Oppanna.com

ಒಪ್ಪಕ್ಕನ ಒಪ್ಪ

ಬರದೋರು :   ಬಾಲಣ್ಣ    on   10/11/2012    18 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

 

ಒಂದು ದಿನ ಮನೆ ಮಣ್ಣ ಚಿಟ್ಟೆಲಿ
ಕೂದು  ಹಾಳೆಯ ಪಡಿಗೆ ಕುತ್ತೊಗ
ಬಂದು ಮಲ್ಲಿಗೆ ಹೂಗ ಪರಿಮಳ ಘಮ್ಮನೆಡುಪಿತ್ತು|
ನಿಂದು ನೋಡಿರೆ ಎಂತ್ಸು  ಕಾಣದ
ಹೊಂದುಸಿದೆ ಕನ್ನಡ್ಕ, ಬಾಗಿಲ
ಸಂದಿಲಿಯೆ ಹುಣ್ಣಿಮೆಯ ಚಂದಿರನಾಂಗೆ  ಆಂಜಿತ್ತು |೧|

ಆರು ಬಂದದು ಹೇಳಿ ನೋಡಿರೆ
ಮೋರೆ  ಚೆಂದಕೆ ಕಂಡು ಎನಗದ
ಭಾರಿ ಕೊಶಿ  ಆತಂದು ಹೇಳುದು ಹೇಂಗೆ  ಆನದರ  |
ಊರ  ದೇವಿಯೆ  ಬಂದು ನಿಂದದೊ
ಜಾರಿ ಆಕಾಶಂದ ಬಿದ್ದದೊ
ಕಾರ ತಿಂಗಳ  ಬೆಳ್ಳಿ   ರೇಖೆಯೆ  ಹೊಳದ  ಹಾಂಗಾತು|೨|

ಜಿಡೆ  ಎರಡು ಮಾಡಿದ್ದು ಕೂಸದ
ಹೊಡೆಲಿ  ಬಗ್ತಲೆ  ಇದ್ದು ,ಬಣ್ಣದ
ಕೊಡೆಯು ಕೈಲಿಯೆ  ಇದ್ದು, ತಣ್ಣನೆ ಗಾಳಿ ಬೀಸಿತ್ತು|
ನೆಡವ ಚೆಂದವ  ಬಣ್ಣುಸಲೆ ಎನ
ಗೆಡಿಯ  ಹಿಂದಣ  ಕವಿಗೊ “ಹಂಸದ
ನಡಿಗೆಯೋ ”  ಹೇಳುತ್ತವಲ್ಲದ   ಹಾಂಗೆ ಕಂಡತ್ತು  |೩|

ಗೆಡುವ  ಬಗ್ಗುಸಿ ಕೊಯಿದೆ  “ಹೂಗಿನ
ಮಡುಗೆಕೋ ಆನಿದರ  ನಿನ್ನಯ
ಜಿಡೆ ಎಡೆಲಿ  ಏ  ಕೂಸೆ ”  ಕೇಳಿದೆ  ‘ಮುಗುಳು  ನೆಗೆ ‘ ಬಂತು |
ಬಡಿಗೊ  ಮೋರಗೆ  ಎನ್ನ ? ಹೆದರಿಕೆ
ಬಿಡದೊ ? ನೋಡಿದೆ ಸುತ್ತ ಇದ್ದವೊ
ಗಡಿಬಿಡಿಲೆ  ಸೂಡುಸಿದೆ  ಹೂಗಿನ ಕೂಸಿನಾ  ಜಿಡೆಲಿ |೪|

“ಒಪ್ಪ ಕೊಡು ಒಪ್ಪಕ್ಕ , ಎನಗಿದ ‘
“ಅಪ್ಪ  ಬೈಗೆನಗೆಡಿಯ  ಈಗದ
ಬಪ್ಪಲಾತೆನ್ನಬ್ಬೆ ಹೋಯಿದು ದನದ ಹಟ್ಟಿಯೊಳ|
“ತಪ್ಪಲಾಗದೊ ಮನಗೆ   ನಿಂಗೊಂ
ದೊಪ್ಪ ಕೂಸಿನ  ಅದು ಕೊಡುಗು,  ಆ
ನೊಪ್ಪೆ, ಕೊಡೆ ಒಂದುದೇ   ಒಪ್ಪವ ” ಕೂಸು  ಹೇಳಿತ್ತು |೫|

ಬೋಚ  ಮಾಣಿಯ  ಹಾಂಗೆ ಆನದ
ಆಚಿಗೀಚಿಗೆ ನೋಡುವಾಗಲೆ
ತೋಚಿ  ಹಿಡುದತ್ತೆನ್ನ  ಮೋರೆಗೆ ‘ ಒಪ್ಪ ‘  ಕೊಟ್ಟತ್ತು|
ನಾಚಿ ಕೆಂಪಾತದರ  ಕೆಪ್ಪಟೆ
ಬಾಚಿ ಹಿಡುದಾನದರ ನೆಗ್ಗಿದೆ
ಕೂಚು  ಐದರ   ಬಾಲೆ ತಬ್ಕನೆ  ಜಾರಿ ಓಡಿತ್ತು  |೬|

~~*~~

ಶ್ರೀಶಣ್ಣನ ಧ್ವನಿಲಿ ಇಲ್ಲಿ ಕೇಳ್ಲಕ್ಕುಃ

18 thoughts on “ಒಪ್ಪಕ್ಕನ ಒಪ್ಪ

  1. ಅಣ್ಣೋ,ಒಪ್ಪ ಕೊಟ್ತದಕ್ಕೆ ಧನ್ಯವಾದಂಗೊ.ಇನ್ನುದೆ, ಬರತ್ತವಕ್ಕೆ ಇದೇ ರೀತಿಲಿ ಪ್ರೋತ್ಸಾಹ ಕೊಡಿ ಆತೊ.ಎನ್ನ ಇನ್ನೂ ಕೆಲವು ಪದ್ಯಂಗಳ ಶೀಶಣ್ನ ಹಾಡಿದ್ದವು ಕೇಳಿ ನೋಡಿ.

  2. ಒಪ್ಪಣ್ಣನ ಬಯಲಿ೦ಗೆ ಒಪ್ಪಕ್ಕನ ಕರಕ್ಕೊ೦ಡು ಬ೦ದು ಒಪ್ಪ ಕೊಟ್ಟು ಕೆಪ್ಪಟೆ ಕೆ೦ಪಾಗಿಸಿ ಶ್ರೀಶಣ್ಣನ ಹತ್ತರೆ ಹಾಡಿಸಿ ಖೊಶಿಗೊಳಿಸಿದಕ್ಕೆ ಧನ್ಯವಾದ. ಲಾಯಕಿನ ಪದ್ಯ, ಅದೂ ನಮ್ಮ ಭಾಷೆಲಿ ಬರದ್ದಕ್ಕೆ ಅಭಿನ೦ದನೆ.

  3. ಮುಳಿಯದಣ್ಣನ ‘ಒಪ್ಪ ‘ ಬಂತದ !

    ತಳಿಯದ್ದೆ ಎನಗೆಡಿಗೊ ಕೂಬಲೆ

    ಅಳವಲೆಡಿಗೋ’ಒಪ್ಪ’ ದಳತೆಯ ಮಾತ ತಕ್ಕಡಿಲಿ ?/

    ಬೆಳೆದು ಹಬ್ಬಲಿ ನಮ್ಮ ಭಾಶೆಯು

    ಪಳ ಪಳನೆ ಹೊಳ ಹೊಳದು ಮಿಣ್ಕಲಿ

    ಇಳಿದಿಳಿದು ಬಂದೊಂಡಿರಲಿ ನಿತ್ಯವು ನಮ್ಮ ಬೈಲಿಂಗೆ /

  4. ಭಾರೀ ಚೆ೦ದದ ಕವಿತೆ.ಕಡೆಯಾಣ ಸಾಲುಗೊ ಇನ್ನೂ ಕೊಶಿ ಕೊಟ್ಟತ್ತು.

    ಬಾಲ ಮಾವನ ‘ಒಪ್ಪ’ಕವಿತೆಯ
    ಸಾಲುಗಳ ಓದುವಗ ಹೊಗಳುಲೆ
    ಸಾಲ ಶಬ್ದ೦ಗೊ೦ದೆರಡು ಪುಟ ಬರವ ಮನಸಾತು|
    ಸೋಲುಗೆಲ್ಲರ ಮನಸು ಸಕ್ಕರೆ
    ಹಾಲು ಕುಡುದಾ೦ಗಕ್ಕು ನಿಜ ಕೊಡೆ
    ಯಾಲ ಮಲ್ಲಿಗೆಯಾ೦ಗೆ ಘಮಘಮ ಬ೦ತು ಬೈಲಿ೦ಗೆ||

  5. ಭಾರೀ ಲಾಯ್ಕ ಅಯಿದು.
    ಸರಸಿಯ ಗೊಂಬೆ-ಹೇಳುವ ಕತೆಲಿ ಇಂತಾ ಸನ್ನಿವೇಶ ಬೈಂದು.ಅದರ ಬರದ್ದು-ಆನಂದ-ಹೇಳುವ ಕತೆಗಾರ ಹೇಳಿ ಕಾಣುತ್ತು.
    ಈ ಕವಿತೆ ವರ್ಣನೆಲಿ ಅದನ್ನೂ ಮೀರಿಸುತ್ತು.

    1. ಈ ಕತೆ ಮಾಂತ್ರ ನಿಜಕ್ಕೂ ನೆಡದ ಸಣ್ಣ ಘಟನಯ ಎಳೆ ಹಿಡುದು ಬರದ್ದದು.ಆನಂದ- ಹೇಳಿರೆ ಅಜ್ಜಂಪುರ ಸೀತಾರಾಂ ಅವೇ ಅಲ್ಲದೋ? ಅವರ ಕೆಲವು ಸಣ್ಣ ಕತೆಗಳ ಓದಿದ್ದೆ ಅದರಲ್ಲಿ” ನಾನು ಕೊಂದ ಹುಡುಗಿ”ಅದ್ಭುತ ಕತೆ ಅಲ್ಲದೊ ನಿಂಗೊ ಓದಿಪ್ಪಲು ಸಾಕು ಸರಸಿಯ ಗೊಂಬೆ ಯಾವ ಪುಸ್ತಕಲ್ಲಿ ಇಪ್ಪದು?
      ಆನಂದರ ಸಣ್ನ ಕತೆಗಳು ಓದಿದ್ದಿರಾ? ಒಪ್ಪ ಕೊಟ್ತದಕ್ಕೆ …ಒಂದೊಪ್ಪ ನಿಂಗೊಗೆ .ಎಲ್ಲೋರಿಂಗುದೆ.

  6. ಒಪ್ಪ ಕೊಂಗಾಟ ಆಯ್ದು ಪದ್ಯ ಬಾಲಣ್ಣ-ಶ್ರೀಶಣ್ಣ.

  7. ಸೂಪರ್..ಕೇಳುಲೆ ಭಾರಿ ಕೊಶಿ ಅವ್ತು..

  8. ಗೋಪಾಲ ಮಾವ ಹೇಳಿದ ಹಾಂಗೆ ಕವನ ಸೂಪರ್ ಆಯಿದು.
    ಬೈಲಿಲ್ಲಿ ಹೀಂಗಿಪ್ಪ ಕವನಂಗೊ ಬಾಲಣ್ಣನ ಲೇಖನಿಂದ ಇನ್ನು ಮುಂದೆಯೂ ನವಗೆ ಒದಗಿ ಬರಲಿ

  9. ಪದ್ಯ ಬರದ್ದದು ಸುಪರ್ ಆಯಿದು ಅಪ್ಪ, ಸಣ್ಣಾದಿಪ್ಪಗ ಆನು ಮಾಡಿಯೊಂಡು ಇತ್ತಿದ್ದದು ನೆಂಪವುತ್ತು. ಹಾಡಿದ್ದದುದೆ ಲಯಕ ಆಯಿದು.

  10. “ಒಪ್ಪಕ್ಕನ ಒಪ್ಪ “ಕ್ಕೆ ಒಪ್ಪಕೆ ಸೊರ ಕೊಟ್ಟು ನಿಂಗಳ ಒಪ್ಪ ಬತ್ತ ಹಾಂಗೆ ಮಾಡಿದ ಶ್ರೀಶಣ್ನಂಗೆ ಒಂದೊಪ್ಪ ಕೊಡೆಕ್ಕನ್ನೆ

    1. ಬಾಲಣ್ಣನ ಈ ಕವನದ ಅಕೇರಿಯಾಣ ತಿರ್ಗಾಸು (U-Turn) ಕೊಶೀ ಆತು.
      ಇಲ್ಲಿ ಸ್ವರ ಸೇರುಸಲೆ ಅವಕಾಶ ಮಾಡಿ ಕೊಟ್ಟ ಬಾಲಣ್ಣಂಗೆ, ಮತ್ತೆ ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ.

    2. ಬಾಲಣ್ಣನ ಚೆಂದದ ಪದ್ಯಕ್ಕೆ ಶ್ರೀಶಣ್ಣನ ಸ್ವರ ಸೇರಿ ಅಪ್ಪಗ ಮತ್ತೂ ಲಾಯಕಾತದ. ಬಾಲಣ್ಣ, ನಿಂಗಳ ಪದ್ಯಲ್ಲಿ “ಸಸ್ಪೆಂಸ್”ನ ಕಡೇಂಗೆ ವರೆಗೆ ಒಳುಶೆಂಡು ಬಂದದು ಮೆಚ್ಯೊಳೆಕಾದ ಸಂಗತಿ.

  11. ಹುಣ್ಣಿಮೆ ಚಂದಿರನ ಹಾಂಗೆ ಚೆಂದದ ಕೂಸು ಬಾಗಿಲೆಡೆಲಿ ಕಂಡದು, ಹೂಗು ಕೊಯಿದು ಎರಡು ಜೆಡೆ ಎಡೆಲಿ ಮಡಗಿ ಯಪ್ಪಗ ಕೂಸಿಂಗೆ ನಸುನಗೆ ಬಂದದು, ಕಡೆಂಗೆ ನಾಚಿಕೆಲಿ ಒಪ್ಪ ಕೊಟ್ಟದು, ಎಲ್ಲವುದೆ ತುಂಬ ಚೆಂದಕೆ, ಸಹಜವಾಗಿ ಬಯಿಂದು. ಬಾಲಣ್ಣನ ಕಲ್ಪನೆಯ ಹಾಂಗೇ, ಅನುಭವದ ಹಾಡು ತುಂಬಾ ಚೆಂದ ಆಯಿದು. ಶ್ರೀಶಣ್ಣನ ದನಿಯ ಮನಗೆ ಹೋಗಿ ಕೇಳೆಕು. ಖಂಡಿತಾ ಒಳ್ಳೆದಿಕ್ಕು.

  12. ಆಹಾ..!!!. ಬಾಲಣ್ಣನ ಕಲ್ಪನೆಗೆ ಭಾಮಿನಿಯೇ ನಾಚಿತ್ತೋದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×