Oppanna.com

ಕಸಾಬ್‌ನ ಗಲ್ಲಿಂಗೆ ಏರಿಸಿದವಡ

ಬರದೋರು :   ಡೈಮಂಡು ಭಾವ    on   21/11/2012    18 ಒಪ್ಪಂಗೊ

ಡೈಮಂಡು ಭಾವ

ಪುಣೆ: ಬೊಂಬಾಯಿಯ ಮೇಗೆ 2008ರ ನವಂಬರ 26ಕ್ಕೆ ಬಾಂಬು ಹಾಕಿ, ಗುಂಡಿನ ದಾಳಿ ಮಾಡಿ ನೂರಾರು ಜೆನರ ಕೊಂದ ಭಯೋತ್ಪಾದಕ ಅಜ್ಮಲ್‌ ಕಸಾಬಿನ ಇಂದು ಉದಿಯಪ್ಪಗ ಏಳೂವರೆ ಗಂಟೆಗೆ ಪುಣೆಲಿ ಇಪ್ಪ ಯರವಾಡ ಜೈಲಿಲ್ಲಿ ಗಲ್ಲಿಂಗೆ ಏರಿಸಿದವಡ.

ಕ್ಷಮಾದಾನ ಕೊಡೆಕ್ಕು ಹೇಳಿಗೊಂಡು ಅದು ರಾಷ್ಟ್ರಪತಿಗೊಕ್ಕೆ ಮನವಿ ಮಾಡಿತ್ತಿದು. ಆದರೆ ಅವು ಆ ಮನವಿಯ ವಜಾ ಮಾಡಿತ್ತಿದವು.

18 thoughts on “ಕಸಾಬ್‌ನ ಗಲ್ಲಿಂಗೆ ಏರಿಸಿದವಡ

  1. ಎನಗೆ ಅನುಮಾನ ಇಪ್ಪ ಪ್ರಕಾರ ಆ ಕಸಬ್ಬು (ಇಸುಬ್ಬಿನ ಎರಡ್ಣೇ ಮಗ) ಜ್ವರಲ್ಲೇ ಸತ್ತದು. ಆದರೆ ಅಲ್ಲಿ ಜ್ವರ ಬಂದು ಸತ್ತತ್ತು ಹೇದು ಗೊಂತಾದರೆ ಪ್ರಪಂಚದಾದ್ಯಂತ ಅಲ್ಲೋಲ ಕಲ್ಲೋಲ ಅಕ್ಕು, ಕೈದಿಗೊಕ್ಕೆ ರಕ್ಷಣೆ ಇಲ್ಲೆ, ಅಮಾನವೀಯವಾಗಿ ನಡಕ್ಕೊಂಡಿದವು, ಇತ್ಯಾದಿ ಹೇದು . ಹಾಂಗಾಗಿಯೇ ಅದರ ಗಲ್ಲಿಂಗೇರ್ಸಿದ್ದು ಹೇದು ಪ್ರಚಾರ ಮಾಡಿ ಎಂಗಳೆ ದೊಡ್ಡ ಜನ ಹೇದು ಮಾಡಿತ್ತು ಸೋನ್ಯ ಗಾಂಧಿ. ಆರಿಂಗೂ ತೋರ್ಸದ್ದೆ, ಗುಟ್ಟಾಗಿ ಹುಗುದ್ದು ಎಂತಕ್ಕೆ ಹೇದು ಅರ್ತ ಆತಾ ……..?

    1. ಏ ಭಾವ ಎನಗೇನೂ ಹಾಂಗೆ ತೋರ್ತುಲ್ಲೆ. ಗಲ್ಲಿಂಗೇರ‍್ಸುವ ಕ್ರಮ ಹೀಂಗೆ ಹೇಳಿ ತುಂಬ ಜೆನ ಹೇಳ್ತವಪ್ಪ… ಪಾಕಿಸ್ತಾನಲ್ಲಿ ಇಪ್ಪ ಅದರ ಕುಟುಂಬ ಶವ ತೆಕ್ಕೊಂಡೋವ್ತೆಯಾ° ಹೇಳಿ ಹೇಳಿತ್ತವಿಲ್ಲೆಡಾ.

  2. ಅಕೇರಿಗೆ ಕಸಬಿನ ಕತೆ ಕಸವಿಗಿಂತ ಕಡೆ ಆತು.
    ಆದರೆ ಅದರ ಕೊಂದ ಮಾತ್ರಕ್ಕೆ ಭಯೋತ್ಪಾದನೆ ಎಂತ್ಸು ಕಮ್ಮಿ ಆಗ. ನಮ್ಮೊಳದಿಕ್ಕೇ ಸುಮಾರು ಭಯೋತ್ಪಾದಕಂಗೊ ಬೆಳದು ನಿಂತಿದವು. ಅವರೆಲ್ಲರನ್ನೂ ಗಲ್ಲಿಂಗೇರಿಸೆಕ್ಕು.

  3. ಇಂದಿನ ಸುದ್ದಿಯ ಇಂದು ತಿಳಿಸಿದ್ದು ಸಮಯೊಚಿತ. ರಾಜಕಿಯ ಡೈಮಂಡ್ ಬಾವನಿಂದ ಹೆಚ್ಹು ಹೆಚ್ಹು ಬರಲಿ

  4. ಏ ಭಾವ ನಿಂಗೊ ಡೈಮಂಡು ಭಾವ° ಆದ್ದು ಏವತ್ತು? 🙂
    ಆಯೆಕ್ಕಾದ್ದರ ಮಾಡ್ಲೆ ಇಷ್ಟು ವರ್ಷ ಎಂತಕೆ ತೆಕ್ಕೊಂಡವೋ? 🙁

    1. ಏ ಭಾವ ನಾವು ಡೈಮಂಡು ಭಾವ ಆಗಿ ಕೆಲವು ತಿಂಗಳುಗಳೇ ಆಗಿ ಹೋತಿದಾ…. 🙂

      1. ನಾವು ಇನ್ನು ಮುಂದೆ ಕೊರೆಂಗು ಭಾವ° 🙂

  5. ಎನಗೇಕೋ ಸಂಶಯ ಭಾವಾ,
    ಇದರ ಕೊಂದದಾಗಿರ. ಇದು ನುಸಿ ಕಚ್ಚಿ ಸತ್ತದಾದಿಕ್ಕು. “ಹೇಂಗೂ ಸತ್ತಿದನ್ನೆ, ರಜ್ಜ ಹೆಸರು ಮಾಡುವೊ°” ಹೇಳಿ “ಗಲ್ಲಿಂಗೆ ಹಾಕಿದೆಯೊ°” ಹೇಳಿ ಹೇಳಿದ್ದಾದಿಕ್ಕು..

    1. ಅದಕ್ಕೆ ಬಿರಿಯಾಣಿ ಸಪ್ಲೈ ಮಾಡಿಗೊಂಡಿತ್ತ ಮನುಷ್ಯಂಗೆ ಹೇಂಗಾದಿಕ್ಕೋ ! ಃ))

  6. ಹೇಂಗಾರೂ ಆತನ್ನೆ. ಯೋ, ಎಷ್ಟು ಖರ್ಚು ಮಾಡಿದವಪ್ಪ ಅದಕ್ಕೆ ಬೇಕಾಗಿ.

    1. ಈಗಳಾದರೂ ಗಲ್ಲಿಂಗೆ ಹಾಕಿದವನ್ನೆ..
      ಇಲ್ಲದ್ದರೆ ಇನ್ನಾಣ ಬಜೆಟ್ಟಿಲಿ “terrorist promotional expenses” ಹೇಳಿ ಒಂದು head ಮಾಡೆಕಾವುತ್ತಿತ್ತು…

  7. ಈಗಾದರೂ ಮನಸ್ಸು ತೋರಿತ್ತನ್ನೆ!
    ದೇಶದ ಇತರ ಹಲವು ವಿಷಯಂಗಳನ್ನೂ ಈ ರೀತಿ ಮದಲೇ ಪ್ರಚಾರ ಮಾಡಿದ್ದೇ ಕಾಲಹರಣ ಮಾಡ್ತರರ ತಪ್ಪಿಸಿರೆ ನಮ್ಮ ಅನೇಕ ಸಮಸ್ಯೆಗೊಕ್ಕೆ ಶೀಘ್ರಪರಿಹಾರ ಸಿಕ್ಕುಗು. ಆದರೆ.., ಇನ್ನೂ ನಿಗೂಢವಾಗಿಪ್ಪದು.. ಅದೇಂತಕೆ ಪತ್ರಿಕೆಗಳಲ್ಲಿ ದೂರದರ್ಶನಲ್ಲಿ ಚರ್ಚೆ ವಿಮರ್ಶೆ ಮಾಡದ್ದೆ ಇದರ ಕತೆ ಮುಗುಶಿದವು ?!!

    1. ಚರ್ಚೆ ಮಾಡ್ಲೆ ಬಿಟ್ಟರೆ, ಆ ರಿಪೋರ್ಟರ್’ಗ ಎಲ್ಲ ಸೇರಿ ಎರಡು ‘ಜಾತ್ಯಾತೀತವಾದಿ’ಗಳ ತಂದು “ಕೊಲ್ಲಲೆಡಿಯ” ಹೇಳ್ಸುಗು ಹೇಳಿಯೋ ಎನೋ? 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×