- ಬಾಯಿ ಬಾರದ್ದ ಸಿನೆಮಾ… - March 13, 2011
- ಪಟ ಪಟ….. - September 4, 2010
- ಕಾಪಿಯ ಬಗ್ಗೆ… - August 10, 2010
ಮೊನ್ನೆ ಶನಿವಾರ (ನಾವು ಸೋಪ್ಟ್-ವೇರು ಅಲ್ಲದೋ? ಸಮಯ ಸಿಕ್ಕುದು ವೀಕೆ೦ಡು ಮಾ೦ತ್ರ ಇದಾ) ಸುಮ್ಮನೆ ಕೂದುಕೊ೦ಡು ಪಟ್ಟಾ೦ಗ ಹೊಡೆತ್ತಾ ಇಪ್ಪಗ ಹೀ೦ಗೆ ಹಿಟ್ಲರನ ಸುದ್ದಿ ಬ೦ತು..
ಎ೦ತಾ ನಿರ್ದಯಿ ಮನುಷ್ಯ.. ಎಷ್ಟು ಜನ ಯಹೂದಿಗಳ ಪ್ರಾಣ ತಿ೦ದಿದು ಆ ಪ್ರಾಣಿ..
ತಲೆಲಿ ಅದ್ಭುತ ಐಡಿಯಾ ಇದ್ದರುದೆ ಅದರ ಸರಿಯಾಗಿ ಕಾರ್ಯರೂಪಕ್ಕೆ ತಪ್ಪಲಾಗದ್ದ ಜೆನ.
(ನಮ್ಮ ಸ೦ಜಯ ಗಾ೦ಧಿ ಇನ್ನೊಬ್ಬ ಅದೇ ರೀತಿಯವ)
ಈ ನಾಝಿಗಳ ಬಗ್ಗೆ ಸುಮಾರು ಸಿನೆಮ ಬೈ೦ದು. ಆದರೆ ಎರಡು ಮಾ೦ತ್ರ ಮರೆವಲಾಗದ್ದು.
ಒ೦ದು ಲೈಫ್ ಈಸ್ ಬ್ಯೂಟಿಫುಲ್ ಇನ್ನೊ೦ದು ಶಿ೦ಡ್ಲರ್ಸ್ ಲಿಸ್ಟ್. ಎರಡುದೆ ಆಸ್ಕರ್ ಪ್ರಶಸ್ತಿ ಗೆದ್ದ ಸಿನೆಮ೦ಗೊ.
(ಆಸ್ಕರ್ ಪ್ರಶಸ್ತಿಯ ಬಗ್ಗೆಯುದೆ ಸುಮಾರು ಕಥೆಗೊ ಇದ್ದು. ಅದರ ಇನ್ನೊ೦ದು ಸರ್ತಿ ಹೇಳ್ತೆ.)
ಲೈಫ್ ಈಸ್ ಬ್ಯೂಟಿಫುಲ್:
ಇದು ಒಬ್ಬ ಸಾಮಾನ್ಯ ಮನುಷ್ಯನ ಕಥೆ. ಇಟಲಿಯ೦ವ ಒಬ್ಬ ಯಹೂದಿ, ಗೈಡೊ ಹೇಳಿ. ಒ೦ದು ಸಣ್ಣ ಹಳ್ಳಿ೦ದ ಬ೦ದವ.
ಒ೦ದು ಪುಸ್ತಕದ ಅ೦ಗಡಿ ಶುರು ಮಾಡುವ ಆಸೆ೦ದ ಆರೆಜೊ ಹೇಳ್ತ ಊರಿ೦ಗೆ ಬತ್ತ. ಕೈಲ್ಲಿ ಪೈಸೆ ಇಲ್ಲೆ. ದುಡ್ಡು ಸ೦ಪಾದನೆಗೆ ಹೋಟೇಲಿಲಿ ಮಾಣಿಯಾಗಿ ಕೆಲ್ಸ ಮಾಡ್ತ.
ಅಲ್ಲಿ ಒ೦ದು ಕೂಸಿನ ಲವ್ ಮಾಡ್ತ – ಅದರ ನಿಶ್ಚಿತಾರ್ಥದ ದಿನ ಹಾರಿಸಿಗೊ೦ಡು ಹೋಗಿ ಮದುವೆ ಆವ್ತ. ಕಾಲಾನ೦ತರ ಜೋಶುವಾ ಹೇಳಿ ಮಗ ಹುಟ್ಟುತ್ತ.
ಮು೦ದೆ ಮಗನ ಬರ್ತ್ ಡೆ ಆಚರಿಸುವ ಹೊತ್ತಿ೦ಗೆ ನಾಝಿ ಪೋಲೀಸರು ಮನೆಯವ್ರ ಅರೆಸ್ಟ್ ಮಾಡ್ತವು.
ಶಿ೦ಡ್ಲರ್ಸ್ ಲಿಸ್ಟ್:
ಇದು ಒಬ್ಬ ವ್ಯಾಪಾರಿಯ ಕಥೆ. ದುಡ್ಡಿ೦ಗೆ ಎ೦ತ ಬೇಕಾರೂ ಮಾಡ್ಲೆ ಅ೦ವ ತಯಾರು – ಅವನ ಹೆಸರು ಆಸ್ಕರ್ ಶಿ೦ಡ್ಲರ್.
ಒಬ್ಬ ಯಹೂದಿಯ ಸಹಾಯ೦ದ ಒ೦ದು ಫ್ಯ್ಸಾಕ್ಟರಿ ಶುರು ಮಾಡ್ತ. ಪೈಸೆ ಸ೦ಪಾದನೆಯೂ ಆವ್ತು. ಕಡಿಮೆ ಸ೦ಬಳಕ್ಕೆ ಕೆಲ್ಸ ಮಾಡ್ತವು ಹೇಳಿ ಯಹೂದಿಗಳ ಕೆಲ್ಸಕ್ಕೆ ತೆಕ್ಕೊಳ್ತ.
ಹಿಟ್ಲರನ ಆಗಮನ ಆದ ಕೂಡಲೇ ಯಹೂದಿಗಳ ಮಾರಣಹೋಮ ಶುರು ಆವ್ತ.
ಪೈಸೆ ಒಳುಶುಲೆ ಯಹೂದಿಗಳ ಬಚಾವ್ ಮಾಡ್ತ ಶಿ೦ಡ್ಲರ್. ನಿಧಾನಕ್ಕೆ ಮನಃಪರವರ್ತನೆ ಆಗಿ ಎಲ್ಲರ ಬಚಾವ್ ಮಾಡ್ಲೆ ಪ್ರಯತ್ನ ಮಾಡ್ತ.
ನಾಝಿ ಪಾರ್ಟಿಯ ಮೆ೦ಬರ್ ಆವ್ತ. ಯೆಹೂದಿಗಳ ಗುಲಾಮಗಿರಿಯೇ ಎನ್ನ ಮುಖ್ಯ ಗುರಿ ಹೇಳಿ ಕಥೆ ಕಟ್ಟುತ್ತ. ಕೊನೆಗೊ೦ದು ದಿನ ಮುಕ್ತಿ.
ರಶ್ಯದವು ನಾಝಿಗಳ ಸೋಲ್ಸಿ ಯೆಹೂದಿಗಳ ಬಿಡುಗಡೆಗೆ ಬತ್ತವು, ಶಿ೦ಡ್ಲರ್ ನಾಝಿ ಕಾರ್ಯಕರ್ತ ಹೇಳಿ ನೊ೦ದಾಯಿಸಿದ ಕಾರಣ ತಪ್ಸಿಕೊ೦ಡು ಓಡೆಕ್ಕಾವುತ್ತು.
ಆ ರಾತ್ರಿ, ಇ೦ವ ರಕ್ಷಿಸಿದ ಯೆಹೂದಿಗೊ ಬ೦ದು, ಇವನ ಕಾಪಾಡೆಕ್ಕು ಹೇಳಿ ಇವನ ಹೆಸರಿ೦ಗೆ ಪತ್ರ ಬರೆತ್ತವು, ಅದರಲ್ಲಿ ಇ೦ವ ಒಳ್ಳೆಯವ.
ಎ೦ಗಳ ಎಲ್ಲರನ್ನೂ ಕಾಪಾಡಿದ್ದ ಹೇಳಿ ಬರೆತ್ತವು. ಮು೦ದೆ ಕೇಸ್ ಆದರೆ ಇವನ ರಕ್ಷಣೆಗೆ ಬೇಕಕ್ಕು ಹೇಳಿ ಆ ಪತ್ರ.
ಅದಲ್ಲದ್ದೆ ಚಿನ್ನದ ಹಲ್ಲುಗಳ ಕಟ್ಟುಸಿಗೊ೦ಡವು ಅದರ ಕರಗುಸಿ ಇವ೦ಗೆ ಒ೦ದು ಉ೦ಗಿಲ ಮಾಡಿ ಕೊಡ್ತವು.
ಈ ಚಿತ್ರ ಕಪ್ಪು ಬಿಳುಪು..!
ಒಬ್ಬ ವ್ಯಾಪಾರಿಯ ಲಾಲಸೆ, ದುರಾಸೆ ಮನಃಪರಿವರ್ತನೆ ನೈಜವಾಗಿ ಮೂಡಿಬೈ೦ದು. ಯೆಹೂದಿಗೊಕ್ಕೆ ಎಷ್ಟು ಕಷ್ಟ ಇತ್ತು ಹೇಳಿ ನೋಡುವಾಗ ತು೦ಬಾ ಬೇಜಾರಾವುತ್ತು.
ಈಗ ಹಿಟ್ಲರನ್೦ಥ ಜೆನ೦ಗೊ ಇಲ್ಲೆನ್ನೇ ಹೇಳಿ ಖುಶಿವ್ಅವುತ್ತು. ಕೊನೆಗೆ Günstige Replica Uhren ಉ೦ಗಿಲ ಕೊಡುವಾಗ ಶಿ೦ಡ್ಲರನ ಮುಖಲ್ಲಿ ಕಾ೦ಬ ಭಾವನೆಗೊ ಈ ಚಿತ್ರದ ಹೈಲೈಟ್.
ಯಾವಾಗಾರೂ ಸಮಯ ಸಿಕ್ಕಿರೆ ಮರೆಯೆಡಿ. ಅದ್ಭುತ ಅನುಭವ೦ಗೋ ಈ ಎರಡು ಸಿನೆಮ೦ಗೋ.
ತಮಿಳು, ತೆಲುಗಿಲಿ ಈ ಸಿನೆಮ೦ಗಳ ಡಬ್ ಮಾಡಿ ತೋರ್ಸುತ್ತವು.. ಕನ್ನಡಲ್ಲಿ ಡಬ್ಬಿ೦ಗ್ ಮಾಡ್ಲೆ ಅವಕಾಶ ಇಲ್ಲೆ.
ಆದರೆ ಇಲ್ಲಿ ಭಾಷೆಗಿ೦ತ ಭಾವನೆ ಮುಖ್ಯ ಮಾತುಗೊ ಸ೦ಪೂರ್ಣವಾಗಿ ಅರ್ಥ ಆಗದ್ದರುದೆ, ದೃಶ್ಯ೦ಗೊ ಮನ ಮುಟ್ಟುತ್ತು…
enage thumba khushi aathu
ಪುತ್ತೂರು ಭಾವ, ಬರದ್ದದು ಲಾಯ್ಕಾಯಿದು.. ಆನುದೆ ಆಂಗ್ಲ ಸಿನೆಮಾಗಳ ಅಭಿಮಾನಿ ಹೇಳಿದೆ ತಪ್ಪಾಗ.. 🙂 ಎನ್ನ ಲ್ಯಾಪ್ಟಾಪ್ ಲಿ ಸಿನೆಮಾಂಗ ತುಂಬಿ ಹೊಯಿದೀಗ.. ಈ ಎರಡು ಸಿನೆಮಾವುದೆ ಆನು ನೋಡೆಕ್ಕಷ್ಟೆ.. 🙂 ಖ್ಂಡಿತಾ ನೋಡೆಕ್ಕು ಹೇಳಿ ಆಲೋಚನೆ ಮಾಡಿದ್ದೆ ನಿಂಗಳ ಲೇಖನ ನೋಡಿದ ಮತ್ತೆ..
ಪುತ್ತೂರು ಭಾವ ಬರದ್ದು ಲಾಯ್ಕಾಯಿದು.
ಹೀಂಗೆ ಕೆಲವು ಒಳ್ಳೆ ಭಾರತೀಯ ಸಿನಿಮಾದ ಬಗ್ಗೆ ಬರದರೆ ಇನ್ನೂ ಒಳ್ಳೆದು.
ಪುತ್ತೂರುಬಾವಾ..
ಶುದ್ದಿ ಪಷ್ಟ್ಳಾಸಾಯಿದು!
ಎರಡ್ಣೇದು ನೋಡಿ ಆಯಿದು, ಓ ಮೊನ್ನೆ ಕೊಳಚ್ಚಿಪ್ಪು ಬಾವನ ಕೈಲಿ ಇತ್ತು – ನೀನು ಕೊಟ್ಟದಡ!
ಸುರೂವಾಣದ್ದು ನೋಡೆಕ್ಕಟ್ಟೆ! ಯೇವತ್ತು ಕೊಡ್ತೆ ಎಂಗೊಗೆ?
ಆನು ಸಾಮಾನ್ಯವಾಗಿ ಸಿನೆಮ ನೋಡುವದು ಈ ವೆಬ್ ಸೈಟಿಲಿ… ತು೦ಬಾ ಸಿನೆಮ೦ಗೊ ಇದರಲ್ಲಿ ಸಿಕ್ಕುತ್ತು.
http://tv.blinkx.com/movies
ಕಪ್ಪು ಬೆಳಿ ಸಿನೆಮ ಒಂದು ರೀತಿಯ ನಾಟಕೀಯತೆಯ ನಮ್ಮೆದುರು ಕಟ್ಟಿಕೊಡುತ್ತು. ಅದೇ ರೀತಿ ಕಪ್ಪು ಬೆಳಿ ಪಟಂಗೊ ಕೂಡ. ಹೀಂಗೇ ನೋಡುವಾಗ ರಜ್ಜ ಡಲ್ ಆಗಿ ಕಂಡರೂ, ಸರಿಯಾಗಿ ಎಕ್ಸ್ಪೋಸ್ ಆದ ಕಪ್ಪು ಬೆಳಿ ಪಟಂಗೊ ನಿಜವಾಗಿಯೂ ನೋಡಲೆ ಚಂದ ಕಾಣುತ್ತು. ಕಪ್ಪು ಬೆಳಿ ಫಿಲ್ಮ್ ಉಪಯೋಗಿಸಿ ಪಟ ತೆಗವಲೆ ಕಲ್ತದು ಹೇಳಿಕೊಂಬಲೆ ಎನಗೆ ಹೆಮ್ಮೆ ಆವುತ್ತು.
ಪುರ್ಸೊತ್ತು ಸಿಕ್ಕಿದರೆ ಈ ಎರಡೂ ಸಿನೆಮಂಗಳ ನೋಡೆಕ್ಕು ಹೇಳಿ ಇದ್ದು. ಅಂತರ್ಜಾಲಲ್ಲಿ ಎಲ್ಯಾದರೂ ಸಿಕ್ಕುವ ಸಂಕೋಲೆ ಇದ್ದಾ ಭಾವಾ?