“ವಿಷುವಿಶೇಷ ಸ್ಪರ್ಧೆ – 2013” : ಹೇಳಿಕೆ

ಆಧುನಿಕ ಯುಗದ ಅಂತರ್ಜಾಲಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಹೇಳ್ತ  ಹವ್ಯಕ ವೆಬ್-ಸೈಟ್ ಕಳೆದೈದು ವರುಷ೦ದ ತನ್ನ ಸಾಹಿತ್ಯ ಕೃಷಿಯ ಮಾಡುತ್ತಾ ಬೈಂದು .
Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳಿ  ಸರಕಾರೀ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆ ಆಯಿದು.

ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಲಿ ತನ್ನ  ಪ್ರಯತ್ನ ಮಾಡ್ತಾ ಇಪ್ಪ ಪ್ರತಿಷ್ಠಾನ, ಮುಂದೆ  ಸಾಮಾಜಿಕ- ಸಾಂಸ್ಕೃತಿಕ ಕಾರ್ಯಕ್ರಮಂಗಳ ಮೂಲಕ ವ್ಯಾಪ್ತಿವಿಸ್ತಾರವ ಹೆಚ್ಚುಸುವ ಯೋಜನೆಲಿ ಇದ್ದು.
ಕಳುದ ವರ್ಷದ ಯುಗಾದಿಗೆ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆ – ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ಕೊಟ್ಟಿದು.

ಈ ವರ್ಷವೂ ಯುಗಾದಿಯ ಪರ್ವಕಾಲಲ್ಲಿ ಹವ್ಯಕ ಸಾಹಿತ್ಯದ ಬೆಳವಣಿಗೆಗಾಗಿ  “ವಿಷು ವಿಶೇಷ ಸ್ಪರ್ಧೆ – 2013” ಆಯೋಜನೆ ಮಾಡ್ತಾ ಇದ್ದು.
ಬನ್ನಿ, ಭಾಗವಹಿಸಿ, ನಿಂಗಳ ನೆಂಟರು ಮಿತ್ರರಿಂಗೂ ತಿಳುಶಿ …

ವಿಷು ವಿಶೇಷ ಸ್ಪರ್ಧೆ – 2013  ವಿವರಂಗೊ:

 1. ಪ್ರಬಂಧ:
  ವಿಷಯ – “ಹವ್ಯಕರು ಅಂದು ಇಂದು
  750 ಶಬ್ದಂಗೊಕ್ಕೆ ಸೀಮಿತವಾಗಿರಲಿ.
 2.  ಕಥೆ :
  ವ್ಯಾಪ್ತಿ: ಸಾಮಾಜಿಕ ಜೀವನ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
  1000 ಶಬ್ದಂಗೊಕ್ಕೆ ಸೀಮಿತವಾಗಿರಲಿ.
 3.  ಕವಿತೆ:
  ವಿಷಯ: ಮಳೆಗಾಲಲ್ಲಿ ಒಂದು ದಿನ.
  30 ಸಾಲುಗಳ ಒಳ ಇರಳಿ .
  ಛಂದೋಬದ್ಧವಾದ ಕವಿತೆಗೊಕ್ಕೆ ಹೆಚ್ಚಿನ ಆದ್ಯತೆ.
 4. ನೆಗೆಬರಹ:
  ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ.
  500 ಶಬ್ದಂಗೊಕ್ಕೆ ಮಿತಿಗೊಳುಸಿ .
  (ಅಪಹಾಸ್ಯ, ಅಶ್ಲೀಲತೆಗೊ ಬೇಡ)
 5. ಫೋಟೋ  ಸ್ಪರ್ಧೆ:
  ಹವ್ಯಕ ಧಾರ್ಮಿಕ ಆಚರಣೆಗಳ ಪ್ರತಿನಿಧಿಸುವ ಫೋಟೋಕ್ಕೆ ಸೂಕ್ತ ಶೀರ್ಷಿಕೆಯನ್ನೂ ಕೊಟ್ಟು ಕಳುಸಿ .
  ಫೋಟೋದ ಗಾತ್ರ: ಅಂಚೆಯಲ್ಲಿ  ಕಳುಸುತ್ತ ರೆ 5×7 ಅಳತೆಲಿ.
  ಮಿಂಚಂಚೆಲಿ ಕಳುಸುತ್ತರೆ –ಅಳತೆಯ ಮಿತಿಯಿಲ್ಲೆ.

ನಿಯಮಂಗೊ:

 • ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಲಿಯೇ ಇರೇಕು.
 • ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆಗಳ ಬಿಂಬುಸುವ ಬರಹಂಗೊಕ್ಕೆ ಆದ್ಯತೆ.
 • ಸ್ಪರ್ಧೆಗೆ ಬಪ್ಪ ಯಾವುದೇ ಬರಹ / ಫೋಟೋ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
 • ಸ್ಪರ್ಧೆಗೆ ಬಂದ ಎಲ್ಲಾ ಬರಹ / ಫೋಟೋಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರ್ತು.
 • ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
 • ಪ್ರತಿ ವಿಭಾಗಲ್ಲಿ ಪ್ರಥಮ ಮತ್ತು ದ್ವಿತೀಯ – ಎರಡು ಬಹುಮಾನಂಗೊ  ಇರ್ತು.
  ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾನವನ್ನೂ ಕೊಡುವ ಯೋಜನೆ ಇದ್ದು.
 • ಬಹುಮಾನ ವಿಜೇತರುಗಳ ವಿಷುವಿನಂದು (14-04-2013) http://oppanna.com ಅಂತರ್ಜಾಲಲ್ಲಿ ಪ್ರಕಟ ಆವುತ್ತು.
 • ಭಾಗವಹಿಸುಲೆ ಕೊನೇ ದಿನ : 03-03-2013

ನಿಂಗಳ  ಬರಹ/ಫೋಟೋ  ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳ ಸಹಿತ,
ಈ ವಿಳಾಸಕ್ಕೆ ಕಳುಸಿ:

ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
“ಅನುಗ್ರಹ”, ಶಿವಗಿರಿ ನಗರ, ಹೊಸಬೆಟ್ಟು,
ಮಂಗಳೂರು – 575019

ಮಿಂಚಂಚೆ ವಿಳಾಸ:
editor@oppanna.com

ಹೆಚ್ಚಿನ ಮಾಹಿತಿಗಾಗಿ ಈ ನಂಬ್ರಂಗಳಲ್ಲಿ ಸಂಪರ್ಕಿಸಿ :

 • ಮಂಗಳೂರು – 09449806563 / 09591994644
 • ಕಾಸರಗೋಡು – 08547245304
 • ಬೆಂಗಳೂರು – 09448472292 / 09535354380 / 09448271447

ಅಥವಾ http://oppanna.com/?p=28834 ಅಂತರ್ಜಾಲ ಪುಟಲ್ಲಿ ಸಿಕ್ಕುತ್ತು.

~

ವಿಷು ವಿಶೇಷ ಸ್ಪರ್ಧೆ 2013 – ಸಂಚಾಲಕರು:
ರವಿಶಂಕರ ದೊಡ್ಡಮಾಣಿ
editor@oppanna.com /  08547245304

~

ಗಮನಿಸಿ: ಈ ಸ್ಪರ್ಧೆ ಹವ್ಯಕರಿಂಗಾಗಿ ಮಾಂತ್ರ ಅಲ್ಲ, ಹವ್ಯಕ ಭಾಷೆಗಾಗಿ.

ಸಂಪಾದಕ°

   

You may also like...

14 Responses

 1. ಚೆನ್ನೈ ಭಾವ° says:

  ಹೋ… ಈ ಶುದ್ದಿ ನೋಡಿ ಕೊಶಿ ಆತಿದಾ. ಈ ವರ್ಷವೂ ವಿಷು ಸ್ಪರ್ಧೆ ಮಡಿಕ್ಕೊಂಡದು ಲಾಯಕ ಆತು. ಭಾಗವಹಿಸುವವಕ್ಕೆ ಸಾಕಷ್ಟು ಸಮಯಾವಕಾಶವೂ ಇದ್ದು.

  ಎಲ್ಲೋರು ಭಾಗವಹಿಸಿ ಹವ್ಯಕ ಸಾಹಿತ್ಯ ಉಳಿಶಿ ಬೆಳೆಶುವೊ. ಎಲ್ಲೋರು ಆಸಕ್ತಿ ಹುರುಪಿಂದ ಭಾಗವಹಿಸುವೊ. ಸ್ಪರ್ಧೆ ಹೇಳ್ವದು ಒಂದು ವಿಷಯ ಮಾಂತ್ರ ಹೇದು ತಿಳ್ಕೊಂಡು ನಮ್ಮ ನಮ್ಮಲ್ಲಿಪ್ಪ ಯತ್ಕಿಂಚಿತ್ ಪ್ರತಿಭೆಯನ್ನಾರು ನಮ್ಮ ಬೈಲಿಲಿ ಪ್ರತಿಬಿಂಬಿಸುವೊ.

  ಯಶಸ್ಸಾಗಲಿ.

 2. ರಘು ಮುಳಿಯ says:

  ಹವ್ಯಕ ಭಾಷೆಲಿ ಸಾಹಿತ್ಯಸೇವೆಗೆ ಇದೊ೦ದು ವೇದಿಕೆಯಾಗಲಿ.ಹವ್ಯಕ ಸಾಹಿತ್ಯ ಬೆಳೆಯಲಿ,ಹೊಸ ಎತ್ತರಕ್ಕೆ ಏರಲಿ,ಹೆಚ್ಚು ಹೆಚ್ಚು ನೆ೦ಟ್ರು,ಸಾಹಿತ್ಯಾಸಕ್ತರು
  ಭಾಗವಹಿಸಿ ಈ ವಿಷು ಹಬ್ಬವ ಚೆ೦ದಗಾಣಿಸಲಿ ಹೇಳಿ ಹಾರೈಸುತ್ತೆ.

  • ಉಡುಪುಮೂಲೆ ಅಪ್ಪಚ್ಚಿ says:

   ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದಿ.ಇನ್ನಷ್ಟೂ ಹೊಸ ಹೊಸ ಹವ್ಯಕ ಪ್ರತಿಭಗೊ ಬೆಣಚ್ಹಿ೦ಗೆ ಬಪ್ಪಲುದೆ ಇದು ಒ೦ದು ಸದವಕಾಶ ಮಾಡಿ ಕೊಟ್ಟಾ೦ಗೆ ಆವುತ್ತಿದಾ. ನಮ್ಮ ಬೈಲು ಹವ್ಯಕರೆಲ್ಲರ ಮನೆ ಹಾ೦ಗೂ ಮನಸಿಲ್ಲಿಯುದೆ ಮೆರವ ಹಾ೦ಗಾಯೆಕು. ಈ ಸತ್ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಹೇದು ಪ್ರಾರ್ಥನೆ.

 3. ಒಬ್ಬಂಗೆ ಎಷ್ಟು ಎಂಟ್ರಿ ಕಳುಸಲೆಡಿಗು? ಫೊಟೋ ಸ್ಪರ್ಧೆಗೆ ೨ ಅಥವಾ ೩ ಎಂಟ್ರಿ ಮಿತಿ ಮಡಗಿರೆ ಒಳ್ಳೆದು. ಹಾಂಗೆ ಹೇಳಿದ್ದು.

 4. ಲಾಯ್ಕಾತು. ತುಂಬಾ ಇಷ್ಟವಾದ ಮಾತು ಇದು “ಈ ಸ್ಪರ್ಧೆ ಹವ್ಯಕರಿಂಗಾಗಿ ಮಾಂತ್ರ ಅಲ್ಲ, ಹವ್ಯಕ ಭಾಷೆಗಾಗಿ.”

 5. ಒಬ್ಬರು ಎಷ್ಟು ಸ್ಪರ್ಧೆಗಳಿಗೆ ಭಾಗವಹಿಸಲಕ್ಕು?

 6. ಅಶೋಕ ಜಿ ಯು says:

  ಮಕ್ಕೊಗೆ ಅವಕಾಶ ಇದ್ದೋ? ( ವಿದ್ಯಾರ್ಥಿಗೊಕ್ಕೆ)

  • ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

   ಮಕ್ಕೊಗೂ ಬರವಲೆ ಅಕ್ಕನ್ನೆ…

  • ರಘು ಮುಳಿಯ says:

   ಖ೦ಡಿತಾ ಇದ್ದು.ಹವ್ಯಕ ಭಾಷಾಸಾಹಿತ್ಯದ ಬೆಳವಣಿಗೆಯ ದೃಷ್ಟಿ೦ದ ಆಯೋಜನೆ ಆವುತ್ತಾ ಇಪ್ಪ ಈ ಕಾರ್ಯಕ್ರಮಲ್ಲಿ ಎಲ್ಲೋರೂ ಭಾಗವಹಿಸೆಕ್ಕು ಹೇಳಿ ಬೈಲ ನೆ೦ಟ್ರ ಪರವಾಗಿ ವಿನ೦ತಿ.ವಿದ್ಯಾರ್ಥಿಗೊ ಆಸಕ್ತಿಲಿ ಪಾಲುಗೊ೦ಡರೆ ಇನ್ನೂ ಕೊಶಿಯಲ್ಲದೋ?
   (ಹುಟ್ಟಿದ ತಾರೀಕು ತಿಳುಸೆಕ್ಕು ಹೇಳಿ ಒ೦ದು ನಿಯಮ ಇಪ್ಪದು ಈ ಕಾರಣಕ್ಕಾಗಿಯೂ ಅಪ್ಪು.)

 7. ಬೆಟ್ಟುಕಜೆ ಮಾಣಿ says:

  ಯಶಸ್ವಿ ಆಗಲಿ..

 8. ಶ್ಯಾಮಣ್ಣ says:

  ಅಲ್ಲ… ಇಲ್ಲಿಗೆ ಕತೆ ಬರದು ಕಳಿಸಿದ ಮೇಲೆ, ಒಂದು ವೇಳೆ ಅದು ಸೆಲೆಕ್ಟ್ ಆಗದ್ದರೆ, ಅದರ ಮತ್ತೆ ಬೈಲಿಲಿ ಪ್ರಕಟ ಮಾಡ್ಲೆ ಅಕ್ಕಾ? ಅಥವಾ ಅದಕ್ಕೆ ನಿಷೇಧ ಇದ್ದಾ?

  • ಕತೆಗೆ ಪ್ರಶಸ್ತಿ ಬಂದರೂ, ಬಾರದ್ರೂ ಅದು ನಮ್ಮ ಬೈಲಿಂದೇ ಆಸ್ತಿ ಶ್ಯಾಮಣ್ಣ, ನವಗೆ ಎಲ್ಲೋರಿಂಗೂ ಓದಲಿಪ್ಪದು. ಎಲ್ಲೋರಿಂಗೂ ಓದಲೆ ಆವ್ತ ಹಾಂಗಿಪ್ಪದಾದರೆ ಖಂಡಿತಾ ಅದರ ನಮ್ಮ ಬೈಲಿಲ್ಲಿ ಪ್ರಕಟ ಮಾಡ್ಳೆ ಇದ್ದು. ಕಳುದ ಸರ್ತಿ ಬಂದ ಹೆಚ್ಚಿನ ಬರಹಂಗೊ ಹಸ್ತ ಪ್ರತಿ ಆದ ಕಾರಣ, ಅದರ ಎಲ್ಲವನ್ನೂ ಟೈಪುಸಿ ಪ್ರಕಟ ಮಾಡ್ಳೆ ಎಡಿಗಾಯಿದಿಲ್ಲೆ. ಈ ಸರ್ತಿ ಹಾಂಗೆ ಆಗದ್ದ ಹಾಂಗೆ ಪ್ರಯತ್ನ ಮಾಡುವೊ°. ಆಗದೋ…?

 9. ಶ್ಯಾಮಣ್ಣ says:

  ಫಲಿತಾಂಶ ಬೈಲಿಲಿ ಯಾವಾಗ ಪ್ರಕಟ ಅಪ್ಪದು?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *