ದೇವಕಣವ ಕಂಡವಡ..

July 5, 2012 ರ 8:15 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜಗತ್ತಿಲಿ ಇಪ್ಪ ವಸ್ತುಗೊಕ್ಕೆ ದ್ರವ್ಯರಾಶಿ[ಮಾಸ್] ಇಪ್ಪಲೆ ಕಾರಣ ಎಂತರ ಹೇಳಿ ಸಂಶೋಧನೆ ಮಾಡಿದ ಜಿನೇವಾದ ನ್ಯೂಕ್ಲಿಯರ್ ಫಿಸಿಕ್ಸ್ ನ ಯೂರೋಪಿಯನ್ ಸಂಸ್ಥೆಯವರು ಅದಕ್ಕೆ ಕಾರಣ ಹೇಳಿ ನಂಬಲಾದ ಹಿಗ್ಸ್ ಬೋಸಾನ್ ಹೇಳಿ ಹೆಸರಿಸಲಾದ ಕಣ ಇದ್ದು ಹೇಳಿ ಕಂಡವಡ.
ಈ ಕಣವ ಕೆಲವರು ದೇವ ಕಣ ಹೇಳಿ ಹೇಳುತ್ತವು. ದೇವರಿಂಗೂ ಇದಕ್ಕೂ ನೇರ ಸಂಬಂಧ ಇಲ್ಲೆ.
ಸೃಷ್ಟಿಗೆ ಕಾರಣ ಎಂತರ ಹೇಳಿ ಇನ್ನೂ ಸೈಂಟಿಸ್ಟುಗೊ ಪತ್ತೆ ಹಚ್ಚೆಕ್ಕಷ್ಟೆ.
ಆದರೆ ಸೈಂಟಿಸ್ಟುಗೊ ಮಾಡುವ ಜಾಣ ಊಹೆಗೊ ಆ ಮೇಲೆ ಸರಿ ಹೇಳಿ ಕಂಡು ಬಪ್ಪದು ಆಶ್ಚರ್ಯಕರ.
ಸತ್ಯೇಂದ್ರನಾಥ ಬೋಸ್ ಹೇಳುವ ಭಾರತೀಯ ಭೌತಶಾಸ್ತ್ರಕೋವಿದ ಸುಮಾರು ಐವತ್ತು ವರುಷ ಮೊದಲೇ ಈ ವಿಷಯ ಹೇಳಿದ ಕಾರಣ ಈ ಕಣವ ಬೋಸಾನ್ ಹೇಳಿ ದಿನುಗೋಳಿದ್ದವು.
ನಮ್ಮ ವೇದಾಂತಲ್ಲಿ ಸೃಷ್ಟಿಯ ರಚನೆಗೆ ಕಾರಣ ವಿವರಿಸಿದ್ದವಲ್ಲದೊ-ಅದಕ್ಕೆ ಹತ್ತರೆ ಹತ್ತರೆಗೆ ಸೈಂಟಿಸ್ಟುಗೊ ಬಂದು ತಲ್ಪಿದವು ಹೇಳಿ ಕೆಲವರ ಅಭಿಪ್ರಾಯ.
ಏನೇ ಇರಲಿ,ಸೃಷ್ಟಿ ಒಂದು ವಿಚಿತ್ರ,ಅದು ವಿಚಿತ್ರವಾಗಿಯೇ ಒಳುದ್ದು.ಅವರವರ ಭಾವಕ್ಕೆ ಭಕ್ತಿಗೆ ತಕ್ಕಂತೆ ಅದರ ಅರ್ಥ ಮಾಡಿಕೊಳ್ತವು!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಇಪ್ಪದು ನಾಕು ಗೆರೆ ಆದರೂ ಗೋಪಾಲಣ್ಣನ ಅಕೇರಿಯಾಣ ಸಾಲು ಒಳ್ಳೆ ಮರ್ಮವ ಕೊಟ್ಟತ್ತು ಹೇಳಿ ಹೇಳುತ್ತು – ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ವಿಜ್ಹಾನ ಎಷ್ಟು ಬೆಳದರೂ ಪ್ರಕೃತಿ ಅದಕ್ಕೆ ಸವಾಲು ಹಾಕುತ್ತಲೇ ಇರುತ್ತು. ಮನುಷ್ಯಂಗೆ ಸೃಷ್ಟಿಯ ವಿಚಿತ್ರವ ಅರ್ಥ ಮಾಡಿಗೊಂಡು ಪ್ರತಿಯೊಂದನ್ನೂ ತನ್ನ ನಿಯಂತ್ರಣಲ್ಲಿ ತಪ್ಪಲೆ ಎಂದೆಂದೂ ಸಾಧ್ಯ ಇಲ್ಲೇ. ಈ ಸತ್ಯವ ಅರ್ಥ ಮಾಡಿಗೊಂಡು ಮನುಷ್ಯ ಯಾವಾಗ ಪ್ರಕೃತಿಗೆ ಸಂಪೂರ್ಣ ಶರಣು ಆವುತ್ತನೋ ಅಂದು ಪ್ರಕೃತಿ ಎಲ್ಲವನ್ನೂ ಅವನ ನಿಯಂತ್ರಣಕ್ಕೆ ಕೊಡುತ್ತು. ಇದು ವಿಚಿತ್ರ ಆದರೂ ಸತ್ಯ!!!

  ಇದರ ಸರಳ ಉದಾಹರಣೆಯ ಮೂಲಕ ವಿವರಿಸುತ್ತೆ. ಸಾಮಾನ್ಯವಾಗಿ ಸ್ತ್ರೀಯರಲ್ಲಿ ‘ಪ್ರಕೃತಿ’ ಗುಣ ಜಾಸ್ತಿ ಇರುತ್ತು. ಗಂಡಸರಲ್ಲಿ ‘ಪುರುಷ’ ಗುಣ ಜಾಸ್ತಿ ಇರುತ್ತು. ಯಾವ ಗಂಡಸಿನ್ಗೂ ಬಾಹು ಬಲದ ಮೂಲಕ ಸ್ತ್ರೀಯ ನಿಯಂತ್ರಣಲ್ಲಿ ಮಡುಗುಲೇ ಸಾಧ್ಯವೇ ಇಲ್ಲೇ. ಸ್ತ್ರೀಯ ಒಲಿಸಿಗೊಂಡರೆ ದೇವತಾಸ್ವರೂಪಿಣಿಯಾಗಿ ಬೇಕು ಬೇಕಾದ್ದರ ಕೊಡುತ್ತು.

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಇದಕ್ಕೆ ಪೂರಕವಾಗಿ ಈ ಎರಡು ಲೇಖನಂಗಳ ಓದಿದೆ… ಇಷ್ಟ ಆತು.
  http://nimmodanevrbhat.blogspot.in/2012/07/blog-post_05.html

  http://nimmodanevrbhat.blogspot.in/2012/07/blog-post_03.html

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಈ ಪ್ರಪ೦ಚಲ್ಲಿ ಎಲ್ಲವೂ ಸರಾಗವಾಗಿ ನೆಡೆತ್ತಾ ಇಪ್ಪದೇ ಒ೦ದು ವಿಸ್ಮಯ. ಅವರವರ ಭಾವಕ್ಕೆ-ಸರಿಯಾದ ಮಾತು ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 4. ಬೋದಾಳ
  ಬೋದಾಳ

  ಅಲ್ಲಿದೇ ನಮ್ಮ ಶಿವನ ಮೂರ್ತಿ ಮಡಗಿದ್ದವಡಾ… ಹೆದರಿಕೆ ಅಪ್ಪದಕ್ಕಾದಿಕ್ಕು. ಒಂದು ವೇಳೆ ಎಲ್ಯಾರೂ ಪ್ರಯೋಗ ತಪ್ಪಿ ಲ್ಯಾಬು ಹೊಟ್ಟಿರೆ ಮೃತ್ಯುಂಜಯನೇ ಕಾಪಾಡಲಿ ಹೇದು.

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಇದಕ್ಕೆ ಬೊಸನ್ ಕಣ ಹೇಳಿ ಹೆಸರು ಮಡಗಿದ್ದು ಐನ್ ಸ್ಟೀನ್. – ಸತ್ಯೇಂದ್ರನಾಥ್ ಬೋಸ್ ಹೇಳ್ತ ಭಾರತೀಯನ ಹೆಸರು.ಬೋಸ್ ಕಂಡು ಹಿಡಿದ “Quantum Statistics” theory , sub atomis particle ನ ಬಗ್ಗೆ ಆವಿಷ್ಕಾರಕ್ಕೆ ಕಾರಣ ಆತು, ಅದಕ್ಕೆ ಐನ್ ಸ್ಟೀನ್ ಬೋಸರ ಗೌರವಾರ್ಥಲ್ಲಿ ಬೋಸನ್ ಕಣ ಹೇಳಿ ಹೆಸರು ಮದಗಿದ್ದಡ. ಈಗ ಮಾಡಿದ ಆವಿಷ್ಕಾರಲ್ಲಿ ಭಾರತದ contribution ಗಣನೀಯ ಹೇಳಿ ಯುರೋಪಿಯನ್ ಸಂಸ್ಥೆ ಹೇಳಿದ್ದವು. ಗೋಪಾಲಣ್ಣ ಹೇಳಿದ ಹಾಂಗೆ, ನಮ್ಮ ವೇದಾಂತದ ತತ್ವ ಆಧರಿಸಿ ಈ ಸಂಶೋಧನೆ ಮಾಡಿದವೋ ಹೇಳ್ತದು ಕುತೂಹಲ.

  [Reply]

  VN:F [1.9.22_1171]
  Rating: 0 (from 0 votes)
 6. ಗಣೀಶ

  ಲಾಐಕ್ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 7. ದೊಡ್ಮನೆ ಭಾವ

  ನಮ್ಮ ವೇದ-ವೇದಾ೦ತದಲ್ಲಿ ಅಡಗಿದ ಬಹಳಷ್ಟು ವಿಷಯಗಳನ್ನ ಮೊದಮೊದಲು ಗೇಲಿ ಮಾಡಿದ ಪಾಶ್ಚ್ಯಾತ್ಯರು ಮತ್ತು ಹಲವು ವಿಜ್ಞಾನಿಗಳು ಹ೦ತಹ೦ತವಾಗಿ ಅನೇಕ ವಿಷಯಗಳನ್ನ ಒಪ್ಕೊ೦ಡಿದ ಅನ್ನದು ಸತ್ಯ.
  ನ೦ಗ್ಳ ದೌರ್ಬಲ್ಯ ಎ೦ಥದು ಅ೦ದ್ರೆ, ನಾಲ್ಕೈದು ಸಾವಿರ ವರ್ಷಗಳಿ೦ದ ಋಷಿಮುನಿಗಳು ಕ೦ಡುಕೊ೦ಡ ಸತ್ಯಗಳನ್ನ ಇ೦ದಿನ ವೈಜ್ಞಾನಿಕ ಜಗತ್ತು ಕೇಳಿಸಿಕೊಳ್ಳುವ ರೀತಿ ಹೇಳುಕ್ಕೆ ನ೦ಗ್ಳಿಗೆ ಬರ್ತಿಲ್ಲೆ! ಅದ್ರು ಮೇಲೆ, ವಿದೇಶಿಯರು ಎ೦ಥಾದರೂ ಕ೦ಡುಹಿಡ್ದ೦ಗೆ ಮಾಡಿ ಭಾರತದ ರೆಫ಼ೆರೆನ್ಸ್ ಕೊಟ್ರೆ ಸಾಕು ನ೦ಗ್ಲು ಕಾಲರ್ ಸರಿ ಮಾಡ್ಕಳ್ತ!
  ಮೊದ್ಲಿಗೆ ಇಲ್ಲಿಗೆ ಬ೦ದ ಹಲವು ಯಾತ್ರಿಕರು ಭಾರತೀಯರಿಗೆ ರೋಗಗಳಿಗೆ ಹ್ಯಾ೦ಗೆ ಔಷಧಿ ಮಾಡುದು ಗೊತ್ತಿಲ್ಲೆ ಅ೦ದ, ಶಸ್ತ್ರ ಚಿಕಿತ್ಸೆಯ ಗ೦ಧಗಾಳಿ ಗೊತ್ತಿಲ್ಲೆ ಅ೦ತ ನೂರಾರು ವರ್ಷ ಪ್ರಚಾರ ಮಾಡ್ದ. ಅರೆ ಬರೆ ಬಟ್ಟೆ ಹಾಕಿಕೊಳ್ಳುವ ಅನಾಗರೀಕರು ಅ೦ತ ಬರೆದ.
  ಈಗ?
  ಜಗತ್ತಿನ ಮೊಟ್ಟಮೊದಲ ಶಸ್ತ್ರ ಚಿಕಿತ್ಸಾ ತಜ್ಞ ಸುಶ್ರುತ ಅ೦ತ ಮೆಡಿಕಲ್ ವಿಧ್ಯಾರ್ಥಿಗಳಿಗೆ ಕ್ಲಾಸಲಿ ಹೇಳಿಕೊಡ್ತ. ಯೋಗ-ಆಯುರ್ವೇದಗಳನ್ನ ವಿದೇಶಲ್ಲಿ ಕಲಿಸಿಕೊಡಲು ನಮ್ಮಲ್ಲಿ೦ದ ಡಿಗ್ರಿ ತಗ೦ಡು ಹೋಗ್ತಾ ಇದ್ದ.ಭಗವದ್ಗೀತೆಯೇ ಜಗತ್ತಿನ ಶ್ರೇಷ್ಠ ಗ್ರ೦ಥ ಅ೦ಬ.
  ಅದೇ ಕಚ್ಚೆ ಪ೦ಚೆ ಶಲ್ಯ ಹಾಕಿ ಜುಟ್ಟು ಬಿಟ್ಟ ಚಾಣಕ್ಯನ ಅರ್ಥ ಶಾಸ್ತ್ರಾನ ಅರ್ಥಮಾಡ್ಕಳಲೆ ಆಕ್ಸ್ಫ಼ರ್ಡ್,ಕೇ೦ಬ್ರಿಡ್ಜ್ ನಲ್ಲಿ ಡಾಕ್ಟರೇಟ್ ಮಾಡೂ ವಿಧ್ಯಾರ್ಥಿ ಹೆಣಗಾಡ್ತ.ಇ೦ಥಾ ಉದಾಹರಣೆ ಒ೦ದಾ ಎರಡಾ?
  ಸಮಯೋಚಿತವಾಗಿ ವಿಷ್ಯ ಚರ್ಚೆಗೆ ತ೦ದ ಗೋಪಾಲಣ್ಣ೦ಗೆ ಧನ್ಯವಾದಗೊ.

  [Reply]

  VN:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಅನು ಉಡುಪುಮೂಲೆದೀಪಿಕಾವಾಣಿ ಚಿಕ್ಕಮ್ಮಜಯಗೌರಿ ಅಕ್ಕ°ಸುಭಗಮುಳಿಯ ಭಾವಅಜ್ಜಕಾನ ಭಾವಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಪುಣಚ ಡಾಕ್ಟ್ರುನೆಗೆಗಾರ°ಗೋಪಾಲಣ್ಣಬೋಸ ಬಾವಸರ್ಪಮಲೆ ಮಾವ°ಬಟ್ಟಮಾವ°ಡಾಗುಟ್ರಕ್ಕ°ಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಕಜೆವಸಂತ°vreddhiವಿಜಯತ್ತೆದೇವಸ್ಯ ಮಾಣಿಅಕ್ಷರ°ಪವನಜಮಾವಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ