- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ಹಪ್ಪಳ
ಬೇಕಪ್ಪ ಸಾಮಾನುಗೊ:
- 5 ಲೀಟರ್ ಪಾತ್ರ ತುಂಬ ಆದ ಹಲಸಿನಕಾಯಿ ಸೊಳೆ
- 1-1.5 ಚಮ್ಚೆ ಎಳ್ಳು
- ರುಚಿಗೆ ತಕ್ಕಸ್ಟು ಉಪ್ಪು
- ಎಣ್ಣೆ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ.
ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಗೂಂಜಿನ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಸೊಳೆಯ ನೀರಿಲ್ಲಿ ಲಾಯಿಕ ತೊಳದು ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ಉಪ್ಪು ಹಾಕಿ 20-30 ನಿಮಿಷ ಬೇಶಿ.
ಬೆಂದ ಸೊಳೆಯ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. ಅದಕ್ಕೆ ಎಳ್ಳು ಹಾಕಿ ಬೆರುಸಿ.
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಮೇಲೆ ತಯಾರಿಸಿದ ಹಿಟ್ಟಿಂದ ನಿಂಬೆ ಹಣ್ಣಿನ ಗಾತ್ರದ ಉಂಡೆಗಳ ಮಾಡಿ.
ಎರಡು ಸಣ್ಣ ಪ್ಲಾಸ್ಟೀಕು ಶೀಟಿಂಗೆ ಎಣ್ಣೆ ಪಸೆ ಮಾಡಿ, ಉಂಡೆಯ ಎರಡು ಪ್ಲಾಸ್ಟೀಕು ಶೀಟಿನ ನಡುಕೆ ಮಡುಗಿ ಹಪ್ಪಳದ ಮಣೆಲಿ ಒತ್ತಿ.
ಮೇಗಾಣ ಪ್ಲಾಸ್ಟೀಕು ಶೀಟ್ ತೆಗದು, ಹಪ್ಪಳವ ಕವುಂಚಿ ಇನ್ನೊಂದು ದೊಡ್ಡ ಪ್ಲಾಸ್ಟೀಕು ಶೀಟ್/ ಬಾಳೆ ಎಲೆ / ಮುಂಡಿ ಎಲೆಲಿ ಹಾಕಿ ಇನ್ನೊಂದು ಸಣ್ಣ ಪ್ಲಾಸ್ಟೀಕು ಶೀಟಿನ ತೆಗೆರಿ.
ಇದರ 5-6 ದಿನ ಬೆಶಿಲಿಲ್ಲಿ ಒಣಗ್ಸಿ, ಒಂದು ಇರುಳು ತಣ್ಣಂಗೆ ನೆಲಕ್ಕಲ್ಲಿ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಟ್ಟ ಕಟ್ಟಿ, ಪುನಃ ಒಂದು 3-4 ದಿನ ಬೆಶಿಲಿಲ್ಲಿ ಒಣಗುಸಿ ಡಬ್ಬಿಲಿ ತೆಗದು ಮಡುಗಿ.
ಇದರ ಎಣ್ಣೆಲಿ ಹೊರುದು ಅಥವಾ ಕೆಂಡ/ಮೈಕ್ರೊವೇವ್ಲ್ಲಿ ಸುಟ್ಟಾಕಿ ತೆಂಗಿನ ಎಣ್ಣೆ ಕಿಟ್ಟಿ, ಕಾಯಿ ಹೋಳಿನ ಒಟ್ಟಿಂಗೆ ತಿಂಬಲೆ ಕೊಡಿ. ಇದು ಅಶನ, ಸಾರಿನ ಒಟ್ಟಿಂಗೆ ಕೂಡ್ಲುದೇ ಲಾಯಿಕ ಆವುತ್ತು.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 80 ಹಪ್ಪಳ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಮದಲಿಂಗೆ ಮಾಡಿ ಅಭ್ಯಾಸ ಇತ್ತಿದ್ದು(ಅಜ್ಜನ ಮನೆಲಿ), ಈಗ ಮಾಡಿದ ಹಪ್ಪಳ ಕಟ್ಟವ ಹೊತ್ತು ತಪ್ಪದು, ಹೊರುದು ತಿಂಬದು.
ಎನ್ನ ಅಭಿಪ್ರಾಯದೆ ಚೆನ್ನೈಭಾವ ಮತ್ತೆ ಶರ್ಮಪ್ಪಚ್ಚಿ ಬರದ್ದದೆ…
ಹಪ್ಪಳ ತಯಾರಿಗೆ ತುಂಬ ಕೆಲಸ ಇದ್ದು, ಅದರೆಲ್ಲವನ್ನೂ ಅಷ್ಟೂ ಲಾಯಿಕಲ್ಲಿ ಫೊಟೋ ಸಮೇತ ಬರದ್ದು ಓದುವಗ ಮೊದಲು ಊರಿಲ್ಲಿ ಎಲ್ಲರೂ ಸೇರಿ ಹಪ್ಪಳ ತಯಾರ್ಸಿದ್ದೆಲ್ಲ ನೆಂಪಾತು.
~ಸುಮನಕ್ಕ…
ಹೊರುದ ಹಪ್ಪಳದ ಪಟ ಕಾಂಬಗ, ಅಲ್ಲಿಂದಲೇ ತೆಗದು ತಿಂಬೊ ಹೇಳಿ ಕಾಣುತ್ತನ್ನೆ
ಲಾಯಕ ಆಯ್ದು ಹೇಳಿ ಹೇಳಿರೆ ಕಣ್ಣು ತಾಗನ್ನೇ , ಕೊದಿ ತಾಗನ್ನೇ.