Oppanna.com

ಬದನೆಕಾಯಿ ಚಕ್ರ

ಬರದೋರು :   ವೇಣಿಯಕ್ಕ°    on   25/12/2012    3 ಒಪ್ಪಂಗೊ

ವೇಣಿಯಕ್ಕ°

ಬದನೆಕಾಯಿ ಚಕ್ರ

ಬೇಕಪ್ಪ ಸಾಮಾನುಗೊ:

  • 2  ಸಾಧಾರಣ ಗಾತ್ರದ ಗುಳ್ಳ ಬದನೆ
  • 2-3 ಚಮ್ಚೆ ಅಕ್ಕಿ ಹೊಡಿ
  • 1/4 – 1/2 ಚಮ್ಚೆ ಮೆಣಸಿನ ಹೊಡಿ
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 4-5 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ 1/4 ಇಂಚು ದಪ್ಪಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ. ಅದರ ನೀರಿಂದ ತೆಗದು ಒಂದು ವಸ್ತ್ರಲ್ಲಿ/ಪ್ಲೇಟಿಲ್ಲಿ ನೀರು ಬಳುಶುಲೆ ಮಡುಗಿ.

ಒಂದು ಪ್ಲೇಟಿಲ್ಲಿ ಅಕ್ಕಿ ಹೊಡಿ, ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು ಹಾಕಿ ಲಾಯಿಕಲಿ ಬೆರುಸಿ.

ಅದರ್ಲ್ಲಿ ಈ ಕೊರದ ಬದನೆಯ ಹೊರಳುಸಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಪ್ಲೇಟಿಲ್ಲಿ ಕರೆಲಿ ಮಡುಗಿ.

ಕಾವಲಿಗೆಗೆ 2 ಚಮ್ಚೆ ಎಣ್ಣೆ ಹಾಕಿ ಹಸರ್ಸಿ. ಅದು ಬೆಶಿ ಅಪ್ಪಗ, ಮಸಾಲೆ ಉದ್ದಿದ ಬದನೆಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಲಿ ಜೋಡ್ಸಿ.

ಅತ್ತೆ-ಇತ್ತೆ ತಿರುಗುಸಿ ಹಾಕಿ, ರೆಜ್ಜ ರೆಜ್ಜ ಎಣ್ಣೆ ಪಸೆ ಮಾಡಿಗೊಂಡು ಲಾಯಿಕ ಆರುವನ್ನಾರ ಸಾಧಾರಣ 8-10 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.

ಇದರ ಬೆಶಿ-ಬೆಶಿ, ಅಶನ – ತೋವೆ ಅಥವಾ ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ಬದನೆಕಾಯಿ ಚಕ್ರ

  1. ಆಹ..! ಇದು ಭಾರೀ ರುಚಿ ಅಕ್ಕು.

  2. ಹೇಂಗೆ ಚಕ್ರ ಕರುಕುರು ಅಕ್ಕಲ್ಲದ? ವೇಣಿಯಕ್ಕ ………………..

  3. ಚಕ್ರ ಚೆಂದ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×