- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಪೆರಟಿ ಪಾಯಸ
ಬೇಕಪ್ಪ ಸಾಮಾನುಗೊ:
- 2 ನಿಂಬೆ ಗಾತ್ರದ ಹಲಸಿನ ಹಣ್ಣು ಪೆರಟಿ
- 2 – 2.5 ಕಪ್(ಕುಡ್ತೆ) ಬೆಲ್ಲ
- 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
- 1/2 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ತುರಿ (ಬೇಕಾದರೆ ಮಾತ್ರ)
- 2-3 ಚಮ್ಚೆ ಎಳ್ಳು (ಬೇಕಾದರೆ ಮಾತ್ರ)
- ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
- 3-4 ಏಲಕ್ಕಿ
ಮಾಡುವ ಕ್ರಮ:
ಒಂದು ಪಾತ್ರಲ್ಲಿ ಸಾಧಾರಣ 8 ಕುಡ್ತೆ ಉಗುರು ಬೆಶಿ ನೀರು ಹಾಕಿ, ಅದರಲ್ಲಿ ಪೆರಟಿಯ ಎರಡು ಘಂಟೆ ಬೊದುಳುಲೆ ಹಾಕಿ.
ಇದರ ಮಿಕ್ಸಿಲಿ ಹಾಕಿ ಸಾಧರಣ ನೊಂಪು ಕಡದು ಮಡುಗಿ.
ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.
ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಕಡದ ಪೆರಟಿಗೆ ಹಾಕಿ, ಚಿಟಿಕೆ ಉಪ್ಪು, ಬೆಲ್ಲ ಹಾಕಿ ಕೊದುಶಿ, ಒಂದು 5 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ದಪ್ಪ ಕಾಯಿ ಹಾಲಿನ ಹಾಕಿ, ತೊಳಸಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಬಾಣಲೆಲಿ ಎಳ್ಳು ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ ಅದಕ್ಕೆ 1/2 ಕುಡ್ತೆ ಸಣ್ಣಕೆ ತುರುದ ಕಾಯಿಯ ಹಾಕಿ, ಚಿನ್ನದ ಬಣ್ಣ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಇದಕ್ಕೆ ಏಕೆ ನಿಂಗೊ ಕೊಟ್ಟೆಕಾಯಿ ಹೂಳು ಮಾಡಿ ಹಾಕದ್ದು ಆ° !
@ Chenayi bava, kayi thurudu horudu hakire salado, thundu madi bere hakekko? Kayi baga baga sikkire ‘ kotte kayi’ pacha akku, peratidu alla gonthato!
@ ಜಯರಾಮ,
ಕನ್ನಡಲ್ಲಿ ಬರವಲೆ ಇದರಲ್ಲಿ ವ್ಯವಸ್ಥೆ ಇದ್ದು. ಇದೇ ಪುಟದ ಮೇಗೆ Type in ಹೇಳ್ತಲ್ಲಿ kannada ಹೇಳಿ ಇಪ್ಪದರ select ಮಾಡಿರೆ ಆತು.
ಫೊಟೋ ನೋಡಿಯೇ ರುಚಿ ರುಚಿ ಪರಿಮಳ ಎಲ್ಲ ಅನುಭವ ಆವ್ತಾ ಇದ್ದನ್ನೇ?