- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಚಿಕ್ಕು ಐಸ್ಕ್ರೀಮ್
ಬೇಕಪ್ಪ ಸಾಮಾನುಗೊ:
- 10 ಕಪ್(ಕುಡ್ತೆ) ಹಾಲು
- 4 ಕಪ್ ಸಕ್ಕರೆ
- 7-8 ಚಿಕ್ಕು
- 1 ಚಮ್ಚೆ ಐಸ್ಕ್ರೀಮ್ ಹೊಡಿ
- 1.5 ಚಮ್ಚೆ ಕಸ್ಟರ್ಡ್ ಹೊಡಿ
ಮಾಡುವ ಕ್ರಮ:
ಚಿಕ್ಕಿನ ತೊಳದು, ಹೆರಾಣ ಚೋಲಿ, ಬಿತ್ತು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ.
ಒಂದು ದಪ್ಪ ಪಾತ್ರೆಲಿ ಹಾಲು, ಐಸ್ಕ್ರೀಮ್ ಹೊಡಿ, ಕಸ್ಟರ್ಡ್ ಹೊಡಿ ಹಾಕಿ ತೊಳಸಿ. ಸಕ್ಕರೆ ಹಾಕಿ ಕೊದುಶಿ. ಇದರ ಸಣ್ಣ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ತೊಳಸಿ. ಮತ್ತೆ ಸಾಧಾರಣ ಒಂದು ಘಂಟೆ ತಣೀವನ್ನಾರ ಕರೆಲಿ ಮಡುಗಿ.
ಚಿಕ್ಕು, ಮೇಲೆ ಕೊದುಶಿ ತಣುಶಿದ ಹಾಲಿನ ಮಿಕ್ಸಿಗೆ ಹಾಕಿ ನೊಂಪಿಂಗೆ ಕಡೆರಿ. ಇದರ ಒಳುದ ಹಾಲಿಂಗೆ ಹಾಕಿ ತೊಳಸಿ. ಪುನಃ ಒಂದರಿ ಎಲ್ಲವನ್ನೂ ಮಿಕ್ಸಿಗೆ ಹಾಕಿ ತಿರ್ಗ್ಸಿ. ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಪಾತ್ರಲ್ಲಿ ಹಾಕಿ, ಮುಚ್ಚಲು ಮುಚ್ಚಿ ಫ್ರೀಜರ್ಲ್ಲಿ 3-4 ಘಂಟೆ ಮಡುಗಿ.
ಪುನಃ ಈ ಐಸ್ಕ್ರೀಮಿನ ತೆಗದು ಮಿಕ್ಸಿಗೆ ಹಾಕಿ ಒಂದು ನಿಮಿಷ ಕಡದು ಪುನಃ ಅದೇ ಪಾತ್ರಕ್ಕೆ ಹಾಕಿ ಫ್ರೀಜರ್ಲ್ಲಿ 5-6 ಘಂಟೆ(ಘಟ್ಟಿ ಅಪ್ಪನ್ನಾರ) ಮಡುಗಿ. (ಗರ-ಗರ ಐಸ್ಕ್ರೀಮ್ ಬೇಕಾದರೆ ಈ ಕೊನೆಯಾಣ ಹಂತವ ಮಾಡೆಕ್ಕು ಹೇಳಿ ಇಲ್ಲೆ.)
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಚಿಕ್ಕು ಐಸ್ ಕ್ರೀಮ್ ತಿಂದಿದೆ. ಈಗ ಮಾಡುವ ಕ್ರಮವೂ ಗೊಂತಾತಿದ .
ಕೊರೆಂಗು ಭಾವಂಗೆ ಕೊಡ್ತರೆ ಎಲ್ಲ ಪ್ರೀ ಕೊಡೆಕ್ಕು. ಎಡಿಗೋ? 😉
ಇಷ್ಟ ಇದ್ರು ತಿಂದರೆ ಶೀತ ಅಗ್ತು..ವೇಣಿ ಅಕ್ಕ ಮನೆಲಿ ಮಾಡಿರೆ ಶೀತ ಅಕ್ಕೊ ಆಗದೋ?
ಬೆಟ್ಟುಕಜೆ ಅಣ್ಣಾ,
ಶೀತ ಅಪ್ಪದು ಐಸ್ಕ್ರೀಮ್ ತಿಂದು ಬೆಶಿಲಿಂಗೆ ಹೋದರೆ ಮಾತ್ರ ಅಲ್ಲದೋ?
ನಾವು ಮನೆಲೇ ಕೂಪೊ° 🙂
ಯೇ ಅಕ್ಕಾ, ಎನಗೆ ಬೆಲ್ಲಕ್ಯಾಂಡಿ, ನೆಗೆ ಮಾಣಿಗೆ ಐಸ್ ಕ್ಯಾಂಡಿ, ಬೋಚಬಾವಂಗೆ ದೂದ್ ಕ್ಯಾಂಡಿ ಬೇಕು.. ಸಿಕ್ಕುಗನ್ನೇ..!
ನಿನಗೆ ಒ೦ದು ಸಾಕೋ?
ಎನಗೆ ಮೂರೂ ಕ್ಯಾಂಡಿ ಬೇಕು.. !!
ಮೂರು ಒಂದರಿಯೇ ತಿಂದರೆ ಇಪ್ಪ ಮೂರೂ ಹಲ್ಲು ಉದುರುಗನ್ನೆ ಭಾವಾ…?
ಏ ಮಾವ…!
ಇಪ್ಪ ಮೂರೂ ಹಲ್ಲು ಉದುರಿರೂ ತೊ೦ದರೆ ಇಲ್ಲೆ…
ಕ್ಯಾಂಡಿ ಮಡುಗಿ ನೀರು ಮಾಡಿಯಾದರೂ ತಿ೦ಬೆ.. 😉
ಓಯ್ ಪೆಂಗಣ್ಣೋ, ಐಸ್ ಕ್ಯಾಂಡೀ ಸಿಕ್ಕುತ್ತು ಹೇಳುವಗ ಎನ್ನ ಮರದ್ದದೋ ನೀನು????
ಪ್ರೀತಿಯ ವೇಣಿ,
ಚಿಕ್ಕು ಐಸ್ಕ್ರೀಮ್ ಮಾಡುದು ಹೇಂಗೆ ಹೇಳಿ ಬೈಲಿಂಗೆ ಹೇಳಿ ಕೊಟ್ಟದು ಲಾಯ್ಕಾಯಿದು. ನಮ್ಮ ಬೈಲಿನ ನೆಗೆಮಾಣಿಗೆ, ಬೋಸಭಾವಂಗೆ, ಪೆಂಗಣ್ಣಂಗೆ ಐಸ್ ಕ್ಯಾಂಡಿ ಆಯೆಕ್ಕಪ್ಪದು. ಇನ್ನಾಣ ಸರ್ತಿ ಮಾಡಿ ಅಪ್ಪಗ ಅವಕ್ಕೂ ಹೇಳಿಕ್ಕು ಆತಾ? 😉
ಹೇಳಿಕೆ ಕೊಡೆಕ್ಕಾದ್ದಿಲ್ಲೆ, ಸೂಚನೆ ಸಿಕ್ಕಿದರೆ ಅವ್ವೇ ಬಕ್ಕು!
ಪ್ರತಿ ವಾರವೂ ಬಿಡದ್ದೆ ಶ್ರದ್ಧೆಲಿ, ಚೆಂದಲ್ಲಿ, ಪಟ ಸಮೇತ ವಿವರಣೆಯೂ ಕೊಟ್ಟು ಬೈಲಿಲಿ ಅಡಿಗೆಯ ವಿಧಾನವ ಕೊಡ್ತಾ ಇಪ್ಪದಕ್ಕೆ ವಿಶೇಷ ಧನ್ಯವಾದಂಗೊ.
ವೇಣಿಯಕ್ಕ ಮಾಂತ್ರ ಅಲ್ಲಾ.. ಎಂಗೊ ಪುತ್ತೂರಿಂಗೆ ಬಂದಪ್ಪಗ ನಿಂಗೊ ಮೋಹನಕ್ಕೆ ಕರ್ಕೊಂಡು ಹೋಯೆಕ್ಕಿದಾ..
ಅಕ್ಕಾ..!
ಇನ್ನಾಣ ಸರ್ತಿ ಮಾಡಿಯಪ್ಪಗ, ನೆಗೆ ಮಾಣಿಗೆ ಮಾ೦ತ್ರ ಹೇಳಿಕ್ಕೇಡಿ.. ಏ??
ಅವ೦ಗೆ ಐಸ್ಕ್ರೀಮ್ ಹೇಳಿ ತು೦ಭಾ ಪ್ರೀತಿ..!
ನವಗೆ ಒ೦ದೂ ಮಡುಗ, ಎಲ್ಲ ಮುಗುಶುಗು..!