- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನಕಾಯಿ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
- 1/4 ಸಾಧಾರಣ ಗಾತ್ರದ ಬೆಳದ ಹಲಸಿನಕಾಯಿ ಅಥವಾ 8-10 ಕುಡ್ತೆ ಕೊಚ್ಚಿದ ಹಲಸಿನಕಾಯಿ
- 1/4 ಚಮ್ಚೆ ಅರುಶಿನ ಹೊಡಿ
- 3-4 ಚಮ್ಚೆ ಮೆಣಸಿನ ಹೊಡಿ
- ರುಚಿಗೆ ತಕ್ಕಸ್ಟು ಉಪ್ಪು
- 1/4 ಕಪ್(ಕುಡ್ತೆ) ಕಾಯಿ ತುರಿ
- 8-10 ಬೇನ್ಸೊಪ್ಪು
- 1.5 ಚಮ್ಚೆ ಉದ್ದಿನ ಬೇಳೆ
- 1 ಚಮ್ಚೆ ಸಾಸಮೆ
- 5-6 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ.
ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಗೂಂಜಿನ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸೊಳೆಯ ಮೆಲ್ಲಂಗೆ ಸಿಗುದು, ಬೇಳೆಯ ಮಾತ್ರ ತೆಗೆರಿ.
ರೆಚ್ಚೆಯ ಮಾತ್ರ ತೆಗದು, ಒಳುದ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ. ಅದರ ನೀರಿಲ್ಲಿ ಹಾಕಿ ಲಾಯಿಕ ತೊಳದು ಮಡುಗಿ.
ಬಾಣಲೆಲಿ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಅದಕ್ಕೆ ಬೇನ್ಸೊಪ್ಪು, ಹಾಕಿ, ಕೊಚ್ಚಿದ ಹಲಸಿನಕಾಯಿಯ ಹಾಕಿ ತೊಳಸಿ.
ಅದಕ್ಕೆ ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು, ಸಾಧಾರಣ 2 ಕುಡ್ತೆ ನೀರು ಹಾಕಿ ತೊಳಸಿ ಮುಚ್ಚಿ ಬೇಶಿ. 2-3 ನಿಮಿಷಕ್ಕೊಂದರಿ ತೊಳಸಿ.
ನೀರು ಆರಿಗೊಂಡು ಬಪ್ಪಗ ಕಾಯಿ ಸುಳಿ ಹಾಕಿ ತೊಳಸಿ. ಒಂದು 2 ನಿಮಿಷ ತಾಳಿನ ಸಣ್ಣ ಕಿಚ್ಚಿಲ್ಲಿ ಮಡುಗಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಹಲಸಿನಕಾಯಿಯೇ ರುಚಿ. ಅದರ ತಾಳು ಇನ್ನೂ ರುಚಿ. ಹ್ಮ್ಮ್ಮ್ .. ಎಣ್ಣೆ ಬರ್ಲಿ.. ಎಣ್ಣೆ.