Oppanna.com

ಕನ್ನಡ ಸಾಹಿತ್ಯಲೋಕದ ವಿಸ್ಮಯ – ಕೋಟ ಶಿವರಾಮ ಕಾರಂತ

ಬರದೋರು :   ತೆಕ್ಕುಂಜ ಕುಮಾರ ಮಾವ°    on   16/05/2012    10 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಶಿವರಾಮ ಕಾರಂತರ ಪರಿಚಯ ಮಾಡ್ಸುದೂ, ಕುರುಡಂಗೊ ಆನೆಯ ವಿವರುಸುದೂ ಒಂದೇ! ಎಲ್ಲೋರ ವಿವರಣೆಯೂ ಗಮನಾರ್ಹವೇ, ಆದರೆ ಪೂರ್ಣ ಆಲ್ಲ.
ಕಾರಂತರು ಆಚದು – ಈಚದು ಎಲ್ಲ ಸೇರಿಗೊಂಡ  ಒಂದು ವಿಶಾಲ  ಭೂಖಂಡ.!

ಅವರ ಬಗ್ಗೆ ಬರವವು ಅವು ವೆಗ್ತಿ ಅಲ್ಲ, ಒಂದು ಶಕ್ತಿ ಹೇಳಿ ತಿಳ್ಕೊಂಡಿದವು.
ಡಾ. ಪಾಟೀಲ ಪುಟ್ಟಪ್ಪರು ಹೇಳಿದ ಹಾಂಗೆ,

“ಅವರನ್ನು ಬೇರೆ ರೀತಿಯಿಂದ ಕರೆಯಲಿಕ್ಕಾಗದೆ, (ಕೆಲವರು)ಅವರ ಸ್ಥೂಲ ವಿವರಣೆಯ ಸುಲಭ ಮಾರ್ಗ ಹಿಡಿದಿದ್ದಾರೆ. – ಅನೇಕ ಶಕ್ತಿ,ಅನೇಕ ಪ್ರತಿಭೆ, ಅನೇಕ ಪರಿಣತಿ ಹಾಗೂ ಅನೇಕ ಪ್ರೌಢಿಮೆಗಳ ಸುಂದರ ಸಮನ್ವಯ ಅವರು”.

ಅವರ ಸಾಹಿತಿ, ಪತ್ರಿಕೋದ್ಯಮಿ, ನಟ, ನೃತ್ಯಪಟು, ಚಿತ್ರಕಾರ, ಶಿಲ್ಪಿ, ಗಾಯಕ ಅಥವಾ ಬೇರೆ ಇನ್ಯಾವ ಹೆಸರಿಲಿ ಗುರುತಿಸೆಕ್ಕು ಹೇಳಿ ಆರಿಂಗೂ ಅರ್ಥ ಆಗ.
ಅವೊಬ್ಬ ಸಪ್ತವರ್ಣದ  ಕಾಮನಬಿಲ್ಲು  ಹೇಳಿ ಲೀಲ ಕಾರಂತರು ತಿಳ್ಕೊಂಡಿದವು.

“ನಿಜವಾದ ಕಾರಂತ ಏನು ಎಂಬ ಅರಿವು ಯಾರಿಗೂ ಇಲ್ಲ, ಸ್ವತಃ ಅವರಿಗಾದರೂ ಇದೆಯೋ ಇಲ್ಲವೋ !”

ಐವತ್ತು ಸಂವತ್ಸರದ ಸುದೀರ್ಘ ಸಮಯ ಒಟ್ಟಿಂಗೆ ಬಾಳ್ವೆ ನಡಸಿದ  ಲೀಲ ಕಾರಂತರೇ ಹೀಂಗೆ ಅಭಿಪ್ರಾಯ ಪಟ್ಟರೆ ಬಾಕಿದ್ದೋರ ಪಾಡು ಹೇಂಗಿಕ್ಕು ?
ಕಾರಂತರು ಸ್ವತಃ ಒಂದು ವಿಶ್ವವಿದ್ಯಾಲಯದ ಎತ್ತರಕ್ಕೆ ಬೆಳದವು,ನಡೆದಾಡ್ತ ವಿಶ್ವಕೋಶ ಆದವು. ಸಣ್ಣ ಪ್ರಾಯಲ್ಲಿಯೇ ವಿದ್ಯಾರ್ಥಿ ಜೀವನಕ್ಕೆ ತಿಲಾಂಜಲಿ ಕೊಟ್ಟು ಸ್ವಾತಂತ್ರ್ಯ ಹೋರಾಟದ ಅಸಹಾಕಾರ ಚಳುವಳಿಲಿ ಭಾಗವಹಿಸಿ, ಅಕೇರಿವರೆಗೂ ಜೀವನ ಸಂಗ್ರಾಮಲ್ಲಿ ತೊಡಗಿಸಿಗೊಂಡು, ಪಾಠಶಾಲೆಯ ನಾಕು ಗೋಡೆಯೊಳ ಕಲ್ತದರಂದ ನೂರು ಪಟ್ಟು ಹೆಚ್ಚು ಸಮಾಜದ ವಿಶಾಲ ವಿಶ್ವವಿದ್ಯಾಲಯಲ್ಲಿ ಕಲ್ತುಗೊಂಡವು. (‘ಹುಚ್ಚುಮನಸ್ಸಿನ ಹತ್ತು ಮುಖಗಳು’ ಪುಸ್ತಕಲ್ಲಿ ಕಾರಂತರೇ ಹೇಳಿಗೊಂಡಿದವು).
ಎಣೆ ಇಲ್ಲದ್ದ ಉತ್ಸಾಹಲ್ಲಿ ಜಗತ್ತಿನ ಪರ್ಯಟನೆ ಮಾಡಿ ಅಪಾರ ಜೀವನಾನುಭವ ಪಡಕ್ಕೊಂಡವು.
ತಾವು ಕಂಡದರ – ಕಲ್ತದರ ಬರದು ಓದುಗರೊಟ್ಟಿಂಗೆ ಹಂಚಿಗೊಂಡವು. ಕಾರಂತರಿಂಗೆ ಕಾರಂತರೇ ಸಾಟಿ ಹೇಳಿ ಅನಿಸಿಗೊಂಡವು. !

ಬದುಕು – ಹೋರಾಟ :

1902 ಅಕ್ಟೋಬರ್ 10 ನೆ ತಾರೀಕು ಕುಂದಾಪುರದ ಕೋಟ ಹೇಳ್ತಲ್ಲಿ ಶಿವರಾಮ ಕಾರಂತರ ಜನ್ಮ ಆತು.
ಅಪ್ಪ ಶೇಷ ಕಾರಂತರು, ಅಬ್ಬೆ ಲಕ್ಷ್ಮಿ; ನಾಕು ಜೆನ ಅಣ್ಣಂದಿರು, ನಾಕು ಜೆನ ತಮ್ಮಂದಿರು, ಮೂರು ತಂಗೆಕ್ಕ ಇಪ್ಪ ದೊಡ್ಡ ಸಂಸಾರ ಅವರದ್ದು.
ಐಶ್ವರ್ಯವಂತರಲ್ಲದ್ದರೂ, ತಕ್ಕಮಟ್ಟಿನ ಸ್ಥಿತಿವಂತರು. ಪ್ರಾಥಮಿಕ ವಿದ್ಯಾಭ್ಯಾಸ ಕೋಟದ ಸರ್ಕಾರಿ ಶಾಲೆಲಿ ಕಲ್ತವು.
ದೊಡ್ಡ ಕ್ಲಾಸಿಂಗಪ್ಪಗ ಕುಂದಾಪುರದ ಹೈಸ್ಕೂಲಿಂಗೆ ಹೋದವು.ಕೊಲೇಜಿನ ವಿದ್ಯಾಭ್ಯಾಸಕ್ಕಪ್ಪಗ ಕೊಡೆಯಾಲದ ಗೋರ್ಮೆಂಟು ಕೊಲೇಜು ಸೇರಿದವು.
ಆಟ ಪಾಠಲ್ಲಿ ಅಷ್ಟೇನೂ ಆಸಕ್ತಿ ಇತ್ತಿಲೆ ಅವಕ್ಕೆ. ಗ್ರಂಥಾಲಯಲ್ಲಿ  ಕೂದೊಂಡು ಪುಸ್ತಕ ಓದುದು ಅವರ ನೆಚ್ಚಿನ ಹವ್ಯಾಸ ಆಗಿದ್ದತ್ತು. ಕಂಠಪಾಠ ಮಾಡ್ಯೊಂಡು ಕಲಿವ ಹುಮ್ಮಸ್ಸು ಅವಕ್ಕೆ ಇತ್ತೇ ಇಲ್ಲೆ.

ಸರಿ ಸುಮಾರು ಅದೇ ಸಮಯಲ್ಲಿ 1921 ರ ಹೊತ್ತಿಲಿ, ಗಾಂಧೀಜಿ ಶುರು ಮಾಡಿದ ಅಸಹಾಕಾರ ಚಳುವಳಿಯ ಬೆಶಿ  ದೇಶವ್ಯಾಪೀ ಆದ ಸಮಯವುದೇ, ಗಾಂಧೀಜಿ ಕೊಡೆಯಾಲಕ್ಕೆ ಬಂದು ಮಾಡಿದ ಉತ್ತೇಜನಕಾರೀ  ಭಾಷಣಂದ ಸ್ಪೂರ್ತಿ ಪಡದು ಕಾರಂತರು ಕೊಲೇಜು ಬಿಟ್ಟು ಅಸಹಾಕಾರ ಚಳುವಳಿಲಿ ಪಾಲ್ಗೊಂಡವು.
ಅಷ್ಟೆ ಅಲ್ಲ, ಅಸ್ಪೃಶ್ಯತಾ ನಿವಾರಣೆ,ಮದ್ಯಪಾನ ನಿಷೇಧದ ಪ್ರಚಾರಲ್ಲಿಯೂ ತೊಡಗಿಸಿಗೊಂಡವು. ಗಾಂಧೀಜಿಯವರ ತತ್ವಂಗಳ ಮೆಚ್ಚಿ, ಮನೆ ಮಠ ತೊರೆದು, ಆದರ್ಶಂಗಳ ಕನಸು ಹೊತ್ತು ಕಾರಂತರು ಖಾದೀ ಮಾರಾಟ,ಸ್ವದೇಶೀ ವಸ್ತುಗಳ ಮಾರಾಟ,ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಸಮಾಜ ಸುಧಾರಣೆ ಇತ್ಯಾದಿ ರಚನಾತ್ಮಕವಾದ ಕಾರ್ಯಂಗಳಲ್ಲಿ ತೊಡಗಿಗೊಂಡವು. ಸುಮಾರು ನಾಕು ವರ್ಷದ ಇಂಥಾ ಹೋರಾಟದ ಹಾದಿಲಿ ಅವರ ಬದುಕು ಅರಳಿತ್ತು.
ಸ್ವಾವಲಂಬನೆ, ಪರಿಶ್ರಮಂಗಳ ಮಹತ್ವವ ಕಲ್ತವು.ಬಡಪ್ಪತ್ತಿಂಗೆ ಹೊಂದಿಗೊಂಬ,ಸ್ವಾವಲಂಬಿಯಾಗಿ ದುಡುದು ಅದರ ಎದುರುಸುವ ಶಕ್ತಿ ಕಾರಂತರಿಂಗೆ ಅವರ ಯೌವನಲ್ಲಿಯೆ ತುಂಬಿತ್ತು.
ಬಹುಶಃ ಇದೇ ಕಾರಣಂದಲಾಗಿ ಕಾರ್ಯಶ್ರದ್ಧೆ, ಪ್ರಾಮಾಣಿಕತೆ, ಸ್ವಾವಲಂಬನೆ, ಹೃದಯವಂತಿಕೆ,ಅನ್ವೇಷಕ ದೃಷ್ಟಿ ಅವರ ಜೀವನ ಪರ್ಯಂತ ಒಂದೇ ಪ್ರಕಾರವಾಗಿ ಕಂಡು ಬಂತು.

ಪುತ್ತೂರಿಂದ ಸಾಲಿಗ್ರಾಮದವರೆಗೆ :

ಕೊಡೆಯಾಲಲ್ಲಿ ಇದ್ದುಗೊಂಡು ವಸಂತ” ಪತ್ರಿಕೆ ಶುರುಮಾಡಿ ಪತ್ರಿಕೋದ್ಯಮಲ್ಲಿ ಕೈ ಆಡ್ಸಿದ ಮತ್ತೆ ಕಾರಂತರು ಪುತ್ತೂರಿಂಗೆ ಬಂದವು.
ತಾಲೂಕು ಬೋರ್ಡಿನ ಅಧ್ಯಕ್ಷರಾಗಿತ್ತಿದ್ದ ಮೊಳಹಳ್ಳಿ ಶಿವರಾಯರು ಮಾಡಿಗೊಂಡಿತ್ತಿದ್ದ ಜನಪರ ಕಾರ್ಯಂಗೊ, ವಿದ್ಯಾಕ್ಷೇತ್ರಕ್ಕೆ ಬೇಕಾಗಿ ಮಾಡಿದ ದುಡಿಮೆಂದ ಪ್ರಚೋದಿತರಾಗಿ ಮಕ್ಕಳ ವಿದ್ಯಾಭ್ಯಾಸ ಕುರಿತಾಗಿ ಕೆಲಸ ಮಾಡ್ಲೆ ಪ್ರಾರಂಭ ಮಾಡಿದವು.
ಊರೂರು ಸುತ್ತಿದವು. ಸಣ್ಣಮಕ್ಕಳ ವಿದ್ಯಾಭ್ಯಾಸಲ್ಲಿ ನೂತನ ಪ್ರಯೋಗವ ಶುರುಮಾಡಿದವು.
ಬಾಲಪ್ರಪಂಚ” ಹೆಸರಿಲಿ ಕಿರಿಯರ ವಿಶ್ವಕೋಶವ ಮೂರು ಸಂಪುಟಲ್ಲಿ ಹೆರ ತಂದವು.
ಬಾಲವನ’ಪ್ರಾರಂಭಿಸಿದವು. ಲೀಲಾ ಅವರ ಕೈಹಿಡುದು ಸಂಸಾರಿ ಆದವು. ನಾಕು ಮಕ್ಕಳ ಪಡದು ಸಂಸಾರಲ್ಲಿ ಸುಖ -ದುಃಖ ಎರಡನ್ನೂ ಸಮಾನವಾಗಿ ಅನುಭವಿಸಿದವು.
ಹೆರಿಮಗ ಹರ್ಷ ಕ್ಯಾನ್ಸರಿಂಗೆ ತುತ್ತಾಗಿ ಸತ್ತದು, ಹೆಂಡತ್ತಿ ಲೀಲಾ ಚಿತ್ತಕ್ಷೋಭೆಗೆ ತುತ್ತಾಗಿ ಯಾತನೆಯ ಅನುಭವಿಸಿದ್ದರ ಕಂಡು ಮರುಗಿದರೂ ಎಲ್ಲ ಕಷ್ಟವ ಸಮಚಿತ್ತಂದಲೆ ಎದುರಿಸಿದವು.
ಕಾರಂತರು ತಾವು ಅನುಭವಿಸಿದ ಕಹಿಯ ಆರಿಂಗೂ ಉಣಿಸಿದ್ದವಿಲ್ಲೆ, ಆದರೆ ಉಂಡ ಸವಿಯ ಹಂಚುಲೆ ಮರದ್ದಿವಿಲ್ಲೆ!!
ಪುಸ್ತಕಂಗಳ ಬರದ ಕಾರಂತರು ಪುಸ್ತಕ ಪ್ರಕಾಶಕರೂ ಆಗಿತ್ತಿದ್ದವು.
ತಮ್ಮದೇ ಒಂದು ಮುದ್ರಣಾಲಯವನ್ನೂ ನಡಶಿತ್ತಿದ್ದವು. ಸ್ವಂತ ದುಡಿಮೆಯನ್ನೇ ನಂಬಿಗೊಂಡಿತ್ತಿದ್ದ ಕಾರಂತರು ‘ಸೊಮಿಲ್’ಒಂದರ ಶುರು ಮಾಡಿದ ನಿದರ್ಶನವೂ ಇದ್ದು.

ಡಾ.ಕೆ.ಶಿವರಾಮ ಕಾರಂತ

ಮೊಳಹಳ್ಳಿ ಶಿವರಾಯರು ವೃದ್ಧಾಪ್ಯ ಕಾರಣಂದ ಪುತ್ತೂರು ಬಿಟ್ಟ ಮೇಲೆ ಕಾರಂತರಿಂಗೆ ಒಂಟಿತನದ ಬೇಜಾರು ಶುರುವಾತು.
ಅದೂ ಅಲ್ಲದ್ದೆ, ಹೆಂಡತ್ತಿಯ ಅನಾರೋಗ್ಯ ಮತ್ತಷ್ಟು ಉಲ್ಬಣ ಆದಮೇಲೆ ಕಾರಂತರಿಂಗೆ ಪುತ್ತೂರು ಬಿಡುದು ಒಳ್ಳೆದು ಹೇಳಿ ಕಂಡತ್ತು.
ಆತ್ಮೀಯರ ಸಲಹೆ, ಸಹಕಾರಂದ, ಹುಟ್ಟೂರು ಕೋಟದ ಹತ್ತರಾಣ ಸಾಲಿಗ್ರಾಮಲ್ಲಿ ಕಟ್ಟಿಸಿದಸುಹಾಸ’ಕ್ಕೆ ತಮ್ಮ ಮನೆಯ ಬದಲ್ಸಿದವು.
ಸಾಲಿಗ್ರಾಮಕ್ಕೆ ಬಂದ ಮೇಲೆಯೂ ಹತ್ತಾರು ಪುಸ್ತಕಂಗಳ ಬರದವು.

ಕಾರಂತರಿಂಗೆ ರಂಗಭೂಮಿ ನಾಟಕ ಮತ್ತೆ ನೃತ್ಯಲ್ಲಿ ಅಭಿರುಚಿ ಇದ್ದ ಹಾಂಗೆ ಯಕ್ಷಗಾನಲ್ಲಿಯೂ ಅಪಾರ ಆಸಕ್ತಿ ಇದ್ದತ್ತು.
ಯಕ್ಷಗಾನವ ಸಮಗ್ರವಾಗಿ ಅಧ್ಯಯನ ಮಾಡಿ ಹಲವು ಹೊಸ ಹೊಸ ಪ್ರಯೋಗಂಗಳ ಮಾಡಿದವು.ಕರಾವಳಿ ಮತ್ತೆ ಮಲೆನಾಡಿನ ಮೂಲೆ ಮೂಲೆ ತಿರುಗಿ ಯಕ್ಷಗಾನದ ಬಗ್ಗೆ ಲಭ್ಯವಾಗಿಪ್ಪ ಮಾಹಿತಿ, ಓಲೆಗರಿ ಗ್ರಂಥಂಗಳ ಸಂಗ್ರಹ ಮಾಡಿ ಈ ಕಲೆಯ ಹುಟ್ಟು,ಬೆಳವಣಿಗೆ, ವಿಧಾನಂಗಳ  ಬಗ್ಗೆ ವಿದ್ವತ್ ಪೂರ್ಣ ಗ್ರಂಥ ಯಕ್ಷಗಾನ ಬಯಲಾಟ”ವ ಬರದವು.
ಯಕ್ಷರಂಗ”ವ ಸ್ಥಾಪಿಸಿ ತನ್ಮೂಲಕ ಯಕ್ಷಗಾನವ ದೇಶ ವಿದೇಶಂಗಳಲ್ಲಿ ಪ್ರದರ್ಶಿಸಿ ಹೆಸರು ಪಡದವು.
ತೊಂಬತ್ತರ ಪ್ರಾಯಲ್ಲಿಯೂ ಗೆಜ್ಜೆ ಕಟ್ಟಿ ಕುಣುದು, ಕುಣಿಸಿದ ಉತ್ಸಾಹಿ ಕಾರಂತರು.!!

ಕಾರಂತರು ಪುತ್ತೂರಿಂಗೆ ಬಂದ ಪ್ರಾರಂಭಲ್ಲಿ, ಅಥವಾ ಇಪ್ಪತ್ತರ ದಶಕದ ಅಕೇರಿಲಿ, ಎರಡು ಮೂಕಿ ಚಿತ್ರಂಗಳ ನಿರ್ಮಾಣಕ್ಕೆ ತೊಡಗಿ ಕೈಸುಟ್ಟುಗೊಂಡಿತ್ತಿದ್ದವಡ.
ಚಿತ್ರ ನಿರ್ಮಾಣದ ಹಲವು ಸೂಕ್ಶ್ಮ ತಂತ್ರಜ್ಞಾನವ ಕಲಿವಲೆ ಬೊಂಬಾಯಿಗೂ ಹೋಗಿ ಬಯಿಂದವಡ. ಮುಂದೆ 1977-78 ರಲ್ಲಿ ತಮ್ಮದೇ ಕಾದಂಬರಿ ಕುಡಿಯರ ಕೂಸು” ಆಧರಿಸಿ “ಮಲೆಯ ಮಕ್ಕಳು” ಚಿತ್ರ ನಿರ್ಮಾಣ ಮಾಡಿತ್ತಿದ್ದವು.

ಕಾರಂತರು ಒಬ್ಬ ಪರಿಸರ ಪ್ರೇಮಿ, ಪ್ರಕೃತಿಯ ಉಪಾಸಕ.
ಪರಿಸರ ಸಂಬಂಧಿಯಾಗಿ ಸುಮಾರು 16 ಕೃತಿಗಳ ಬರದ್ದವು. ಪರಿಸರ ನಾಶಕ್ಕೆ ಕಾರಣ ಅಕ್ಕು ಹೇಳ್ತ ನಂಬಿಕೆಲಿ ಕಾರವಾರದ ಕೈಗಾ ಅಣುಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತ ಪಡಿಸಿದ್ದು ಮಾಂತ್ರ ಅಲ್ಲ, 1989 ರ ಸಂಸತ್  ಚುಣಾವಣೆಲಿಯೂ ಸ್ಪರ್ಧಿಸಿದವು.
ಅಸಹಾಕಾರ ಚಳುವಳಿ ಸಮಯಲ್ಲಿ ಗಾಂಧೀಜಿಯವರ ಅನುಯಾಯಿಯಾಗಿ ಕೆಲಸ ಮಾಡಿದ ಕಾರಂತರಿಂಗೆ ಐವತ್ತರ ದಶಕಲ್ಲಿ ಆದಳಿತ ಪಕ್ಷದವರ ರಾಜಕೀಯಂದ ನೊಂದು,’ ಕಿಸಾನ್ ಪಾರ್ಟಿ’ಯ ಮೂಲಕ ರಾಜ್ಯ ಚುಣಾವಣೆಲಿಯೂ ಸ್ಪರ್ಧಿಸಿತ್ತಿದ್ದವು.

1978 ರಲ್ಲಿ ಕಾರಂತರ `ಮೂಕಜ್ಜಿಯ ಕನಸುಗಳು‘ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತ್ತು.
ಇದಲ್ಲದ್ದೆ ಹಲವಾರು ವಿಶ್ವವಿದ್ಯಾಲಯಂಗಳ ಗೌರವ ಡಾಕ್ಟರೇಟ್, “ಪಂಪ ಪ್ರಶಸ್ತಿ”, ರಾಜ್ಯ – ಕೇಂದ್ರ ಅಕಾಡೆಮಿ ಪ್ರಶಸ್ತಿಗೊ,ಹಲವು ರಾಷ್ಟೀಯ – ಅಂತಾರಾಷ್ಟೀಯ ಗೌರವಂಗೊ,ಮಧ್ಯಪ್ರದೇಶ ಸರಕಾರದ “ತುಳಸೀ ಸಮ್ಮಾನ್” ಪ್ರಶಸ್ತಿ – ಹೀಂಗೆ ಕಾರಂತರಿಂಗೆ ಸಿಕ್ಕಿದ ಪ್ರಶಸ್ತಿಗೊ ಹಲವಾರು!
1975 ರಲ್ಲಿ ತುರ್ತುಪರಿಸ್ಥಿತಿಯ ವಿರೋಧಿಸಿ, ಕೇಂದ್ರ ಸರಕಾರ ಕೊಟ್ಟ ಪದ್ಮಭೂಷಣ ಪ್ರಶಸ್ತಿಯ ವಾಪಾಸು ಮಾಡಿದವು.!!
ಇದೇ ರೀತಿ 1995 ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ಕರ್ನಾಟಕ ಜ್ಯೋತಿ” ಬಿರುದನ್ನೂ, ಪ್ರತಿಭಟನಾತ್ಮಕವಾಗಿ  ಹಿಂತಿರುಗಿಸಿದವು.

ಅಂತ್ಯ ಇಲ್ಲದ್ದ ಕಾರಂತ:

ಕಾರಂತರು ಬಾಳಿದ ಅಷ್ಟೂ ಸಮಯ ಒಬ್ಬ ಹೋರಾಟಗಾರನ ಹಾಂಗೆ ಬದುಕಿದವು.
ಬದುಕಿನ ಆಳ, ಅಗಲ, ಅರ್ಥಂಗಳ ಹುಡುಕಿಗೊಂಡು ಒಬ್ಬ ಅನ್ವೇಷಕನ ಬಾಳು ಬಾಳಿದವು. ಒಬ್ಬ ವಿಜ್ಞಾನಿಯ ಹಾಂಗೆ ನಮ್ಮ ಸುತ್ತಣ ನಿಗೂಢವ ಶೋಧಿಸಿ ಆಸಕ್ತರಿಂಗೆ ಹಂಚಿದವು.
ನಮ್ಮ ಸಮಾಜದ ಮೌಢ್ಯ  ಕೆಡುಕಗಳ ಖಂಡಿಸಿ ತಿದ್ದುವ ಪ್ರಯತ್ನ ಮಾಡಿದವು. ಒಬ್ಬ ಅಲೆಮಾರಿಯ ಹಾಂಗೆ ಜಗತ್ತೆಲ್ಲ ಸುತ್ತಿ,ಅಸದೃಶ ಲೋಕಜ್ಞಾನವ ಗಳಿಸಿ ಜ್ಞಾನ ಪಿಪಾಸಿಗಳ ಆಸರು ತಣಿಸಿದವು.
ತಮ್ಮದೇ ತಿಳುವಳಿಕೆಯ ಗುರುವಾಗಿಸಿಗೊಂಡು ಇತರರಿಂಗೆ ಕಲಿಸಿ ಜಗತ್ತಿಂಗೇ ಗುರು ಎನಿಸಿಗೊಂಡವು. ಒಬ್ಬ ಮಹಾನ್ ಲೇಖಕನಾಗಿ, ಪ್ರಾಮಾಣಿಕ ಚಿಂತಕನಾಗಿ, ಮಾನವೀಯ ಮೌಲ್ಯಂಗಳ ಪ್ರತಿಪಾದಕನಾಗಿ, ಬಿಡುವಿಲ್ಲದ್ದ ದುಡಿಮೆಗಾರನಾಗಿ , ಕಡಲ ಕರೆಯ ಭಾರ್ಗವನಾಗಿ ಬಾಳಿದ ಕಾರಂತರು 1997 ರ ದಶಂಬರ 10 ರಂದು ಕಾಲನ ಕರೆಗೆ ಓಗೊಟ್ಟು ಇಹಲೋಕ ಯಾತ್ರೆಯ ಮುಗುಶಿದವು. ಆದರೆ, ಆ ಹೆರಿ ಚೇತನ  ಅವರ ಸಾಹಿತ್ಯ ಕೃತಿಂದಲಾಗಿ ನಾಡಿನ ಜನಮಾನಸಲ್ಲಿ ಅಮರರಾಗಿ ಈಗಳೂ ಜೀವಂತವಾಗಿದ್ದವು.!!!

ಕಾರಂತರ ಬರಹ :

ಕಾರಂತರ ಬರಹ ಅಥವಾ ಸಾಹಿತ್ಯವ ಓದದ, ಪರಿಚಯ ಇಲ್ಲದ್ದ ಜೆನ ಬಹುಶಃ ಆರೂ ಇರವು,ಇದ್ದರೂ ಬೆರಳೆಣಿಕೆಗೆ ಸಿಕ್ಕುದು ಕಷ್ಟ.!
ಅವರ ಕಾದಂಬರಿಗಳಂತೂ ಈಗಳೂ ಬೇಡಿಕೆಲಿಪ್ಪ ಕೃತಿಗೊ. ಕತೆ,ಕಾದಂಬರಿಗಳಿಂದ ಶುರುವಾಗಿ ನಾಟಕ, ಪ್ರವಾಸ ಕಥನ,ಜೀವನ ಚಿತ್ರಣ,ಆತ್ಮ ಕಥನ, ಹಾಸ್ಯ ವಿಡಂಬನೆಗೊ ಮೌಲ್ಯಯುತ ಲೇಖನಂಗೊ ಹೀಂಗೆ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕಾರಂತರು ಕೃಷಿ ಮಾಡಿದ್ದವು.

  • ವೃತ್ತಿ ರಂಗಭೂಮಿಯ ಸಂಪರ್ಕಲ್ಲಿ ಬಂದ ಮೇಲೆ ಕಾರಂತರು ಹಲವು ನಾಟಕಂಗಳ ಬರದವು.
    “ಕರ್ಣಾರ್ಜುನ”,”ಜ್ವಾಲಾಬಂಧನ”,”ಗಧಾಯುದ್ಧ”,”ಕಠಾರಿ ಭೈರವ”,”ಗೋಮಾತೆ”,”ವಿಜಯನಗರದ ಸೂರ್ಯ”,”ನಿಶಾಮಹಿಮೆ”,”ದೆಹಲಿಯ ದೌರ್ಭಾಗ್ಯ” ಮುಂತಾದವು ವೃತ್ತಿರಂಗಭೂಮಿಗೆ ಬೇಕಾಗಿ ರಚಿಸಿದ ಪ್ರಮುಖ ನಾಟಕ ಕೃತಿಗೊ.
    ಇದಲ್ಲದ್ದೆ,ಹಲವಾರು ಗೀತನಾಟಕ ಮತ್ತೆ ಏಕಾಂಕ ನಾಟಕಂಗಳನ್ನೂ ಬರದ್ದವು.
  • ಕಾರಂತರು ಹಲವಾರು ಸಣ್ಣಕತೆಗಳ ಬರದ್ದವು.
    “ಹಾವು”,”ಹಸಿವು”,ಮತ್ತೆ “ತೆರೆಮರೆಯಲ್ಲಿ” ಅವರ ಕಥಾಸಂಕಲನಂಗೊ.
  • ಅವರ ಪ್ರವಾಸಕಥನಂಗಳಲ್ಲಿ ಪ್ರಮುಖವಾಗಿಪ್ಪದು “ಅರಸಿಕರಲ್ಲ”,”ಪಾತಾಳಕ್ಕೆ ಪಯಣ”,”ಅಪೂರ್ವ ಪಶ್ಚಿಮ”,”ಪೂರ್ವದಿಂದ ಆತ್ಮಪೂರ್ವಕ್ಕೆ”,”ಅಬುವಿನಿಂದ ಬರಾಮಕ್ಕೆ”
  • “ಹುಚ್ಚುಮನಸ್ಸಿನ ಹತ್ತು ಮುಖಗಳು” ಮತ್ತೆ “ಸ್ಮೃತಿ ಪಟಲದಿಂದ” ಕಾರಂತರ ಆತ್ಮಚರಿತ್ರೆಗೊ.
  • ಕನ್ನಡ ಕಾದಂಬರಿಕಾರರಲ್ಲಿ  ಕಾರಂತರಿಂಗೆ ಅಗ್ರಪಟ್ಟ ಸಿಕ್ಕುತ್ತು. ಸುಮಾರು 44 ಕಾದಂಬರಿಗಳ ಬರದ್ದವು.
    ಅವರ “ಚೋಮನ ದುಡಿ”,”ಮರಳಿ ಮಣ್ಣೀಗೆ”,”ಬೆಟ್ಟದ ಜೀವ”,”ಅಳಿದ ಮೇಲೆ”,”ಮೈಮನಗಳ ಸುಳಿಯಲ್ಲಿ”,”ಮೂಕಜ್ಜಿಯ ಕನಸುಗಳು”,”ಕುಡಿಯರ ಕೂಸು”,”ಸರಸಮ್ಮನ ಸಮಾಧಿ”,”ಕರುಳಿನ ಕರೆ” ಇವೆಲ್ಲ ಕನ್ನಡಲ್ಲಿ ಮಾಂತ್ರ ಅಲ್ಲ ಬೇರೆ ಯೇವುದೆ ಭಾಷೆಲಿಯೂ ಉತ್ಕೃಷ್ಟ ಹೇಳಿ ಅನಿಸಿಗಂಬಲೆ ಸಾಮರ್ಥ್ಯ ಇಪ್ಪ ಕಾದಂಬರಿಗೊ.
  • ವ್ಯಂಗ – ವಿಡಂಬನೆ ಕಾರಂತರ ಬತ್ತಳಿಕೆಲಿತ್ತಿದ್ದ ಪ್ರಮುಖ ಅಸ್ತ್ರ.
    “ಗ್ನಾನ”,”ಮೈಗಳ್ಳನ ದಿನಚರಿ”,”ಮೈಲಿಕಲ್ಲಿನೊಡನೆ ಮಾತುಕತೆ”,”ಹಳ್ಳಿಯ ಹತ್ತು ಸಮಸ್ತರು”,”ದೇಹಜ್ಯೋತಿಗಳು”,”ಪ್ರಾಪ್ ಪ್ರಬಂಧಗಳು” ಅವರ ಪ್ರಮುಖ ವಿಡಂಬನಾ ಕೃತಿಗೊ.
  • “ವಿಚಾರ ಶೀಲತೆ” ಮತ್ತೆ “ಬಾಳ್ವೆಯೇ ಬೆಳಕು” ಕಾರಂತರ ವೈಚಾರಿಕ ಕೃತಿಗೊ.
  • ಸುಮಾರು 2೦೦ ಕ್ಕೂ ಹೆಚ್ಚು ಮಕ್ಕಳ ಕೃತಿಗಳ ಕಾರಂತರು ರಚಿಸಿದ್ದವು.
    “ಬಾಲ ಪ್ರಪಂಚ”,”ವಿಜ್ಞಾನ ಪ್ರಪಂಚ”,”ಪ್ರಾಣಿ ಪ್ರಪಂಚ”, ಈ ವಿಶ್ವಕೋಶ ಮಕ್ಕಳ ಸಾಹಿತ್ಯಕ್ಕೆ ಕಾರಂತರು ಕೊಟ್ಟ ವಿಶಿಷ್ಟ ಕೊಡುಗೆಗೊ.
  • ಪತ್ರಿಕಾಕ್ಷೇತ್ರಲ್ಲಿ ಶುರು ಮಾಡಿದ ತಮ್ಮದೇ ಪತ್ರಿಕೆ “ವಸಂತ” ಕ್ಕೆ ಬೇಕಾಗಿ ಪತ್ತೇದಾರಿ ಕಾದಂಬರಿಯನ್ನೂ ಬರದವು.

ಭಾಷಾ ಬೋಧನೆಯ ಕಾರ್ಯಲ್ಲಿಯೂ ಕಾರಂತರು ಮಾಡಿದ ಕೆಲಸ ಅತ್ಯಮೋಘ.
ಕನ್ನಡಕ್ಕಾಗಿ ದುಡುದು, ಕನ್ನಡಲ್ಲೇ ಬರದು, ಕನ್ನಡದ ಸಂಸ್ಕೃತಿ, ಮಹತ್ವಂಗಳ ವಿಶ್ವ ಸಾಹಿತ್ಯ ಪ್ರಪಂಚದ ಎತ್ತರಕ್ಕೆ ಏರಿಸಿದ ಈ ಮಹಾನ್ ಲೇಖಕ ಕನ್ನಡಕ್ಕೆ ಮೂರನೆ ಜ್ಞಾನಪೀಠ ಪ್ರಶಸ್ತಿಯ ಗರಿ ಸಿಕ್ಕಿಸಿದವು.!
ಸತತ ಪರಿಶ್ರಮಂದ ಅರಿವಿನ ದಿಗಂತವ ವಿಸ್ತರಿಸಿ ತಾವು ತಿಳ್ಕೊಂಡದರನ್ನೇ ಹೇಳಿದ, ಹೇಳಿದ ಹಾಂಗೆ ನಡದ ಶಿವರಾಮ ಕಾರಂತರು ನಮ್ಮ ನಡುಕೆ ಬಾಳಿದ ಮಹಾನ್ ಚೇತನ, ಅವು ಒಂದು ವಿಸ್ಮಯ, ಸಾಹಿತ್ಯ ಲೋಕದ ಬಾನಿಲಿ ನಿರಂತರವಾಗಿ ಮಿನುಗುವ ಬೆಳ್ಳಿಚುಕ್ಕಿ.!
ಕಾರಂತರಿಂಗೆ ಕಾರಂತರೇ ಸಾಟಿ.!!!

~~*^*~~

ಆಧಾರ :

  1. ಹುಚ್ಚು ಮನಸಿನ ಹತ್ತು ಮುಖಗಳು – ಲೇ. ಡಾ. ಕೆ. ಶಿವರಾಮ ಕಾರಂತ
  2. ಶಿವರಾಮ ಕಾರಂತ  – ಲೇ . ಮಂಜುನಾಥ ಮೇಗರವಳ್ಳಿ ( ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಲೆ)
  3. ಕರ್ನಾಟಕದ ಕವಿ – ಲೇಖಕರು – ಲೇ. ಡಾ. ಪಾಟೀಲ ಪುಟ್ಟಪ್ಪ

ಚಿತ್ರ : ಅಂತರ್ಜಾಲಂದ

10 thoughts on “ಕನ್ನಡ ಸಾಹಿತ್ಯಲೋಕದ ವಿಸ್ಮಯ – ಕೋಟ ಶಿವರಾಮ ಕಾರಂತ

  1. ಕಾರ೦ತರ ನೆನಪ್ಪು ಮಾಡಿಕೊಡುವ ತೆಕ್ಕು೦ಜ ಮಾವನ ಶುದ್ದಿ ಕೊಶಿ ಕೊಟ್ಟತ್ತು.ಬಾಲ್ಯಲ್ಲಿ ನೋಡಿದ ಕಾರ೦ತರ “ಯಕ್ಷಗಾನ ರೂಪಕ” ಪ್ರಯೋಗ೦ಗಳ ಮರವಲೆಡಿಯ.
    ಅವರ ಕಥೆಗೊ ನಿಜಜೀವನದ ದರ್ಶನ -ವಿಮರ್ಶೆಗಳೇ ಅಲ್ಲದೋ?

  2. ತುಂಬ ಸಂತೋಷ , ಗೋಪಾಲಣ್ಣ.

  3. ಕೂಡಲೇ ಬರೆಯೆಕ್ಕು ಹೇಳಿ ತೋರಿತ್ತು. ಕಾರಂತರು ಎನಗೆ ಬರೆದ ಕೆಲವು ಪತ್ರಂಗಳ ಬಗ್ಗೆ ಬರೆದ್ದೆ. ಈ ಪತ್ರಂಗಳ ಪೈಕಿ ಕಡೆಯಾಣದ್ದರ ಎನಗೆ ಮರೆವಲೆ ಎಡಿಯ.

  4. ಕಾರಂತರು ಅವಕ್ಕೆ ಬರೆದ ಕಾಗದಕ್ಕೆ ಕೂಡಲೇ ಉತ್ತರ ಕೊಟ್ಟುಕೊಂಡಿತ್ತಿದ್ದವು.ಎನಗೆ ಆರೇಳು ಸರ್ತಿ ಬರೆದ್ದವು.ಅದರ ಬಗ್ಗೆ ಇನ್ನೊಂದಾರಿ ಬರೆತ್ತೆ.

  5. ಶಿವರಾಮ ಕಾರ೦ತರ ಬಗ್ಗೆ ಬರದ್ದು ಭಾರಿ ಲಾಯ್ಕಾಯಿದು ಮಾವ..ಪುತ್ತೂರಿಲಿಪ್ಪ ಅವರ ಬಾಲವನ ಕ್ಕೆ ಸುಮಾರು ಸಮಯದ ಹಿ೦ದೆ ಹೋಗಿತ್ತಿದ್ದೆ.ಲೇಖನ ಓದಿ ಅಪ್ಪಗ ಹೋದ್ದದು ನೆನಪ್ಪಾತು.

  6. ಕಾರಂತರ ಕಥೆಗಳ ವೈಶಿಷ್ಟ್ಯಹೇಳಿರೆ ಎಲ್ಲಾ ಕಥಾ ಪಾತ್ರಂಗಳುದೆ ಬಹಳ realistic ಆಗಿ ಇರ್ತು. ಕಥೆ ಹೇಳಿ ಅನ್ಸುತ್ತೆ ಇಲ್ಲೇ. ಅವರ ಬೆಟ್ಟದ ಜೀವ, ಅಳಿದ ಮೇಲೆ , ಕರುಳಿನ ಕರೆ ಮೊದಲಾದ ಕಥೆಗಳಲ್ಲಿ ಹವ್ಯಕ ಜೀವನದ ಸಮಗ್ರ ವಿವರಣೆಯೂ ಇದ್ದು.

  7. ಕಾರಂತರ ಜೀವನ ಚರಿತ್ರೆಯ ಚೆಂದಕೆ ಒದಗುಸಿಕೊಟ್ಟ ಕುಮಾರಣ್ಣಂಗೆ ಧನ್ಯವಾದ. ಕಾರಂತರಿಂಗೆ ಕಾರಂತರೇ ಸಾಟಿ, ಸರಿಯಾದ ಮಾತು.

  8. ಕಾರಂತರು ಕೈ ಆಡುಸದ್ದ ಕ್ಷೇತ್ರ ಇಲ್ಲೆ.
    ಅವಕ್ಕೆ ಅವ್ವೇ ಸಾಟಿ.
    ಇಷ್ಟೊಂದು ವಿವರ ಒದಗಿಸಿಕೊಟ್ಟ ಕುಮಾರಣ್ಣಂಗೆ ಧನ್ಯವಾದಂಗೊ.

  9. [ನಿಜವಾದ ಕಾರಂತ ಏನು ಎಂಬ ಅರಿವು ಯಾರಿಗೂ ಇಲ್ಲ, ಸ್ವತಃ ಅವರಿಗಾದರೂ ಇದೆಯೋ ಇಲ್ಲವೋ !”] – ಸೂಕ್ತವಾದ ನುಡಿ.

    ಕುಮಾರ ಮಾವನ ಶೈಲಿಲಿ ಕಾರಂತರ ಬಗ್ಗೆ ಶುದ್ದಿ ಲಾಯಕ ಮೂಡಿಬೈಂದು., ಓ ಕಾರಂತರ! ಹೇಳಿ ಹೇಳುತ್ತವಕ್ಕೂ ಓಹ್! ಕಾರಂತರಾ..! ಹೇಳಿ ಅರ್ಥಮಾಡಿಗೊಂಬಲೂ ಆತು ಎಂಬುದೀಗ ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×