ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )
ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!
ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!
ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?
ಲಾಯಿಕ್ಕಾಯಿದು, ಅಭಿನ೦ದನೆಗೊ ಗೋಪಾಲಣ್ಣಾ,.
“ಕತ್ತೆ”ಯ ಓಡುಸಿ ನಂ “ದನ” ಬಯಿಂದು. ಈ ಸಂವತ್ಸರ ಎಲ್ಲೋರಿಂಗೂ ನೆಮ್ಮದಿ ಉಂಟು ಮಾಡಲಿ. ಗೋಪಾಲಣ್ಣನ ಕವನದ ಆಶಯ ಒಳ್ಳೆದಾಯಿದು.
ದನ ಇದ್ದಲ್ಲಿ ನಂದನವನವೇ… ಬೊಳುಂಬು ಮಾವನ ಒಪ್ಪ ಇಷ್ಟ ಆತು…
ಬಂದೆಯಾ ನಂದನ
ಗೋಪಾಲಣ್ಣನ ಕವನ
ಬೈಲಿನ ಅಭಿನಂದನ
ಸೆಳೆತ್ತ ಇದ್ದು ಕಣ್ಮನ
ಗೋಪಾಲಣ್ಣಂಗೆ ಅಭಿನಂದನೆ ಹಾಂಗೂ ಶುಭಾಶಯಂಗ
Gopalannana kavana tumba chenda aayidu Olleya manassu Olleya kanasu Olleya haaraike Abhinandane Oppann.com gude
ಗೋಪಾಲಣ್ಣ,
ಶಾಂತಿ ತಾರೊ ನಂದನ — ಒಳ್ಳೆ ಕೋರಿಕೆ.ಈಗ ನಡೆತ್ತಾ ಇಪ್ಪ ಗುಲ್ಲು ಗುಟುರು ನಿ೦ದರೆ ರಜಾ ನೆಮ್ಮದಿ ಅಕ್ಕು !
{ಆಂಗ್ಲ ಕವಿಯ ಎಣಿಕೆ ನಮಗೆ
ಆಗಲಿಂದು ದಾರಿದೀಪ!}
ಇದೊ೦ದು ಬಗೆ ಅರ್ಥ ಆತಿಲ್ಲೆನ್ನೇ.
ಶುಭಾಶಯ೦ಗೊ.
ಆಂಗ್ಲ ಕವಿ ಪಿ.ಬಿ.ಶೆಲ್ಲಿ ಅವ ಬರೆದ ಓಡ್ ಟು ದ ವೆಸ್ಟ್ ವಿಂಡ್ ಕವಿತೆಲಿ-If winter comes , Can spring be far behind? ಹೇಳಿ ಹೇಳಿದ್ದ.[ಚಳಿಗಾಲ ಬಂತು ಹೇಳಿ ಆದರೆ ವಸಂತಕಾಲ ಇನ್ನೂದೂರ ಇರ ಅಲ್ಲದೊ?]
ಅದರ ಆನು ಇಲ್ಲಿ ಸೂಚಿಸಿದ್ದು. ಶೆಲ್ಲಿಯ ಈ ಸಾಲುಗೊ ಆಶಾವಾದದ ಪ್ರತೀಕ.
ಹೋ.ತು೦ಬಾ ಇಷ್ಟ ಆತು ಗೋಪಾಲಣ್ಣ.
ಈ ಆಶಾವಾದವೇ ನಮ್ಮ ಜೀವನಕ್ಕೆ ಹೊಸ ಉತ್ಸಾಹ ಮೂಡುಸೊದು.
ಖರ ಹೇಳಿರೆ ಕತ್ತೆ ಹೇಳುದರ ಕಳೆದ ವರ್ಷದ ಕವನಲ್ಲಿ ಬರೆದಿತ್ತಿದ್ದೆ.
ಗೋಪಾಲಣ್ಣಂಗೆ ಅಭಿನಂದನೆ.