Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಸೀವು(ಸಿಹಿ) ಅವಲಕ್ಕಿ
ಬೇಕಪ್ಪ ಸಾಮಾನುಗೊ:
- 2 ಕಪ್(ಕುಡ್ತೆ) ಅವಲಕ್ಕಿ
- 1 ಕಪ್(ಕುಡ್ತೆ) ಕಾಯಿ ತುರಿ
- 1/2 ಕಪ್(ಕುಡ್ತೆ) ಕೆರಸಿದ ಬೆಲ್ಲ
- 2 ಏಲಕ್ಕಿ
- 1/2 ಚಮ್ಚೆ ತುಪ್ಪ
- ಚಿಟಿಕೆ ಉಪ್ಪು
ಮಾಡುವ ಕ್ರಮ:
ಬೆಲ್ಲವ ಕೆರಸಿ ಮಡಿಕ್ಕೊಳ್ಳಿ. ಏಲಕ್ಕಿಯ ಸೊಲುದು, ಬಿತ್ತಿನ ಗುದ್ದಿ ಮಡಿಕ್ಕೊಳ್ಳಿ. ಕಾಯಿ ಸುಳಿ, ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು, ತುಪ್ಪ ಎಲ್ಲ ಒಂದು ಪಾತ್ರಕ್ಕೆ ಹಾಕಿ ಲಾಯಿಕಲಿ ಕಲಸಿ.
ಅವಲಕ್ಕಿಯ ಇದಕ್ಕೆ ಹಾಕಿ ಬೆರುಸಿ, 2-3 ನಿಮಿಷ ಬಿಟ್ಟು ತಿಂಬಲೆ ಕೊಡಿ. ಇದರ ದೇವರ ನೈವೇದ್ಯಕ್ಕೆ ಉಪಯೋಗ್ಸುತ್ತವು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
Super,sannadipppaga shaleli shanivara bhajane aada mele sikkigondu ettu.
Super
ಸತ್ಯ ಚೆನ್ನೈ ಭಾವಾ..
ನೀರ್ಚಾಲು ಶಾಲೆಲಿ ವಿದ್ಯಾದಶಮಿ ದಿನ ಪುಸ್ತಕ ಪೂಜೆ ಮುಗುಶಿಕ್ಕಿ ಸಿಕ್ಕುತ್ತ ಚೀಪೆ ಅವಲಕ್ಕಿ ನೆ೦ಪಾತಿದಾ..
ಹಾ°… ಶಾರದಾ ಪೂಜೆ ಮುಗುಶಿ ಇಲ್ಲಿಗೆ ಬಂದು ನೋಡಿಯಪ್ಪಗ ಚೀಪೆ ಅವಲಕ್ಕಿ ಪ್ರಸಾದ ಕಂಡತ್ತಿದಾ.