ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )
ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!
ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!
ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?
ನಿ೦ಗೊ ಬರೆತ್ತಾ ಇರಿ ಹೀ೦ಗೆ ಚೆ೦ದದ ಪದ್ಯ೦ಗಳ.
ಆರಿ೦ಗು ಹರಿದಿಡುಕ್ಕಲೆಡಿಯ ಅದರ.
ಭಾವನ ಭಾವ೦ದ ಬೆರಳಿ೦ದ ಮಊಡಿ ಬರಲಿ
ಇನ್ನು ಹಲವು ಕವನಗಳ ಸಾಲು ಸಾಲು
ಹಟದ ಕವಿ ಬರದ ಪದ ಓದಿ ಆತು
ಪುಟವ ತಿರುಗಸಲುದೇ ಮರದು ಹೋತೂ.. sss
ಬರಳಿ ಕವಿತೆಯ ಕ೦ತೆ ಗೋಣಿಗಟ್ಟಲೆ ಬೇಗ
ಕೆಲಸದಾ ಬೆಶಿ ಮರವೆ ಓದಿ ನಿತ್ಯ
ಸುಳ್ಳಲ್ಲ ಹೇಳುತ್ಸು ಎನ್ನಾಣೆ ಸತ್ಯಾ ॥ಹಟದ॥
🙂
ಎಲ್ಲ ಓದುವೆ ಎಂಗೊ
ನೀನು ಬರವದು ಬಿಡೆಡ
ಬರಲಿ ನಿತ್ಯವು ನಿನ್ನ ಭಾವ ಸಾರ
ಹಾಡು ಕವನವೆ ಇರಲಿ
ಲೆಕ್ಕ ಚೊಕ್ಕಕೆ ಇರಲಿ
ಕೊಡುವೆ ಒಪ್ಪವ ನಿನಗೆ, ನಿನ್ನ ಮತಿಗೆ
ಪದ್ಯ ಲಾಯ್ಕಾಯ್ದು ಗೋಪಾಲಣ್ಣ. ಬೊಳುಂಬು ಮಾವ ಹೇಳಿದಾಂಗೆ, ನಮ್ಮ ಬೈಲಿಲಿ ಬರದ್ದರ ಹರುದಿಡ್ಕುವ ಪ್ರಶ್ನೆಯೇ ಇಲ್ಲೆಪ್ಪ. ಎಲ್ಲದಕ್ಕೂ ಸ್ವಾಗತ, ಪ್ರೋತ್ಸಾಹ ಇದ್ದೇ ಇದ್ದು.
ಓ..ಖಂಡಿತಾ..! ಮನಕೊಟ್ಟು ಓದುತ್ಯೊ ಎಂಗೊ ಇಲ್ಲಿ.
ಬರಲಿ ಇನ್ನೂ…
ನಿಂಗಳ ಕಥೆ, ಕವನಂಗಳ ಹರುದಿಡ್ಕುತ್ತೆಯೊ° ಹೇಳಿ ಚಿಂತೆ ಮಾಡೆಕಾದ ಅಗತ್ಯ ಇಲ್ಲೆ ಗೋಪಾಲಣ್ಣ. ಓದಿ, ಮೆಚ್ಚಿ ಖಂಡಿತಾ ಒಪ್ಪ ಕೊಡುತ್ತೆಯೊ. ನಿಂಗೊ ಬೈಲಿನ ಬಲು ದೊಡ್ಡ ಆಸ್ತಿ.
ಕವನ ಸೂಪರ್ ಆಯಿದು. ಹವ್ಯಕಲ್ಲಿ ಎದೆ ತುಂಬಿ ಹಾಡಲುದೆ ಅಕ್ಕು.
ಹಠ ಒಳ್ಳೆದೆ… ನಾವು ಅದರ ಯಾವ ತರಲ್ಲಿ ಉಪಯೋಗಿಸುತ್ತು ಹೇಳುದರಲ್ಲಿ ಇಪ್ಪದು… ‘ಸರ್ವೇ ಜನಾ: ಸುಖಿನೋ ಭವಂತು’ ಹೇಳುವ ಉದ್ದೇಶಂದ ಒಳ್ಳೆ ತರಲ್ಲಿ ಹಠವ ಉಪಯೋಗಿಸಿರೆ ತುಂಬಾ ಉತ್ತಮ ಫಲ ಕೊಡುತ್ತು…
ಕವಿ ಹೃದಯವ ಬಲ್ಲ ಓದುಗಳಾಗಿ ಹೇಳುತ್ತಾ ಇದ್ದೆ “ಗೋಪಾಲಣ್ಣನ ಛಲದ ಜೀವನದ ಬಗ್ಗೆ ಎನಗೆ ತುಂಬಾ ಹೆಮ್ಮೆ ಇದ್ದು”
ವಾ..!
ಲಾಯಕೆ ಆಯಿದು ಮಾವ.
[ಕಳುಗುತ್ತೆ ಕವಿತೆಗಳ ಕಂತೆ ಕಂತೆ] – ಬರ್ಲಿ ಬರ್ಲಿ ಹೇಳಿ ನಮ್ಮದೊಂದು ಒಪ್ಪ ಇತ್ಲಾಗಿಂದ.