ರಶ್ಯದ ನ್ಯಾಯಾಲಯಂದ ಗೀತೆಗೆ ನಿಷೇಧ ಇಲ್ಲೆ

ಶ್ರೀಮದ್ಭಗವದ್ಗೀತೆ ಉಗ್ರವಾದವ ಬೆಂಬಲಿಸುತ್ತು ಹೇಳಿ ಕೆಲವು ಜನ ರಶ್ಯದ ಕೋರ್ಟಿಲಿ ಅದರ ನಿಷೇಧ ಮಾಡುಲೆ ಸಲ್ಲಿಸಿದ ಅರ್ಜಿಯ ಆ ನ್ಯಾಯಾಲಯ ನಿನ್ನೆ ತಿರಸ್ಕರಿಸಿತ್ತು.
ಉಗ್ರವಾದ ಈಚೆಗೆ ಹುಟ್ಟಿದ ಒಂದು ಕೊಳಕು ಬೆಳೆ.ಗೀತೆ ಅದಕ್ಕೆ ಎಂತ ಮಾಡಿದ್ದೊ? ಉಗ್ರವಾದ ಮಾಡುವವು ಗೀತೆ ಓದಿಕ್ಕೋ? ನಮಗರಡಿಯ.
ಅಂತೂ ನ್ಯಾಯಾಲಯದ ತೀರ್ಪು ಹಿಂದುಗೊಕ್ಕೆ ಸಂತೋಷದ ಸಂಗತಿ.
ಯಾವುದೇ ಧಾರ್ಮಿಕ ಗ್ರಂಥಂಗಳ [ಪ್ರಚಾರಕ್ಕೆ ಬರದ್ದದಲ್ಲ-ನಿಜವಾಗಿ ತತ್ತ್ವಬೋಧನೆಗೆ ರಚಿಸಲಾದ್ದರ] ನಿಷೇಧ ಸರಿ ಅಲ್ಲ.ಬೇಕಾದವು ಓದಲಿ.ಬೇಡದ್ದವಕ್ಕೆ ಬೇರೆ ದಾರಿ ಇದ್ದು.
ಗೀತೆಲಿ ಕೃಷ್ಣ ಹೇಳುತ್ತ-ಆರಿಂಗೆ ಏವದು ಬೇಕೊ ಅದರ ಆರಾಧಿಸಲಿ ,ಅವರ ಶ್ರದ್ಧೆಯ ಅದೇ ರೀತಿ ನೆರವೇರುಸುದು ಆನು-ಹೇಳಿ.
ಗೀತೆಲಿ ಏವ ಒತ್ತಾಯವೂ ಇಲ್ಲೆ,ಈ ಉಪದೇಶ ಕೇಳಿದೆಯಲ್ಲಾ ಅರ್ಜುನ,ನಿನಗೆ ಹೇಂಗೆ ತೋರುತ್ತೊ ಹಾಂಗೆ ಮಾಡು-ಹೇಳಿ ಕೃಷ್ಣ ಅರ್ಜುನಂಗೆ ಹೇಳುತ್ತ,ಅಖೇರಿಗೆ.
ಗೀತೆಯ ನಿಜವಾಗಿ ಅರ್ಥ ಮಾಡಿಕೊಂಡರೆ ಉಗ್ರವಾದ ಇರ.

ಗೋಪಾಲಣ್ಣ

   

You may also like...

6 Responses

 1. ಚೆನ್ನೈ ಭಾವ says:

  ಒಳ್ಳೆ ಶುದ್ದಿ. ಧನ್ಯವಾದ.

 2. ಶೇಡಿಗುಮ್ಮೆ ಪುಳ್ಳಿ says:

  ರಶ್ಯದ ಕೋರ್ಟಿಲಿ ಇಪ್ಪವಕ್ಕೆ ರಜ್ಜ ಬುದ್ದಿ ಇದ್ದು ಹೇಳಿ ಕಾಣ್ತು. ಬಯಲಿಲಿ ಶುದ್ದಿ ಹಾಕಿದ್ದಕ್ಕೆ ಧನ್ಯವಾದ.

 3. ಗಣೇಶ ಪೆರ್ವ says:

  ಸ೦ತೋಷ. 🙂

 4. ಬೊಳುಂಬು ಮಾವ says:

  ಒಳ್ಳೆ ವಿಚಾರ ಕೇಳಿದ ಹಾಂಗಾತು.

 5. jayashree.neeramoole says:

  ಸಂತೋಷದ ಸುದ್ದಿಯ ಗೋಪಾಲಣ್ಣ ಲಾಯಿಕಲ್ಲಿ ಹೇಳಿದ್ದವು…

 6. ಗೋಪಾಲಣ್ಣಾ,
  ಕಳುದೆರಡುವಾರಂದ ಇದ್ದ ಒಂದು ಬೇಜಾರ ಈ ಶುದ್ದಿ ಕಂಡಪ್ಪಗ ದೂರ ಆತು.
  ಭಗವಂತನೇ ಹೇಳಿದ ಮಾತುಗೊ ಈಗ ಉಗ್ರಗಾಮಿತ್ವ ಹೊಂದಿದ್ದಡ.

  ಅಂಬಗ, ಉಗ್ರಗಾಮಿಗಳ ಕೈಲಿಪ್ಪ ಕುರಾನು ಶಾಂತಿಮಂತ್ರ ಹೇಳಿದ್ದೋ?
  ಶಾಂತಿಃ ಶಾಂತಿಃ ಶಾಂತಿಃ!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *