ಮನೆ ದಾನದ ದ್ವಿಶತಕ

ನಿನ್ನೆಯ ಪತ್ರಿಕೆಗಳಲ್ಲಿ ಒಂದು ಮುಖ್ಯ ಸುದ್ದಿ.
ಕಿಳಿಂಗಾರಿನ[ಬೇಳದ ಹತ್ತರೆ] ಗೋಪಾಲಕೃಷ್ಣ ಭಟ್ಟರು ಸಮಾಜಸೇವೆಲಿ ದೊಡ್ಡ ಹೆಸರು. ಸಾಯಿರಾಂ ಭಟ್ರು ಹೇಳಿಯೇ ಅವಕ್ಕೆ ಹೆಸರು.ಕುಡಿವ ನೀರಿನ ಪೂರೈಕೆ,ಉಚಿತ ಸಾಮೂಹಿಕ ವಿವಾಹ,ಉಚಿತ ವೈದ್ಯಕೀಯ ಶಿಬಿರ,ಬಡವರಿಂಗೆ ಮನೆ ಕಟ್ಟಿಸಿ ಕೊಡುದು-ಹೀಂಗೆ ಅನೇಕ ವರ್ಷಂದ ಮಾಡುತ್ತಾ ಬೈಂದವು.
ಅವು ಕಟ್ಟಿಸಿ ದಾನ ಮಾಡುವ ೨೦೧ನೇ ಮನೆಯ ಬೀಗದ ಕೈಯ ಹಸ್ತಾಂತರ ಮೊನ್ನೆ ಆದಿತ್ಯವಾರ ನಡೆದತ್ತಡ.ಕೇರಳದ ಗ್ರಾಮಾಭಿವೃದ್ಧಿ ಮಂತ್ರಿ ಕೆ.ಸಿ.ಜೋಸೆಫ್ ಮತ್ತೆ ದೊಡ್ಡ ನಾಯಕರೆಲ್ಲಾ ಬಂದ ಈ ಕಾರ್ಯಕ್ರಮಲ್ಲಿ ಫಲಾನುಭವಿ ಗೀತಾ ಪಾಟಾಳಿಗೆ ಬೀಗದ ಕೈ ಕೊಟ್ಟವು.
ಸಾಯಿರಾಮ ಭಟ್ಟರ ಬಗ್ಗೆ ಇತ್ತೀಚೆಗೆ ಮಲಯಾಳದ ಪತ್ರಿಕೆಯೊಂದರಲ್ಲಿ ವಿಸ್ತಾರದ ಲೇಖನ ಬಯಿಂದು.
ಅವರ ಸಾಧನೆಯ ಬಗ್ಗೆ ಅಭಿನಂದನೆ ಹೇಳುವೊ.

ಗೋಪಾಲಣ್ಣ

   

You may also like...

10 Responses

 1. ಗೋಪಾಲ ಬೊಳುಂಬು says:

  ಸಾಯಿರಾಂ ಭಟ್ಟರು ಮಾಡ್ತಾ ಇಪ್ಪ ಸಮಾಜ ಸೇವೆ ನಿಜವಾಗಿಯೂ ಅಭಿನಂದನೀಯ. ೨೦೧ನೇ ಹೊಸ ಮನೆಯ ಕಟ್ಟುಸಿ ಪಾಪದವಕ್ಕೆ ಕೊಡ್ತಾ ಇಪ್ಪ ವಿಷಯವ ಆನುದೆ ಪೇಪರಿಲ್ಲಿ ಓದಿದೆ. ಇದು ನಮ್ಮ ಸಮಾಜಕ್ಕೇ ಹೆಮ್ಮೆಯ ವಿಷಯ.

 2. ಅಭಿನ೦ದನೆಗೊ, ಸಾಯಿರಾ೦ಭಟ್ಟರಿ೦ಗೆ.

 3. ಚೆನ್ನೈ ಭಾವ° says:

  ಅಪರೂಪಲ್ಲಿ ಒಬ್ಬ°. ಅಭಿನಂದನೆಗೊ. ದೇವರು ಅವಕ್ಕೆ ಎಲ್ಲಾ ಸೌಭಾಗ್ಯವ ಅನುಗ್ರಹಿಸಲಿ ಹೇಳಿ ಹಾರೈಸುವೊ°.

 4. ಶರ್ಮಪ್ಪಚ್ಚಿ says:

  ಹೀಂಗಿಪ್ಪ ದಾನಿಗೊ ತೀರಾ ವಿರಳ.
  ಅಭಿನಂದನೆಗೊ

 5. raghumuliya says:

  ಸಮಾಜಸೇವಾ ಮನೋಭಾವವ ಬೆಳೆಶುವವು ಅಪ್ರೂಪ ಆದ ಈ ಕಾಲಲ್ಲಿ ಯೇವದೇ ಪ್ರಚಾರ ಇಲ್ಲದ್ದೆ ಮಾಡುವ ಈ ಸೇವೆ ನವಗೆಲ್ಲಾ ಮಾದರಿಯಾಗಲಿ.ಸಾಯಿರಾ೦ ಭಟ್ಟರ ಹಾ೦ಗಿಪ್ಪ ಜೆನರ ಸ೦ಖ್ಯೆ ಸಮಾಜಲ್ಲಿ ಇನ್ನೂ ಹೆಚ್ಚಾಗಲಿ ಹೇಳಿ ಶುಭ ಹಾರೈಸುವ.

 6. ಹರೀಶ್ ಕೇವಳ says:

  ಅಭಿನಂದನೆಗೊ

 7. ರಾಜನಾರಾಯಣ ಹಾಲುಮಜಲು says:

  ಒಳ್ಳೆ ಮಾಹಿತಿ ಗೋಪಾಲಣ್ಣ , ಇವರ ಬಗ್ಗೆ ಪೂರ್ತಿಯಾಗಿ ಗೊಂತಾದರೆ ಒಳ್ಳೇದಿತ್ತು.

  ದನ್ಯವಾದ೦ಗೊ

 8. ಮಾನೀರ್ ಮಾಣಿ says:

  ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
  ಪರಿಣಾಮವಕ್ಕು ಪದವಕ್ಕು – ಕೈಲಾಸ
  ನೆರೆಮನೆಯಕ್ಕು ಸರ್ವಜ್ಞ

  ಸಾಯಿರಾ೦ ಭಟ್ರಿಗೆ ಶುಭವಾಗಲಿ . ಅಭಿನ೦ದನೆಗಳು. ನಮ್ಮ ಸಮಾಜಕ್ಕೆ ಇವರೆಲ್ಲಾ ಮಾದರಿಯಾಗಲಿ. ಇ೦ಥವರ ಸ೦ಖ್ಯೆ ಇಮ್ಮಡಿಯಾಗಲಿ ಎ೦ಬ ಹಾರೈಕೆ.

  ಮಾಹಿತಿ ಹಂಚಿಕೊಂಡ ಗೋಪಾಲಣ್ಣ೦ಗೆ ಧನ್ಯವಾದ .

 9. ತೆಕ್ಕುಂಜ ಕುಮಾರ ಮಾವ° says:

  ಒಂದು ಸರಕಾರ, ಅಥವಾ ಸಂಘಟನೆ, ಅಥವಾ ಪಕ್ಷ ಮಾಡದ್ದ ಘನ ಕಾರ್ಯವ ಮಾಡ್ತಾ ಇಪ್ಪ “ಸಾಯಿ ರಾಂ” ಭಟ್ರಿಂಗೆ ನಮೋ ನಮಃ.

 10. ಸಾಯಿರಾಂ ಭಟ್ರಿಂಗೆ ಅಭಿನಂದನೆ. ಮನೆದಾನ ಸಹಸ್ರಕ್ಕೂ ಮೀರಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *