2014: ಬೈಲಿಂಗೆ 6ನೇ ವರ್ಷಕ್ಕೆ ಹೊಸ ಅಂಗಿ – Responsive Theme

ಹರೇರಾಮ,
ಬೈಲು ಅಂತರ್ಜಾಲಲ್ಲಿ ಪ್ರಕಟ ಆಗಿ ಆರು ವರ್ಷ ಆತು.
2009 ರ ಜನವರಿಂದ ಆರಂಭ ಆಗಿ ನಿತ್ಯವೂ ಹವ್ಯಕ ಸರಸ್ವತಿ ಸೇವೆಮಾಡಿಗೊಂಡು ಬತ್ತಾಇಪ್ಪ ನಮ್ಮೆಲ್ಲರ ಈ ಪ್ರೀತಿಯ ಬೈಲಿಂಗೆ ಇಂದು ಆರರ ಸಂಭ್ರಮ.
ನಿಂಗಳ ಎಲ್ಲೋರ ಸಹಕಾರ, ಪ್ರೀತಿಂದಾಗಿ ಬೈಲು ಯಶಸ್ವಿಯಾಗಿ ಬೆಳದು ಬತ್ತಾ ಇದ್ದು.
ಆರನೇ ವರ್ಷ ಸಂಭ್ರಮಲ್ಲಿ ಬೈಲಿಂಗೆ ಒಂದು ಹೊಸ ಅಂಗಿ ಮಾಡಿ ಕೊಟ್ಟಿದವು ನಮ್ಮ “ಸಂಕೊಳಿಗೆ ಬಾಬಣ್ಣ”.

ಹೊಸ ಅಂಗಿಯ ವಿಶೇಷತೆಗೊ:

 • Fast, Simple ವೇಗವಾಗಿ, ಚೊಕ್ಕವಾಗಿರ್ತು.
 • Responsive Theme ಹೇದರೆ – ನಾವು ಯಾವ ದಾರಿಯಾಗಿ ಬೈಲಿಂಗೆ ಬತ್ತೋ – ಆ ದಾರಿಗೆ ಸರಿಯಾಗಿ ಬೈಲು ಪ್ರಕಟ ಆವುತ್ತು. Computer, Mobile Devices, iPhone, iPad – ಇತ್ಯಾದಿ ಸಾಧನಂಗೊಕ್ಕೆ ಸರಿಯಾಗಿ ಬೈಲು ಪ್ರಕಟಗೊಳ್ಳುತ್ತು.
 • ಹೊಸ ಟೆಕ್ನಾಲಜಿ ಹೊಚ್ಚ ಹೊಸ ವರ್ಶನ್ CMS, Ajax, Database ವ್ಯವಸ್ಥೆಗಳ ಒಳಗೊಂಡಿದು.

ಇನ್ನೂ ಹತ್ತು ಹಲವಿದ್ದು.

ಅನುಗ್ರಹಿಸಿದ ಶ್ರೀಗುರುಗಳಿಂಗೆ, ಪ್ರೀತಿಂದ ಸಾಂಕಿ ಬೆಳೆಶಿದ ನೆರೆಕರೆಯೋರಿಂಗೆ, ಶುದ್ದಿಗೊಕ್ಕೆ ಒಪ್ಪ ಕೊಟ್ಟ ಬೈಲಿನೋರಿಂಗೆ, ಹೊಸ ಅಂಗಿ ಹೊಲುಶಿ ಕೊಟ್ಟ ಸಂಕೊಳಿಗೆ ಬಾಬಣ್ಣಂಗೆ –
ಎಲ್ಲೋರಿಂಗೆ ವಂದಿಸುತ್ತಾ,
ಹೊಸ ದಾರಿಯ ಎದುರು ನೋಡ್ತಾ ಇದ್ದು ಬೈಲು.

ಎಲ್ಲೋರ ಪ್ರೀತಿ ಹೀಂಗೇ ಮುಂದುವರಿಯಲಿ.
ನೂರಾರು ವರ್ಷ ಈ ಬೈಲು ಚೆಂದಕೆ ನೆಡೆಯಲಿ.
ಎಲ್ಲೋರಿಂಗೂ ಸದ್ಬುದ್ಧಿ ಆಯುರಾರೋಗ್ಯವ ಆ ಗುರು-ದೇವರುಗೊ ಒದಗುಸಿ ಕೊಡ್ಳಿ ಹೇದು ನಮ್ಮೆಲ್ಲರ ಆಶಯ.

ಹರೇರಾಮ
~
ಬೈಲಿನ ಪರವಾಗಿ

ಬೈಲಿನ ಹಳೆ ಅಂಗಿಯ ಪಟ, ನೆಂಪಿಂಗೆ!

Admin | ಗುರಿಕ್ಕಾರ°

   

You may also like...

28 Responses

 1. ಬಾಲಣ್ಣ (ಬಾಲಮಧುರಕಾನನ) says:

  ಹೊಸ ಅಂಗಿ ಹೊಲುಶಿದವಕ್ಕೂ,ಹೊಲುದವಕ್ಕೂ ಒಪ್ಪಂಗೊ. ವಿನ್ಯಾಸ ಒಳೇದಾಯಿದು.

 2. ತೆಕ್ಕುಂಜ ಕುಮಾರ ಮಾವ° says:

  ಒಪ್ಪಣ್ಣನ ಹೊಸಂಗಿಲಿ ಚೆಂದ ಕಾಣುತ್ತು.

 3. ಕೆ. ವೆಂಕಟರಮಣ ಭಟ್ಟ says:

  ಹಾಯ್ ಒಪ್ಪಣ್ಣಾ, ಹೊಸ ವರ್ಷಕ್ಕೆ ಹೊಸ ಅಂಗಿ ಚೆಂದ ಕಾಣ್ತು. ಹಾಂಗೇ ಒಪ್ಪಣ್ಣನ ಬ್ಯಾಗಿಲ್ಲಿ ಹೊಸ ವಿಷಯಂಗೊ ತುಂಬಲಿ. ಹರೇ ರಾಮ. ಕೆ. ವಿ. ಭಟ್.

 4. ಹರೇರಾಮ ಗುರಿಕ್ಕಾರ್ರೇ!
  ಬೈಲು, ಬೆಳವಣಿಗೆಯ ಇನ್ನೊಂದು ಮೆಟ್ಲು ಹತ್ತುತ್ತಾ ಇಪ್ಪ ಈ ಶುಭ ಸಂದರ್ಭಲ್ಲಿ ಹೊಸ ಅಂಗಿಯೂ ಹಾಕಿಯೊಂಡು ಸಂಭ್ರಮಲ್ಲಿಪ್ಪದರ ಕಾಂಬಗ ಕೊಶೀ ಆವುತ್ತು. ಬೈಲಿಂಗೆ ಹೊಸ ಅಂಗಿಯ ಗುರಿಕ್ಕಾರ್ರು ಹಾಕ್ಸಿದ್ದದು ಚೆಂದ ಆಯಿದು, ತೆಯಾರು ಮಾಡಿಕೊಟ್ಟ ಸಂಕೊಳಿಗೆ ಬಾಬಣ್ಣಂಗೆ ಧನ್ಯವಾದಂಗೊ.

  ಮಕ್ಕೊ ನಮ್ಮ ಕಣ್ಣೆದುರೇ ದಿನೇ ದಿನೇ ಬೆಳವದರ ಕಾಂಬಲೆ ಹೇಂಗೆ ಅಬ್ಬೆ-ಅಪ್ಪಂಗೆ ಕೊಶಿ ಆವುತ್ತೋ, ಅದೇ ನಮುನೆಲಿ ಈ ಬೈಲು ಬೆಳವದರ ಕಾಂಬದುದೇ ಕೊಶಿಯ ವಿಚಾರವೇ!
  ಶ್ರೀಗುರುಗಳ ಅನುಗ್ರಹಲ್ಲಿ, ಬೈಲಿನ ನೆಂಟ್ರುಗಳ ಹವ್ಯಕಸರಸ್ವತೀ ಸೇವೆಯ ಈ ಅಕ್ಷರ ಯಜ್ಞಲ್ಲಿ ಸಾಹಿತ್ಯ ಬಂಡಾರ ತುಂಬಿಗೊಂಡು ಬೈಲು ಇನ್ನೂ.. ಬೆಳೆಯಲಿ…
  ಹರೇರಾಮ.

 5. ಅನಿತಾ ನರೇಶ್ says:

  ಆಂಗಿ ಒಪ್ಪ ಕಾಣ್ತು 🙂

 6. ಹೋ! ಈ ಅಂಗಿ ಭಾರೀ ಚೆಂಡ ಇದ್ದು 🙂

 7. ಕೆ.ನರಸಿಂಹ ಭಟ್ ಏತಡ್ಕ says:

  ಬಂತು ಹೊಸ ವರ್ಷಕ್ಕೆ ಹೊಸತಾದ ಅಂಗಿ
  ಒಂದೊಂದು ಹೊಡೆಲಿಯುದೆ ಒಂದೊಂದು ಭಂಗಿ
  ಹಳೆ ಬೇರು ಹೊಸ ಚಿಗುರು ಕೂಡಿಪ್ಪ ಬೈಲು
  ಹೋಪಲಿದ್ದಿನ್ನುದೇ ನೂರಾರು ಮೈಲು

 8. ಅಂಗಿ ಚೆಂದಾಯಿದು! ರೆಸ್ಪಾನ್ಸಿವ್ ಮಾಡಿದ್ದವು ತುಂಬಾ ಒಳ್ಳೆದಾತಿದಾ!

 9. ರಘುಮುಳಿಯ says:

  ಹೊಸ ಅ೦ಗಿ ಒಪ್ಪ ಇದ್ದನ್ನೇ..ತ೦ತ್ರಜ್ನಾನದ ಬೆಳವಣಿಗೆಯೊಟ್ಟಿ೦ಗೆ ಬೈಲೂ ಬದಲಾವಣೆಗಳ ಮಾಡ್ಯೊ೦ಡು ಮು೦ದುವರಿತ್ತಾ ಇಪ್ಪದು ಸ೦ತೋಷದ ಸ೦ಗತಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *