2014: ಬೈಲಿಂಗೆ 6ನೇ ವರ್ಷಕ್ಕೆ ಹೊಸ ಅಂಗಿ – Responsive Theme

January 1, 2014 ರ 6:31 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ,
ಬೈಲು ಅಂತರ್ಜಾಲಲ್ಲಿ ಪ್ರಕಟ ಆಗಿ ಆರು ವರ್ಷ ಆತು.
2009 ರ ಜನವರಿಂದ ಆರಂಭ ಆಗಿ ನಿತ್ಯವೂ ಹವ್ಯಕ ಸರಸ್ವತಿ ಸೇವೆಮಾಡಿಗೊಂಡು ಬತ್ತಾಇಪ್ಪ ನಮ್ಮೆಲ್ಲರ ಈ ಪ್ರೀತಿಯ ಬೈಲಿಂಗೆ ಇಂದು ಆರರ ಸಂಭ್ರಮ.
ನಿಂಗಳ ಎಲ್ಲೋರ ಸಹಕಾರ, ಪ್ರೀತಿಂದಾಗಿ ಬೈಲು ಯಶಸ್ವಿಯಾಗಿ ಬೆಳದು ಬತ್ತಾ ಇದ್ದು.
ಆರನೇ ವರ್ಷ ಸಂಭ್ರಮಲ್ಲಿ ಬೈಲಿಂಗೆ ಒಂದು ಹೊಸ ಅಂಗಿ ಮಾಡಿ ಕೊಟ್ಟಿದವು ನಮ್ಮ “ಸಂಕೊಳಿಗೆ ಬಾಬಣ್ಣ”.

ಹೊಸ ಅಂಗಿಯ ವಿಶೇಷತೆಗೊ:

 • Fast, Simple ವೇಗವಾಗಿ, ಚೊಕ್ಕವಾಗಿರ್ತು.
 • Responsive Theme ಹೇದರೆ – ನಾವು ಯಾವ ದಾರಿಯಾಗಿ ಬೈಲಿಂಗೆ ಬತ್ತೋ – ಆ ದಾರಿಗೆ ಸರಿಯಾಗಿ ಬೈಲು ಪ್ರಕಟ ಆವುತ್ತು. Computer, Mobile Devices, iPhone, iPad – ಇತ್ಯಾದಿ ಸಾಧನಂಗೊಕ್ಕೆ ಸರಿಯಾಗಿ ಬೈಲು ಪ್ರಕಟಗೊಳ್ಳುತ್ತು.
 • ಹೊಸ ಟೆಕ್ನಾಲಜಿ ಹೊಚ್ಚ ಹೊಸ ವರ್ಶನ್ CMS, Ajax, Database ವ್ಯವಸ್ಥೆಗಳ ಒಳಗೊಂಡಿದು.

ಇನ್ನೂ ಹತ್ತು ಹಲವಿದ್ದು.

ಅನುಗ್ರಹಿಸಿದ ಶ್ರೀಗುರುಗಳಿಂಗೆ, ಪ್ರೀತಿಂದ ಸಾಂಕಿ ಬೆಳೆಶಿದ ನೆರೆಕರೆಯೋರಿಂಗೆ, ಶುದ್ದಿಗೊಕ್ಕೆ ಒಪ್ಪ ಕೊಟ್ಟ ಬೈಲಿನೋರಿಂಗೆ, ಹೊಸ ಅಂಗಿ ಹೊಲುಶಿ ಕೊಟ್ಟ ಸಂಕೊಳಿಗೆ ಬಾಬಣ್ಣಂಗೆ –
ಎಲ್ಲೋರಿಂಗೆ ವಂದಿಸುತ್ತಾ,
ಹೊಸ ದಾರಿಯ ಎದುರು ನೋಡ್ತಾ ಇದ್ದು ಬೈಲು.

ಎಲ್ಲೋರ ಪ್ರೀತಿ ಹೀಂಗೇ ಮುಂದುವರಿಯಲಿ.
ನೂರಾರು ವರ್ಷ ಈ ಬೈಲು ಚೆಂದಕೆ ನೆಡೆಯಲಿ.
ಎಲ್ಲೋರಿಂಗೂ ಸದ್ಬುದ್ಧಿ ಆಯುರಾರೋಗ್ಯವ ಆ ಗುರು-ದೇವರುಗೊ ಒದಗುಸಿ ಕೊಡ್ಳಿ ಹೇದು ನಮ್ಮೆಲ್ಲರ ಆಶಯ.

ಹರೇರಾಮ
~
ಬೈಲಿನ ಪರವಾಗಿ

ಬೈಲಿನ ಹಳೆ ಅಂಗಿಯ ಪಟ, ನೆಂಪಿಂಗೆ!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಮುಣ್ಚಿಕಾನ ಭಾವ

  ಅಭಿನಂದನೆಗೋ….

  ಬೈಲಿಲಿ ಇನ್ನೂ ಹೊಸ ಹೊಸ ರೀತಿಯ ಶುದ್ದಿಗಳ ನಿರೀಕ್ಷಿಸುತ್ತಾ ಇದ್ದೆ… ಉದಾಹರಣೆಗೆ: ಹವ್ಯಕ ಮಾಣಿಗೊಕ್ಕೆ ಕೂಸು ಹುಡ್ಕುಲೆ, ಕೆಲಸ ಹುಡ್ಕುಲೆ ಮುಂತಾದ ವಿಶಯಂಗಳ ಬಗ್ಗೆ ಬೈಲಿಲಿ ಬರೇಕು.

  [Reply]

  VA:F [1.9.22_1171]
  Rating: 0 (from 0 votes)
 2. ನವೋ ನವೋ ಭವತಿ ಜಾಯಮಾನಃ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಬೈಲ ಜನ್ಮದಿನಕ್ಕೆ ಹೊಸ ಅಂಗಿ ಧರಿಸಿ ಬಂದಪ್ಪಗ ಶ್ರೀಸಂಸ್ಥಾನ ಆಶೀರ್ವದಿಸಿದ್ದು ಬೈಲಿಂಗೆ ನವಚೈತನ್ಯ ನವಸ್ಪೂರ್ತಿ ನವ ಉತ್ಸಾಹ ಸಿಕ್ಕಿದಾಂಗೆ ಆತು.

  ಶ್ರೀಗುರುಚರಣಾರವಿಂದಕ್ಕೆ ಬೈಲ ಸಾಷ್ಟಾಂಗ ನಮನಂಗೊ. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹರೇರಾಮ, ಬಯಲಿಂಗೆ ಹೊಸ ಅಂಗಿ ಬಂದದು ಚೆಂದ ಕಾಣುತ್ತು. ಮೊನ್ನೆ ಕಾಂಚನಲ್ಲಿ ಶ್ರೀ ಗುರುಗೊ ಹೇಳಿದ್ದು ನೆಂಪಾವುತ್ತು.ಬದಲಾವಣೆ ಬೇಕು,ನಿಂತ ನೀರಪ್ಪಲಾಗ , ಆದರೆ ಅದರಿಂದ ಅಭಿವೃದ್ಧಿಯೂ ಕಾಣೆಕ್ಕೂಳಿ . ಆ ಶ್ರೀ ವಾಣಿ ಪೂರಕವಾಗಿದ್ದು. ನಮ್ಮ ಬಯಲಿನ ಸಂತಾನ ಸರಸ್ವತಿಗೊಂದು ಸಾಷ್ಟಾಂಗ ನಮಸ್ಕಾರ.

  [Reply]

  VN:F [1.9.22_1171]
  Rating: 0 (from 0 votes)
 4. ವೇಣೂರಣ್ಣ

  ಹರೇರಾಮ ಬಯಲಿಂಗೆ ಹೊಸ ಅಂಗಿ ಬಂದದು ಭಾರೀ ಚೆಂದ ಕಾಣುತ್ತು. ಹಳತ್ತುದೇ ಲಾಯಕ್ಕಿತ್ತಿದು. ಹೊಸ ಹೊಸ ರೂಪ ಹೊಸ ಚಿಂತನೆಗಳಿಂದ ಒಪ್ಪಣ್ಣ ಸಮೃದ್ಧವಾಗಲಿ ಹೇಳಿ ಹಾರೈಸುತ್ತೆ

  [Reply]

  VN:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಆರು ವರ್ಷದ ಮಾಣಿ ಹೊಸ ಅಂಗಿ ಹಾಕೆಂಡು ಚೆಂದ ಕಾಣ್ತಾ ಇದ್ದ. ಹೊಸ ಹೊಸ ವಿಷಯಂಗವಕ್ಕೆ ಹೊಂದಿಕೊಂಡು ಬೆಳವಣಿಗೆ ಹೊಂದುತ್ತ ಇಪ್ಪದರ ಕಂಡು ಕೊಶಿ ಆತು. ಸಂಸ್ಥಾನದ ಆಶೀರ್ವಾದವುದೆ ಮಾಣಿಗಿಪ್ಪದು ಸಂತೋಷದ ವಿಷಯ. ಅಭಿನಂದನೆಗೊ ಒಪ್ಪಣ್ಣ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಪೆಂಗಣ್ಣ°ಶಾಂತತ್ತೆಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿಶರ್ಮಪ್ಪಚ್ಚಿವೇಣೂರಣ್ಣಪುಟ್ಟಬಾವ°ವಿನಯ ಶಂಕರ, ಚೆಕ್ಕೆಮನೆಪುಣಚ ಡಾಕ್ಟ್ರುಮಂಗ್ಳೂರ ಮಾಣಿಗಣೇಶ ಮಾವ°ಅಡ್ಕತ್ತಿಮಾರುಮಾವ°ಚುಬ್ಬಣ್ಣಶ್ಯಾಮಣ್ಣಮಾಲಕ್ಕ°ಮುಳಿಯ ಭಾವಶುದ್ದಿಕ್ಕಾರ°ವಿದ್ವಾನಣ್ಣಜಯಶ್ರೀ ನೀರಮೂಲೆಶಾ...ರೀಉಡುಪುಮೂಲೆ ಅಪ್ಪಚ್ಚಿಹಳೆಮನೆ ಅಣ್ಣಬಟ್ಟಮಾವ°ಎರುಂಬು ಅಪ್ಪಚ್ಚಿಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ