- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಸೊಳೆ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
- 2-3 ಕಪ್(ಕುಡ್ತೆ) ನೀರು ಸೊಳೆ
- 1/4 ಕಪ್(ಕುಡ್ತೆ) ಕಾಯಿ ತುರಿ
- ಚಿಟಿಕೆ ಅರುಶಿನ ಹೊಡಿ
- 1/2 ಚಮ್ಚೆ ಮೆಣಸಿನ ಹೊಡಿ
- 5-6 ಬೇನ್ಸೊಪ್ಪು
- 1 ಚಮ್ಚೆ ಉದ್ದಿನ ಬೇಳೆ
- 1 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು / ಬಾಳಕ್ಕು ಮೆಣಸು
- 5-6 ಚಮ್ಚೆ ತೆಂಗಿನ ಎಣ್ಣೆ
ಮಾಡುವ ಕ್ರಮ:
ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ನೀರು ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ, ಸಪುರಕೆ ಸಿಗಿರಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)
ಒಂದು ಬಾಣಲೆಲಿ ಸಾಸಮೆ, ಉದ್ದಿನ ಬೇಳೆ, ಒಣಕ್ಕು/ಬಾಳಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು, ಕೊರದ ಸೊಳೆ ಹಾಕಿ ಲಾಯಿಕಲಿ ತೊಳಸಿ. ಮೆಣಸಿನ ಹೊಡಿ, ಅರುಶಿನ ಹೊಡಿ ಹಾಕಿ ಒಂದು ನಿಮಿಷ ತೊಳಸಿ.
ಸಾಧಾರಣ 3/4 ಕುಡ್ತೆ ನೀರು ಹಾಕಿ, ಮುಚ್ಚಿ ಹದ ಕಿಚ್ಚಿಲ್ಲಿ ಬೇಶಿ. 2-3 ನಿಮಿಷಕ್ಕೊಂದರಿ ತೊಳಸುತ್ತಾ ಇರಿ.
ಸೊಳೆ ಬೆಂದ ಕೂಡ್ಲೆ, ಕಾಯಿ ತುರಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ ಒಂದೆರಡು ನಿಮಿಷ ಮಡುಗಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಅಪ್ಪು ಇಲ್ಲಿ ಪಟಂಗಳ ನೋಡಿ ಆಶೆ ಆವ್ತು ಯಾವಾಗಳುದೆ.
ತುಂಬಾ ಲಾಯಿಕಕ್ಕೆ ಹಂತ ಹಂತದ ವಿವರಣೆ ಚಿತ್ರ ಸಹಿತ ಲಾಯಿಕಲ್ಲಿ ಬತ್ತಾ ಇದ್ದು.
ಸಂಶಯವೇ ಇಲ್ಲೆ ..ಪಷ್ಟಾವ್ತು.
ವೇಣಿಯಕ್ಕ ಫಟಂಗಳ ಹಾಕಿ ಪಾಕ ಮಾಡ್ತದರ ಕಲುಶುದು ಒಳ್ಳೆದಿರ್ತು. ಅಕೇರಿಗೆ ತಯಾರಾದ ಪಾಕವನ್ನೂ ಫಟ ಸಹಿತ ತೋರ್ಸುದು ಇನ್ನೂ ಚೆಂದ ಇರ್ತು, ಕೊದಿ ಬರುಸುತ್ತ ನಮುನೆ.