Oppanna.com

ಬದನೆಕಾಯಿ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   11/12/2012    6 ಒಪ್ಪಂಗೊ

ವೇಣಿಯಕ್ಕ°

ಬದನೆಕಾಯಿ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು)
  • 4-5 ಚಮ್ಚೆ ಕಾಯಿ ತುರಿ
  • 3-4 ಹಸಿಮೆಣಸು
  • 3/4 – 1 ಚಮ್ಚೆ  ಹುಳಿ ಹೊಡಿ (ಉಂಡೆ ಹುಳಿ ಹೊಡಿ ಆದರೆ ಒಳ್ಳೆದು)
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಅರುಶಿನ ಹೊಡಿ
  • 5-6 ಬೇನ್ಸೊಪ್ಪು
  • 1/2 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ
  • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ ಒಂದು ಇಂಚು ಉದ್ದಕ್ಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಒಂದು ಬಾಣಲೆಲಿ ಸಾಸಮೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು, ಕೊರದ ಬದನೆ ಹಾಕಿ ಲಾಯಿಕಲಿ ತೊಳಸಿ. ಅರುಶಿನ ಹೊಡಿ, ಉಪ್ಪು, ಹುಳಿ ಹಾಕಿ 2-3 ನಿಮಿಷ ತೊಳಸಿ.

ಮುಚ್ಚಿ ಮಡುಗಿ ನೀರು ಹಾಕದ್ದೆ ಹದ ಕಿಚ್ಚಿಲ್ಲಿ ಬೇಶಿ (2-3 ನಿಮಿಷಕ್ಕೊಂದರಿ ತೊಳಸಿ).
ಬದನೆ ಬೆಂದ ಕೂಡ್ಲೆ, ಕಾಯಿ ತುರಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ ಒಂದೆರಡು ನಿಮಿಷ ಮಡುಗಿ.
ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

6 thoughts on “ಬದನೆಕಾಯಿ ತಾಳು(ಪಲ್ಯ)

  1. ಇದು ಹೊಸ ನಮುನೆದು. ಮಾಡಿ ನೋಡೆಕ್ಕು.

  2. ಲಾಯಕ ಇದ್ದು . ಗರಮ್ ಮಸಾಲೆ ಹಾಕಿರೆ ಎನ್ತ ?

  3. ಧನ್ಯವಾದ೦ಗೊ.
    ಎನಗೆ ಇಲ್ಲಿ ಉ೦ಡೆಹುಳಿ / ಹುಳಿ ಹೊಡಿ ಸಿಕ್ಕುತ್ತಿಲ್ಲೆ, ಸಾಮಾನ್ಯವಾಗಿ ನಮ್ಮ ಊರಿಲ್ಲಿ ಸಿಕ್ಕುವ ಓಟೆ ಹುಳಿ ಸಿಕ್ಕುವದು. ಅದುದೆ, ಕ್ಲೀನ್ ಮಾಡಿ ಉಪ್ಪು ಹಾಕಿ ಹುಳಿ ಉ೦ಡೆ ಮಾಡಿ ಹೇಮಾರ್ಸುತ್ತವಲ್ಲದಾ ಊರಿಲ್ಲಿ, ಹಾ೦ಗೆ, ಶೇಪ್ ಮಾ೦ತ್ರ ಬೇರೆ ಅಷ್ಟೆ.
    ಇದಕ್ಕೆ ಎ೦ತಾರು ಪರಿಹಾರ ಇದ್ದೊ?

    1. ಉಂಡೆ ಹುಳಿ / ಹುಳಿ ಹೊಡಿ ಇಲ್ಲದ್ದರೆ ಹುಳಿ ಎಸರು ಹಾಕುಲೆ ಅಕ್ಕು. ಆದರೆ ಬದನೆಕಾಯಿ ತಾಳಿಂಗೆ ಉಂಡೆ ಹೊಳಿ ಹೊಡಿ ಹಾಕಿದ ರುಚಿ ಬಾಕಿದ್ದ ಹುಳಿ ಎಸರು/ಹೊಡಿ ಹಾಕಿದರೆ ಬತ್ತಿಲ್ಲೆ. ಮಾವಿನಕಾಯಿ ಸಿಕ್ಕುವ ಸಮಯಲ್ಲಿ ಮಾವಿನಕಾಯಿ ಹಾಕಿ ಮಾಡ್ಲಕ್ಕು, ಅದರ ರುಚಿ ಬೇರೆಯೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×