Oppanna.com

2013: ಕಲ್ಪನೆಯ ಬೈಲಿಂಗೆ ನಾಕನೇ ಒರಿಶ

ಬರದೋರು :      on   01/01/2013    12 ಒಪ್ಪಂಗೊ

ಹರೇರಾಮ, ಎಲ್ಲೋರಿಂಗೂ ನಮಸ್ಕಾರ.
ಕೆಲೆಂಡರು ಲೆಕ್ಕದ ಹೊಸ ಒರಿಶ ಬಂದ ಕೂಡ್ಳೇ ಬೈಲಿಂಗೂ ಒಂದು ಕೊಶಿ. ಎಂತಗೆ?
ಬೈಲು ಸುರುಆಗಿ ಮತ್ತೊಂದೊರಿಶ ಆತು ಹೇಳ್ತ ಸಂತೋಷ.

ನಾಕೊರಿಶ!
ನಾಕೊರಿಶ!

2009ರ ಜೆನವರಿಗೆ ಅಂತರ್ಜಾಲಲ್ಲಿ ಪ್ರಕಟಗೊಂಡ ಈ ಬೈಲು ನಿರಂತರವಾಗಿ ಇಂದಿನಒರೆಂಗೆ ನೆರೆಕರೆಯ ಅಕ್ಕ-ತಂಗೆ-ಅಣ್ಣ-ಭಾವಯ್ಯಂದ್ರ ಸಹಕಾರಲ್ಲಿ ನೆಡೆತ್ತಾ ಇದ್ದು.
ಒಟ್ಟು 1859 ಶುದ್ದಿಗಳನ್ನೂ, 28, 215 ಒಪ್ಪಂಗಳನ್ನೂ, ಲಕ್ಷಾಂತರ “ಪುಟನೋಟಂಗಳನ್ನೂ” ಹೊಂದಿಗೊಂಡು, ಹವ್ಯಕ ಸಾರಸ್ವತ ಲೋಕಲ್ಲಿ ಏಕಮೇವಾದ್ವಿತೀಯವಾಗಿ ಬೆಳೆತ್ತಾ ಇದ್ದು.

ನಿಂಗ ಎಲ್ಲೋರ ಪ್ರೋತ್ಸಾಹ ಇಲ್ಲದ್ದರೆ ಇದು ಈ ನಮುನೆಲಿ ಬೆಳೆತ್ತಿತಿಲ್ಲೆ.
ಎಲ್ಲೋರ ಸಹಕಾರಕ್ಕೆ ಬೈಲು ಚಿರಋಣಿ.
ಮುಂದೆಯೂ ಇದೇ ನಮುನೆಲಿ ಪ್ರೀತಿ – ವಾತ್ಸಲ್ಯ ಇರಳಿ.
ಬೈಲಿಂಗೆ ಇನ್ನೂ ಹೆಚ್ಚು ಜೆನ ಬರಳಿ, ಶುದ್ದಿ ಹೇಳುಲೆ ಸುರುಮಾಡಲಿ.
ಬೈಲು ಬೆಳೆಯಲಿ, ಜ್ಞಾನಾರ್ಜನೆ ನಿರಂತರವಾಗಿರಳಿ.

ಗುರು-ಹಿರಿಯರ ಮಾರ್ಗದರ್ಶನ, ದೇವರ ಆಶೀರ್ವಾದ ನಮ್ಮ ಬೈಲಿಂಗೆ ಸದಾ ಇರಳಿ.
~

ಬೈಲಿನ ನಾಕನೇ ಒರಿಶದ ಬಾಬ್ತು ಎಲ್ಲೋರಿಂಗೂ ಶುಭಾಶಯಂಗೊ.

~
ಬೈಲಿನ ಪರವಾಗಿ

12 thoughts on “2013: ಕಲ್ಪನೆಯ ಬೈಲಿಂಗೆ ನಾಕನೇ ಒರಿಶ

  1. ಬೈಲಿನ ಗುರಿಕ್ಕಾರಿಂಗೆ ನಮಸ್ಕಾರಂಗೊ.ಬೈಲಿಂದ ಹೊಸ ಕವಿಗೊ, ಸಾಹಿತಿಗೊ,ಬೆಳದವು ಬರದವು ಭಾಶೆಯ ಬೆಳಸಿದವು ಹೇಳುತ್ತದು ತುಂಬಾ ಸಂತೋಷದ ವಿಷಯ .ನಮ್ಮ ಈ ಭಾಷೆ ಇನ್ನುದೇ ಬೆಳಗಲಿ ಬೆಳೆಯಲಿ .ಹೊಸ ಹೊಸ ಸಾಹಿತ್ಯ ಸೃಷ್ತಿಯಾಗಲಿ ಎಂಬುದು ಆಶಯ .

  2. ಬೈಲು ಹೀಂಗೇ ಇನ್ನೂ ಉತ್ತಮ ರೀತಿಲಿ ಮುಂದುವರಿಲಿ..ಶುಭಮಸ್ತು..

  3. ಗುರಿಕ್ಕಾರ್ರ ಕಲ್ಪನೆಯ ಈ ಬೈಲು ಇಷ್ಟು ಜೆನ ಸಮಾನ ಮನಸ್ಕರ ಒಟ್ಟು ಸೇರುಸಿ ಹೇ೦ಗೆ ಬೆಳೆತ್ತಾ ಇದ್ದು,ತನ್ಮೂಲಕ ಹವ್ಯಕ ಭಾಷಾಸರಸ್ವತಿಯ ಸೇವೆಯ ಹೇ೦ಗೆ ಮಾಡುತ್ತಾ ಇದ್ದು ಹೇಳುವ ವಿಷಯ ನೋಡುವಗ ಮನಸ್ಸಿ೦ಗೆ ತು೦ಬಾ ಸ೦ತೋಷ ಆವುತ್ತು.
    ಬೈಲಿಲಿ ಸಾಹಿತ್ಯಕೃಷಿ ಬೆಳೆತ್ತಾ ಇರಳಿ,ಬೆಳೆ ಸಮೃದ್ಧವಾಗಲಿ.ಶುಭಾಶಯ೦ಗೊ.

    1. ಗುರಿಕಾರ್ರ ನೇತೃತ್ವಲ್ಲಿ ಸಮೃದ್ಧ ಸ೦ಸ್ಕೃತಿಯಿಪ್ಪ ನಮ್ಮ ಹವಿಗನ್ನಡ ಭಾಷೆ ನಾಕೊರಿಶಲ್ಲೇ ಅದರ ಅ೦ತರಾಳದ ದರ್ಶನ ಮಾಡಿದ್ದು. ಇನ್ನುಮು೦ದಾಣ ವರುಶಲ್ಲಿಯೋ ಸದಾ ನೆ೦ಪು ಮಾಡ್ಯೊ೦ಬಾ೦ಗಿಪ್ಪ ಕಾರ್ಯ ಚಟುವಟಿಕೆಗಳ ನೆಡೆಶಲಿ.ಹೆಚ್ಚಚ್ಹು ನಮ್ಮವು ಆ ಸ೦ಸ್ಕೃತಿ ರಥವ ಅಲ೦ಕಾರದ ಮಾಡುವ ಕಾರ್ಯಲ್ಲಿ ಕಯಿ ಸೇರ್ಸಲಿ ಹೇಳುವ ಆಶಯಲ್ಲಿ, ಈ ಸತ್ಸ೦ಗಕ್ಕೆ ಗುರುಗಳ ಆಶೀರ್ವಾದ ಇರಲಿ ಹೇದು ಪ್ರಾರ್ಥತಿಸುತ್ತೆ. ಜೈ! ಹವಿಗನ್ನಡ!

  4. ಹವ್ಯಕ ಭಾಷೆಯ ಬೆಳವಣಿಗೆಗೆ ಸಾಕಷ್ಟು ಒತ್ತು ಕೊಡ್ತಾ ಇಪ್ಪ ಈ ಬೈಲು ಎಲ್ಲರ ಸಹಕಾರದೊಟ್ಟಿಂಗೆ ಇನ್ನಷ್ಟು ವಿಸ್ತಾರವಾಗಲಿ.

  5. “ಒಳಿತಿನೆಡೆ ಅನವರತ ಪಯಣ…”. ಶುಭಾಶಯಂಗ… ಹರೇ ರಾಮ…

  6. ಹಳೆ ಯೋಜನೆಗಳ ಮುಂದುವರಿಶಿಗೊಂಡು ಹೊಸ ಹೊಸ ಯೋಜನೆ/ಯೋಚನೆಗಳನ್ನೂ ಸೇರುಸಿಗೊಂಡು ಬೈಲು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.ಅಬ್ಬೆ ಭಾಷೆ ಬಳಗಲಿ. ನೆರೆಕರೆ ಘಟ್ಟಿ ಆಗಲಿ. ಬೈಲ ಸಮಸ್ತರಿಂಗೆ ಅಭಿನಂದನೆ ಅಭಿವಾದನೆ.
    ಹರೆ ರಾಮ.

  7. ಹರೇ ರಾಮ. ಬೈಲ ಗುರಿಕ್ಕಾರ್ರ ಸಮೃದ್ಧ ನೇತೃತ್ವಲ್ಲಿ ಬೈಲು ಬೆಳೆತ್ತಾ ಇಪ್ಪದು ಸಂತೋಷದ ಸುದ್ಧಿ. ಎಲ್ಲೋರ ಸಹಕಾರ ಹೀಂಗೆ ಮುಂದುವರ್ಕೊಂಡು ಇನ್ನಷ್ಟು ವಿಶಾಲವಾಗಿ ಬೆಳಕ್ಕೊಂಡು ಯಶಸ್ಸು ಗಳುಸಲಿ ಹೇದು ಈ ಮೂಲಕ ಬೈಲ ಸಮಸ್ತರಿಂಗೂ ಶುಭಾಶಯ ನಿವೇದನೆ.

  8. ಏಕಮೇವಾದ್ವಿತೀಯವಾಗಿ ಬೆಳೆತ್ತಾ ಇದ್ದು ಹೇಳಿ ತುಂಬಾ ಕೊಶಿ ಆತು. ನಮ್ಮ ಬೈಲು ಇನ್ನಷ್ಟು ಬೆಳೆಯಲಿ. ಹವ್ಯಕ ಬಾಂಧವರೆಲ್ಲೋರು ಈ ಬೈಲಿಂಗೆ ಬರಳಿ. ಬೈಲನ್ನೂ ಬೆಳಸಲಿ, ಅವುದೆ ಬೆಳೆಯಲಿ. ಶುಭಾಶಯಂಗೊ.

  9. ಬೈಲಿಂಗೆ ನಮಸ್ಕಾರ.ಗುರಿಕಾರರಿಂಗೆ ನಮಸ್ಕಾರ.ಹೊಸ ವರ್ಷಲ್ಲಿ ಬೈಲಿಂದ ಎಂತರ ಹೊಸ ಯೋಜನೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×