ಸಂಪನ್ನತೆಲಿ ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ

ಸಂಪನ್ನತೆಲಿ  ಸಂಸ್ಕೃತ  ವಾಗ್ವರ್ಧನ   ಕಾರ್ಯಾಗಾರ

ಸಂಸ್ಕೃತ ದೇವ ಭಾಷೆ. ವೇದಭಾಷೆ, ಆದಿಭಾಷೆಯೂ ಅಪ್ಪು.ಸಂಸ್ಕೃತಂದಲೇ ಸಂಸ್ಕಾರ, ಸಂಸ್ಕೃತಿ, ಇದರಿಂದಲೇ ನಮ್ಮ ಪುರೋಭಿವೃದ್ಧಿ, ಎಲ್ಲವೂ!.ಒಟ್ಟಿಲ್ಲಿ ನಮ್ಮ ಅಪೂರ್ವ ಸಂಪತ್ತು.!!.ಈ ಮಾತು ಜನ ಸಾಮಾನ್ಯರು ಹೇಳಿದ್ದಲ್ಲ!!!.ನಮ್ಮ ಶ್ರೀ ಸಂಸ್ಥಾನ ಆಶೀರ್ವಚನಲ್ಲಿ ಹೇಳಿದ್ದದರ ಕೇಳಿದ್ದೆ.ಆದರೆ ಈಗೀಗ ಸಂಸ್ಕೃತ ಭಾಷೆ ಮೂಲೆಗುಂಪಾಗಿ ಹೋಯಿದು!.ಸಂಸ್ಕೃತ ಭಾಷೆಯ ವಿಶೇಷ ಜ್ಞಾನ ಇಲ್ಲದ್ದವಕ್ಕೂ ಭಾರತೀಯ ಕಾಲಗಣನೆಯ ವೈಶಿಷ್ಟ್ಯ ಪರಿಚಯ, ಸಂಸ್ಕೃತ ಶ್ಲೋಕಂಗಳ ಸಂದಿಗ್ಧತೆಯ ನಿವಾರಣೆ,ಈ ಭಾಷೆಯ ಉಚ್ಛಾರ, ಸೂಕ್ಷ್ಮ ಪರಿಚಯ ಮಾಡಿ, ಈ ನಿಟ್ಟಿಲ್ಲಿ ಆಸಕ್ತಿ ಇಪ್ಪವಕ್ಕೆ ಹೆಚ್ಚಿನ ತಿಳುವಳಿಕೆ ಕೊಡ್ಳೆ ಒಂದು ಶಿಬಿರ ನೆಡೆಶಿಕೊಟ್ಟವು ನಮ್ಮ ಒಪ್ಪಣ್ಣ ಬಯಲಿನೊಟ್ಟಿಂಗೆ ಮುಳ್ಳೆರಿಯ ಹವ್ಯಕ ಮಂಡಲ ಧರ್ಮಶಾಖೆವು. ಇದಲ್ಲಿ  ಭಾಗವಹಿಸುವ ಅವಕಾಶ ಎನಗೂ ಸಿಕ್ಕಿತ್ತು. ಕಾರಣ, ಈ ಕಾರ್ಯಾಗಾರ ಆದ್ದದು ಮುಜುಂಗಾವು ವಿದ್ಯಾಪೀಠಲ್ಲಿ.

ಕಾರ್ಯಾಗಾರಃ- ಉದಿಯಪ್ಪಗ ಶಂಖಧ್ವನಿಂದ ತೊಡಗಿ, ಉದ್ಘಾಟನೆ ವೇದಮೂರ್ತಿ ಕೋಣಮ್ಮೆ ಮಹಾದೇವಣ್ಣ ಮಾಡಿದೊವು.ವೇದಮೂರ್ತಿ ಕೋಟೆಲು ಕೇಶವಣ್ಣನ ನಿರೂಪಣೆಲಿ ಕಾರ್ಯಕ್ರಮ ಸುರುವಾತು.ವೇದಿಕೆಲಿ ಅಧ್ಯಕ್ಷರಾದ ಮಾಸ್ತ್ಟ್ರುಮಾವ,ಶ್ರೀಯುತ ಬಾಲಕೃಷ್ಣ ಶರ್ಮ- ನಿವೃತ್ತ ಸಂಸ್ಕೃತ ಅಧ್ಯಾಪಕರು, ಶರ್ಮಪ್ಪಚ್ಚಿ, ಮುಜುಂಗಾವು ಶಾಲೆ ಆಡಳಿತ ಸಮಿತಿ ಕಾರ್ಯದರ್ಶಿ ಸತ್ಯಶಂಕರಣ್ಣ ಹಿಳ್ಳೆಮನೆ,ವೇದಮೂರ್ತಿ ಗಣೇಶ ಭಟ್ ಮಾಡಾವು, ಶಾಲೆಯ ಆಡಳಿತಾಧಿಕಾರಿ ಶ್ಯಾಂಭಟ್ ದರ್ಬೆ-ಮಾರ್ಗ, ಹೀಂಗೆ ಕೆಲವು ಮಹನೀಯರಿದ್ದಿದ್ದವು.ಈ ಕಾರ್ಯಕ್ರಮಕ್ಕೆ ನಮ್ಮ ಶ್ರೀ ಸಂಸ್ಥಾನ ಆಶೀರ್ವಾದ ಸಂದೇಶ ಕರುಣಿಸಿದ ಸಿ.ಡಿ ವೀಡಿಯೋವನ್ನೂ ಹಾಕಿ ಶಿಬಿರಾರ್ಥಿಗೊಕ್ಕೆ ತೋರ್ಸಿದ್ದೊಂದು ವಿಶೇಷ.ಮತ್ತೆ…, ಒಪ್ಪಣ್ಣ ಮಲೇಶಿಯಲ್ಲಿದ್ದರೂ ಇಲ್ಲೇ ಇದ್ದಹಾಂಗೆ ನೆಂಪುಮಾಡಿಗೊಂಡವು. ಶಿಬಿರಾರ್ಥಿಗೊಕ್ಕೆ ಒಂದು ಕೈಚೀಲ ಹಂಚಿದೊವು.ಅದಲ್ಲಿ; ಒಂದು ಪೆನ್ನು,ಒಂದು ನೋಟುಬುಕ್,ಹಾಂಗೇ ಬೆಳಿ ಕಾಗದಲ್ಲಿ, ಟೈಪ್ಮಾಡಿ ಪ್ರಿಂಟ್ ತೆಗದ ಕಾಗದಂಗಳ ಕೈಪಿಡಿ ಪುಸ್ತಕ ಮೂರು ಇತ್ತು.ಈ ಕೈಪಿಡಿ ವಿಶೇಷ ಪ್ರಯೋಜನ ಆವುತ್ತಾಂಗಿದ್ದು.ಇದರ ಹೊಂದಿಗೊಂಡು ಡಾ|ಮಹೇಶಣ್ಣ ಶಿಬಿರಾರ್ಥಿಗೊಕ್ಕೆ ಪಾಠಮಾಡಿದೊವು.

ಡಾ|ಮಹೇಶಣ್ಣನ ಪಾಠಃ-  [ಇದಲ್ಲಿ ಪಾಠದ ಸಾರಾಂಶ ಮಾಂತ್ರ ಹೇಳ್ತೆ.] ವಿಭಕ್ತಿರೂಪ,ಕ್ರಿಯಾರೂಪಂಗಳ,ಅದಕ್ಕೆ     ಹೊಂದಿಕೊಂಡು,ವಚನಂಗೊ, ಅದರ ಪ್ರಯೋಗದ ರೀತಿ ಹೇಂಗೇಳಿ ವಿವರಣೆ.ಮಾಹೇಶ್ವರ ಸೂತ್ರವ ಹೇಳಿಕ್ಕಿ ವೈಶಿಷ್ಟ್ಯಹೇಳಿದೊವು. ೧೪ ಸೂತ್ರ ಇಪ್ಪ ಇದರ ಉಪಯೋಗಿಸಿ ಸಂಸ್ಕೃತ ವ್ಯಾಕರಣ ರಚನೆಮಾಡಿ ಲೋಕಕ್ಕೆ     ಪರಿಚಯಿಸಿದ     ಮಹಾತ್ಮನೇ ಪಾಣಿನೀ.ಇದರಿಂದಾಗಿ ಇದು ’ಪಾಣಿನೀ ಸೂತ್ರ’ಹೇಳಿ ಪ್ರಸಿದ್ಧ.

ಡಾ| ಸದಾಶಿವಣ್ಣನ ಪಾಠಃ-  ಒಳಿತು-ಕೆಡುಕುಗಳ ಪರೋಕ್ಷವಾಗಿ ತಿಳುಶುತ್ತ; ಸಾಲುಗೊ ಸುಭಾಷಿತ.  ಇವರ ಪಾಠಲ್ಲಿ      ಆನು ವಿಶೇಷವಾಗಿ ಹೀರಿಗೊಂಡದು…ನಾಲ್ಕು ವಿಧದ ಮನುಷ್ಯರ ಸ್ವಭಾವ, ಅದಕ್ಕೆ ಹೊಂದಿಕೊಂಡ ಸುಭಾಷಿತಂಗೊ-        ಉದಾಃ-೧.ಸತ್ಪುರುಷರುಃ-ಅವರವರ ಸುಖ,ಸಂತೋಷ ತ್ಯಾಗಮಾಡಿ ಬೇರೆಯವರ ಸುಖ,ಸಂತೋಷಕ್ಕೆ ಸ್ಪಂಧಿಸುತ್ತೊವು. ೨,ಮಧ್ಯಮ ವರ್ಗದವುಃ-ತಮ್ಮ ಸುಖ,ಸಂತೋಷದ ಒಟ್ಟಿಂಗೆ ಇನ್ನೊಬ್ಬಂಗೆ ಸಹಾಯ ಮಾಡುವವು.೩.ಮಾನವ ರೂಪದ ರಾಕ್ಷಸರುಃ-ತಮ್ಮ ಸುಖ,ಸಂತೋಷಕ್ಕಾಗಿ ಇನ್ನೊಬ್ಬರ ಸುಖ,ಸಂತೋಷವ ಹಾಳುಮಾಡುವವು.೪.ಅಧಮರುಃ-ಸ್ವಂತಕ್ಕೂ ಬೇರೆಯವಕ್ಕೂ ಯಾವುದೇ ಪ್ರಯೋಜನ ಇಲ್ಲದ್ದ ಕೆಲಸ ಮಾಡುವವು. ಹಾಂಗೇ ವಿದ್ಯೆಯ ಮಹತ್ವ,ಮಾತಿನ ಪ್ರಾಧಾನ್ಯತೆ,ಸಂಪತ್ತಿನ ಮಹತ್ವ ಹೇಳಿಕ್ಕಿ[ಕೊಟ್ರೆ ಕರಗುವ, ಕೊಟ್ರೆ ಅಧಿಕ ಅಪ್ಪಸಂಪತ್ತಿನ ಬಗ್ಗೆ],ಉದಾಹರಣೆ ಕೊಟ್ಟು; ಹಲವಾರು ಶತಮಾನಂಗಳ ಹಿಂದೆ ’ಭರ್ತೃಹರಿ’ ಲೋಕಕ್ಕೆ ಕೊಟ್ಟ ಈ ಸುಭಾಷಿತಂಗೊ ಇಂದಿಂಗೂ ಅದೆಷ್ಟು ಪ್ರಸ್ತುತಃ ಹೇಳಿದೊವು.

ಶ್ರೀ ಲೋಹಿತ ಶರ್ಮಃ-  ಕರ್ಮ,ಮರ್ಮದ ಬಗ್ಗೆ ಮಾತಾಡಿ;ಧಾರ್ಮಿಕ ಕಾರ್ಯಕ್ರಮಂಗಳಲ್ಲಿ 18 ಅಂಶಂಗಳಲ್ಲಿ ತಯಾರಾಯೆಕ್ಕು.ಉದಾಃ ಒಂದು ಮರ ಬೆಳವಣಿಗಗೆ ಒಂದು ಬೀಜ ಬಿತ್ತೇಕ್ಕಾರೆ; ಯೋಗ್ಯ ಮಣ್ಣು, ನೆಲ, ಹವೆ,ನೀರು,ಗೊಬ್ಬರ ಬೇಕೋ ಹಾಂಗೇ ವೈದಿಕ ಕರ್ಮಕ್ಕೂ ಹಾಂಗಿದ್ದ ಸಲಕರಣೆ ಬೇಕು. ಸಂಕಲ್ಪಕ್ಕೆ ಹೊಂದಿಕೊಂಡು ಕ್ರಿಯಾತ್ಮಕವೂ ಬೇಕು. ಹೇಳಿದೊವು.

ಇನ್ನು ಸಮಾರೋಪಃ-  ಮಹಾ ವಿದ್ವಾಂಸ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟ ಮಾವ ಸಮಾರೋಪಲ್ಲಿ ಮಾತಾಡಿದ್ದದರ ಎಲ್ಲೊರೂ ಮಂತ್ರಮುಗ್ಧರಾಗಿ ಕೇಳಿದೊವು.ಇಲ್ಲಿ ನಿರೂಪಣೆ ನಮ್ಮ ಶ್ರೀಯಕ್ಕ ಚೊಕ್ಕಕೆ ಮಾಡಿತ್ತು. ಮತ್ತೆ ಒಂದೆರಡು ಜೆನ ಶಿಬಿರಾರ್ಥಿಗೊ ಅಭಿಪ್ರಾಯ ಹೇಳಿದೊವು.ಎನಗೂ ಇನ್ನು ಅಮರ ಕೋಶದ ಶ್ಲೋಕಂಗಳ ದಿನಕ್ಕೆರಡರ ಹಾಂಗಾದರೂ ಬಾಯಿಪಾಠ  ಕಲಿಯೆಕ್ಕೂಳಿ ಆತು.ಎನ್ನಪ್ಪಂ ಎಂಗೊ ಸಣ್ಣದಿಪ್ಪಗ “ಅಮರಕೋಶ ಬಾಯಿಪಾಠ ಕಲ್ತರೆ ಸಂಸ್ಕೃತ ವಾಕ್ಯ ಮಾಡ್ಳೆ ಬಹುಸುಲಭ” ಹೇಳುಗು.  ಮನಸ್ಸಿಂಗೆ ಬಂದದರ ಹೇಳಿದೆ.  ಮುಂದೆ ಸತ್ಯಶಂಕರ ಹಿಳ್ಳೆಮನೆ, ಶರ್ಮಪ್ಪಚ್ಚಿ, ಅಧ್ಯಕ್ಷರಾದ ಮಾಸ್ಟ್ರಮಾವ ಮಾತಾಡಿದೊವು. ವೇದಮೂರ್ತಿ ಗಣೇಶ ಮಾಡಾವು ಧನ್ಯವಾದದೊಟ್ಟಿಂಗೆ ಕಾರ್ಯಾಗಾರ ಮುಗುದತ್ತು.ಶ್ರೀಗುರುಗಳ ಸ್ಮರಿಸುತ್ತಾ  ಕಾರ್ಯಾಗಾರ ನೆಡೆಶಿಕೊಟ್ಟ ಬಯಲಿನ ಮುಖ್ಯಸ್ತರಿಂಗೆ,ಮುಳ್ಳೆರಿಯ ಹವ್ಯಕ ಮಂಡಲ ಧರ್ಮಶಾಖೆವಕ್ಕೆ ತುಂಬು ಮನಸ್ಸಿಲ್ಲಿ ಧನ್ಯವಾದಂಗೊ.

ಎನ್ನಂದ ಕಿರಿಯರಿಂಗೆ,ಸಂಸ್ಕೃತ ಅಭ್ಯಾಸ ಇಲ್ಲದ್ದವಕ್ಕೆ ಎನ್ನದೊಂದು ಪಿಸು ಮಾತುಃ-  ಕಾರ್ಯಾಗಾರ ಇದ್ದು ಹೇಳುವಗ ಕೆಲಾವು ಜೆನರ ಪ್ರತಿಕ್ರಿಯೆ ಹೀಂಗೆ.. “ಸಂಸ್ಕೃತ ಭಾಷೆ ರಜ್ಜ ಆದರೂ ಗೊಂತಿಲ್ಲದ್ದೊವು ಅಲ್ಲಿ ಎಂತ ಮಾಡುದು!?” ಹೇಳಿತ್ತಿದ್ದೊವು. ಇದಲ್ಲಿ ಭಾಗವಹಿಸಿಯಪ್ಪಗ ಗೊಂತಾತು ಸಂಸ್ಕೃತದ ಅಕ್ಷರಾಭ್ಯಾಸ ಮಾಂತ್ರ ಇದ್ದರೂ; ಒಂದು ವೇಳೆ ಅಕ್ಷರಾಭ್ಯಾಸ ಇಲ್ಲದ್ದ್ರೂ ಇಲ್ಲಿ ಡಾ| ಮಹೇಶಣ್ಣ ಹೇಳಿದ್ದು ಗೊಂತಕ್ಕು!.ಎಂತಕೆ ಕೇಳ್ತೀರೊ?. ಸಂಸ್ಕೃತ ಶ್ಲೋಕ ಕನ್ನಡಲ್ಲಿರುತ್ತನ್ನೆ!. ಇದೆಂತಕೆ ಆನುಇಲ್ಲಿ ಉಲ್ಲೇಖಿಸಿದ್ದೂಳಿರೆ…, ಸಂಸ್ಕೃತ ಭಾಷೆಲಿ ಆಸಕ್ತಿ ಹುಟ್ಟೀರೆ ಅದರ ಒಳಹೊಕ್ಕರೆ; ಮತ್ತೆ ಒಂದೊಂದೇ ಮೆಟ್ಳು ಮೇಗೆ ಹೋಪಲಕ್ಕು.ಬಯಲಿನವು ಹೀಂಗೊಂದು ಹೆರಟದಕ್ಕೂ ಸಾರ್ಥಕತೆ ಬಕ್ಕು. ಆನು ಶಾಲೆಲಿ ಸಂಸ್ಕೃತ ಕಲ್ತೋಳಲ್ಲ.ಆದರೆ, ಕಲ್ತವರ ಎಡೆಲಿ ಬೆಳದ್ದಿದ. ಎನ್ನಪ್ಪಂ ಸಂಸ್ಕೃತ ಶಿರೋಮಣಿ ಆದೊವು. ತಂಗೆಕ್ಕೊ ತಮ್ಮಂದ್ರೆಲ್ಲ ಶಾಲೆಲಿ ಸಂಸ್ಕೃತ ಕಲ್ತವು. ಆನು ಏಳನೇ ವರೆಗೆ ಕಲ್ತ ಕಳತ್ತೂರು[ಇಚ್ಲಂಪಾಡಿ]ಶಾಲೆಲಿ ಅಂಬಗ ಸಂಸ್ಕೃತ ಇತ್ತಿಲ್ಲೆ. ಮತ್ತೆ ಎಸ್.ಎಸ್.ಎಲ್.ಸಿ. ವರೆಗೆ ನೀರ್ಚಾಲು ಮಹಾಜನ ಸಂಸ್ಕೃತ ಶಾಲೆಲಿ ಕಲ್ತೆ. ಆದರೆ ಅಲ್ಲಿ ೫ನೇಂದಲೇ ಆ ಸಬ್ಜೆಕ್ಟ್ ತೆಕ್ಕಳೆಕ್ಕೂಳಿ ನಿಯಮ ಇತ್ತು. ಇದರಿಂದಾಗಿ ಎನಗೆ ಸಂಸ್ಕೃತಕ್ಕೆ ಖೋತಾ!. ಆದರೂ ಮುಜುಂಗಾವಿಲ್ಲಿ[ಗ್ರಂಥಪಾಲಿಕೆಯಾಗಿ] ಸೇರಿದ ಮೇಲೆ ಸಂಸ್ಕೃತ ಪುಸ್ತಕಂಗಳ ಹೆಸರು ಬರವಲೆ ಕಷ್ಟ ಆಯಿದಿಲ್ಲೆ. ಕಾರಣ, ’ಹಿಂದಿ’  ಗೊಂತಿದ್ದತ್ತು.ಮತ್ತೆ ಪುಸ್ತಕದ ವಿವರ ಇಂಗ್ಲಿಷಿಲ್ಲಿ ಬರೆಕಪ್ಪದನ್ನೆ!.ಈ ವಿವರಂಗಳ ಎಂತಕೆ ಹೇಳಿದೆ ಕೇಳಿರೆ..,ಎನ್ನ ಹಾಂಗಿದ್ದ ಉದಾಹರಣೆ[ಕನ್ನಡ ಲಿಪಿಲಿ ಸಂಸ್ಕೃತ ಶ್ಲೋಕ, ಸ್ತೋತ್ರ ವಗೈರೆ ಗೊಂತಿಪ್ಪವಕ್ಕೆ]ವು ಹೀಂಗಿದ್ದ ಶಿಬಿರಕ್ಕೆ ಬಂದು ಭಾಗವಹಿಸಿರೆ;ಅವಕ್ಕೂ ಅವರ ನಂತ್ರದ ಮಕ್ಕೊಗೂ ಉಪಕಾರ ಬೇಕಪ್ಪಷ್ಟಿದ್ದು!.ಮಕ್ಕಳಲ್ಲಿ ಆಸಕ್ತಿ ಮೂಡೆಕ್ಕಾರೆ ಅಬ್ಬೆಕ್ಕೊಗೆ ಮದಾಲು ಆಸಕ್ತಿ ಬೇಕಿದ. ಏವದೇ ಕಾರ್ಯ ಮಾತೃ ವಿಭಾಗಂದ ಸರಿಯಾಗಿ ಆಯೆಕ್ಕೂಳಿ ನಮ್ಮ ಶ್ರೀ ಗುರುಗಳ ಮಾತೇ ಇದ್ದನ್ನೆ!. ನಿಂಗೊ ಎಂತ ಹೇಳ್ತಿ?.

~~~~***~~~

ವಿಜಯತ್ತೆ

   

You may also like...

2 Responses

  1. ಚೆನ್ನೈ ಭಾವ° says:

    ಕಾರ್ಯಕ್ರಮದ ವರದಿ , ಪಟಂಗೊ ಲಾಯಕ ಮೂಡಿಬಯಿಂದು. ವಿಜಯತ್ತೆ ಮಾತುಗೊ ನಿಜಕ್ಕೂ ಸ್ಫೂರ್ತಿದಾಯಕ. ಬೇಕು ಹೇಳಿ ಆಸಕ್ತಿಲಿ ತೆಕ್ಕೊಂಡ್ರೆ ಖಂಡಿತ ಉತ್ಸಾಹ ಮತ್ತೆ ಉಕ್ಕಿಬತ್ತು ಹೇಳ್ತದು ವಿಜಯತ್ತೆಯ ಮಾತಿಲ್ಲಿಯೇ ಗೊಂತಾತಿದ. ಒಪ್ಪ ಕೆಲಸ ಆತಿದು, ಇಂತಹ ಇನ್ನೂ ಕಾರ್ಯಕ್ರಮಂಗೆ ಹಲವು ದಿಕ್ಕೆ ಆಯೇಕು, ಸಂಸ್ಕೃತ ಸಂಸ್ಕೃತಿ ನಮ್ಮಲ್ಲಿ ಪ್ರಕಾಶಿಸಿ ಎದ್ದು ಕಾಣೆಕು ಹೇಳ್ಸು ನಮ್ಮ ಆಶಯ. ಹರೇ ರಾಮ. ಶುದ್ದಿಗೊಂದು ಒಪ್ಪ.

  2. S.K.Gopalakrishna Bhat says:

    ಲಾಯಕ ಆಯಿದು. ಸಂಸ್ಕೃತ ಎಲ್ಲರೂ ಕಲಿಯೇಕ್ಕಾದ ಭಾಷೆ.ಸಂಸ್ಕೃತ ಕಲ್ತರೆ ಕನ್ನಡವೂ ಸುಲಭ ಆವ್ತು. ಮಲಯಾಳವೂ ಸರೀ ಬಕ್ಕು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *