಜಕ್ಕೆ ಕೊಡುಗೆ ಆಗಲಿ ನಾವೆಲ್ಲರು ಸೇರಿ ಅದರ ಮಾಡುವ ಹೇಳಿ ಆಶಿಸುತ್ತೆ..ಶುಭಾಶಯ..

  3. ಹರೇ ರಾಮ,
    ನಮ್ಮ ಬಯಲಿನ ಮತ್ತೊ೦ದು ಸಾಧನೆ ಮತ್ತು ಶ್ರಮಕ್ಕೆ ಮೆಚ್ಚೆಕು..
    ಗುರು ಹಿರಿಯರ ಶುಭ ಹಾರೈಕೆಗೋ ಮತ್ತೆ ನಮ್ಮೆಲ್ಲರ, ಬಯಲಿನ ಮೇಲಿನ ಪ್ರೀತಿ ಇನ್ನು ಹೆಚಿ ಹೆಚ್ಚು ಸಾಧನೆ ಮಾಡ್ಲೆ ಶಕ್ತಿ
    ಕೊಡಲಿ.
    ಈ ದಿಕ್ಕಿನೆಡೆ೦ಗೆ ಶ್ರಮ ಪಟ್ಟ ಎಲ್ಲ ನೆರೆಕರೆಯ ಬಂಧುಗೊಕ್ಕೆ ಅಭಿನಂದನೆಯೂ, ಧನ್ಯವಾದವೂ.

  4. ಹರೇರಾಮ, ಕಾರ್ಯಕ್ರಮ ಸಂಪನ್ನಗೊಂಡ ಫೊಟೊ ಸಹಿತ ಸುದ್ದಿನೋಡಿ ತುಂಬಾ ಸಂತೋಷ ಆತು. ಅಟ್ಟಿನಳಗೆ ಎನ್ನ ಕೈಗೆ ಏವಗ ಬಕ್ಕು ಹೇಳಿ ಎದುರು ನೋಡಿಗೊಂಡಿದ್ದೆದ್ಡಿ

  5. ಹರೇ ರಾಮ. ಶುದ್ದಿ ಓದಿ ಕೊಶಿ ಆತು. ಶ್ರೀ ಗುರುಗಳ ಅನುಗ್ರಹಂದ ಬೈಲಿನ ಅವಿಸ್ಮರಣೀಯ ದಿನ.
    ಪಟಂಗಳೂ ನೋಡಿ ಹೆಮ್ಮಪಟ್ಟುಗೊಂಬಷ್ಟು ಲಾಯಕ ಬೈಂದು.
    ಪ್ರತ್ಯಕ್ಷ ಪರೋಕ್ಷವಾಗಿ ಈ ಕೈಂಕರ್ಯಲ್ಲಿ ದುಡುದ ಎಲ್ಲ ಬಂಧುಗೊಕ್ಕೆ ಅಭಿನಂದನೆಯೂ, ಧನ್ಯವಾದವೂ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×