- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಹರೇರಾಮ ಎಲ್ಲೋರಿಂಗೂ..
ಅದಾಗಲೇ ಮದಲೇ ಹೇಳಿಕೆ ಮಾಡಿದ ನಮುನೆ ನಿನ್ನೆ, 17, ಪೆಬ್ರವರಿ 2013ರ ದಿನ ಪುತ್ತೂರು ಮಹಾಲಿಂಗೇಶ್ವರ ದೇವರ ಎದುರು ನಾವೆಲ್ಲೋರುದೇ ಸೇರಿ ಯಶಸ್ವಿಯಾಗಿ ಕರಸೇವೆ ಸಲ್ಲುಸಿದ್ದು.
ಎಂಟೂವರೆ-ಒಂಭತ್ತು ಗಂಟೆಗೆ ಬೈಲಿನ ನೆಂಟ್ರುಗೊ ಸೇರುಲೆ ಆರಂಭ ಆಗಿ ಅವರವರ ಅನುಕೂಲದ ಹಾಂಗೆ ಹತ್ತು ಗಂಟೆ ಒರೆಂಗೂ ಬಂದು ಸೇರಿಗೊಂಡೇ ಇತ್ತಿದ್ದವು.
ನೆರೆಕರೆ ನೆಂಟ್ರುಗೊ ಮಾಂತ್ರ ಅಲ್ಲದ್ದೆ, ಉಪ್ಪಿನಂಗಡಿ ಹವ್ಯಕ ಮಂಡಲಲ್ಲಿಪ್ಪ ಹಲವಾರು ನೆಂಟ್ರುಗೊ ಬೈಲಿಂಗೆ ಸೇರಿದವು.
ಕರಸೇವೆಯ ಸಂಯೋಜಕರಾದ ಶ್ರೀ ರಾಜೇಶ್ ಬನ್ನೂರು – ಇವು ಆ ದಿನ ಆಯೇಕಾದ ಕೆಲಸ ಕಾರ್ಯಂಗಳ ವಿವರವ ಕೊಟ್ಟವು.
ಮಣ್ಣು ಸಾಗಾಟ:
ಆ ಪ್ರಕಾರವಾಗಿ, ಉದಿಯಪ್ಪಗ ಒಂಭತ್ತು ಗಂಟೆಂದ ಮಣ್ಣು ಸಾಗಾಟ ಮಾಡುದು.
ದೇವಸ್ಥಾನದ ತೆಂಕ ಹೊಡೆಂದ ಮಣ್ಣಿನ ಸಾಗುಸಿ ಎದುರಾಣ ಗೆದ್ದೆಲಿ ರಾಶಿ ಹಾಕುತ್ತ ಕಾರ್ಯ ಇತ್ತು.
ಎರಡೆರಡು ಜೆನರ ಜೆತೆಲಿ ಕೈಯಾನ ಕೈ ದಾಂಟುಸಿ ಮಣ್ಣಿನ ಸಾಗಾಟ ಮಾಡಿದ್ದು “ಸಮಾಜದ ಏಕತೆಗೆ” ಹಿಡುದ ಕೈಕನ್ನಾಟಿ ಆಗಿತ್ತು.
ಮಣ್ಣ ಕೆಲಸ ಸಾಗಿಂಡಿಪ್ಪಗಾಳೇ ಬಂದ ಹಿರಿಯ ಸಾಹಿತಿ, ನಿವೃತ್ತ ಪ್ರೊಪೆಸರ್ (ಬೈಲಿನ ಅರ್ತಿಕಜೆ ಅಜ್ಜ) ಶ್ರೀ ವಿ.ಬಿ.ಅರ್ತಿಕಜೆ -ದೇ ಬಂದು ಹೆಡಗೆಗೆ ಕೈ ಸೇರ್ಸಿದ್ದು ಮನಮೋಹಕ ಆಗಿತ್ತು.
ಉಪಾಹಾರ:
ಹತ್ತೂವರೆ ಅಂದಾಜಿಗೆ ಒಂದರಿಯಂಗೆ ಕೆಲಸ ನಿಲ್ಲುಸಿ ಉಪಾಹಾರಕ್ಕೆ ಹೋದ್ಸು.
ತಿಂಬಲೆ ಹಸರು ಒಗ್ಗರುಸಿದ್ದು, ಅವಲಕ್ಕಿ, ಕೆಂಪು ಚಟ್ಣಿ, ಕುಡಿಯಲೆ ಚಾಯ – ಇಷ್ಟು ವೆವಸ್ತೆ ಅಚ್ಚುಕಟ್ಟಾಗಿದ್ದಿದ್ದು.
ಮಳೆ ವಿರಾಮ, ಮಣ್ಣು ಸಾಗಾಟ:
ಉಪಾಹಾರ ಮುಗುಶಿ ಬಂದು ಕೆಲಸ ಸುರುಮಾಡುವ ಮದಲು ಸಣ್ಣಕೆ ಮಳೆವಿರಾಮ ಸಿಕ್ಕಿತ್ತು.
ಇದೇ ಸಂದರ್ಭಲ್ಲಿ – ಎಪ್ರಿಲ್ 21ಕ್ಕೆ ಬೈಲಿನ ಸಾರಥ್ಯಲ್ಲಿ ಪುತ್ತೂರಿಲಿ, ಆರ್ ಗಣೇಶರ ಅಷ್ಟಾವಧಾನ ನೆಡವಲಿದ್ದು – ಹೇಳ್ತ ಶುದ್ದಿಯ ಸೇರಿದ ಎಲ್ಲ ಬಾಂಧವರಿಂಗೂ ಹೇಳಿತ್ತು.
ಹಾಂಗೆಯೇ, ಅಷ್ಟಾವಧಾನ ಸಮಿತಿಯ ಅಧ್ಯಕ್ಷರಾಗಿ ಅರ್ತಿಕಜೆ ಅಜ್ಜನ ಚಪ್ಪಾಳೆ ಮೂಲಕ ಅನುಮೋದನೆ ಕೊಟ್ಟಿದು.
ಮಳೆ ಕಮ್ಮಿ ಆಗಿಂಡು ಬಪ್ಪದ್ದೇ, ಪಿರಿಪಿರಿ ಹನಿಮಳೆ ಇಪ್ಪಗಳೂ ಕೆಲವು ಉತ್ಸಾಹಿಗೊ ತಲೆಗೆ ಒಸ್ತ್ರ ಕಟ್ಟಿಂಡು ಕೆಲಸ ಮಾಡಿದ್ದು ಕಂಡುಗೊಂಡಿತ್ತು.
ಇದೇ ಹೊತ್ತಿಂಗೆ, ಹಿರಿಯ ನೇತಾರ, ಶೈಕ್ಷಣಿಕ ಕ್ರಾಂತಿಯ ರೂವಾರಿ ಉರಿಮಜಲು ರಾಮ ಭಟ್ (ರಾಮಜ್ಜ°) ಬಂದು, ಮಣ್ಣು ಸಾಗಾಟದ ಹಂತಿ ಕರೇಲಿ ನೆಡಕ್ಕೊಂಡು ಹೋಗಿ ಎಲ್ಲೋರಿಂಗೂ ಹುರುಪು ಕೊಟ್ಟವು.
ಹನ್ನೆರಡೂವರೆಗೆ ಶ್ರೀದೇವರ ಪ್ರಸಾದಾನುಗ್ರಹದ ಸುಸಮಯ.
ಗಂಜಿ ಊಟ:
ದುಡುದು ಬಚ್ಚಿದ ದೇಹಂಗೊಕ್ಕೆ ಹೊಟ್ಟೆ ತಂಪಲೆ ಮಧ್ಯಾಹ್ನಕ್ಕೆ ಗಂಜಿ ಊಟದ ವ್ಯವಸ್ಥೆ ಮಾಡಿತ್ತಿದ್ದವು.
ಶ್ರೀ ನಾಭಿರಾಜ್ ಜೈನ್ – ಇವು ಆ ದಿನದ ಊಟದ ಪ್ರಾಯೋಜಕರು ಹೇದು ಗೊಂತಾತು.
ಗಂಜಿ, ತುಪ್ಪ, ಬೆಳಿಚಟ್ಣಿ, ಉಪ್ಪು, ಉಪ್ಪಿನಕಾಯಿ, ಮಜ್ಜಿಗೆ – ಆಹಾ, ಭಾರೀ ಚೊಕ್ಕದ ಊಟ.
ಚಟ್ಣಿ ಅಂತೂ, ನಮ್ಮ ಬೈಲಿನ ವೇಣಿಅಕ್ಕ° ಮಾಡಿದ ಹಾಂಗೇ ಆಯಿದು. ಸ್ವತಃ ಅಲ್ಲಿದ್ದ ವೇಣಿಅಕ್ಕನೂ ಇದರ ಒಪ್ಪಿದ್ದವು! 🙂
ಕರಸೇವಕರ ಪಟ:
ಬೈಲು, ನೆಂಟ್ರು, ಊರು, ಪರಊರು – ಎಂತದೂ ಪ್ರತ್ಯೇಕ ಇಲ್ಲೆ; ಎಲ್ಲರೂ “ಕರಸೇವಕರೇ”.
ಸೇರಿದ ಎಲ್ಲ ಕರಸೇವಕರ ಒಪ್ಪವಾಗಿ ನಿಲ್ಲುಸಿ ಯೇನಂಕೂಡ್ಳಣ್ಣ, ಹಳೆಮನೆ ತಮ್ಮ, ಪುಚ್ಚಪ್ಪಾಡಿ ಅಣ್ಣ, ಅಡ್ಕತ್ತಿಮಾರು ಮಾವ°, ಪಟ್ಟಾಜೆ ಭಾವಯ್ಯ° – ಎಲ್ಲೋರು ಅವರವರ ಕೆಮರಲ್ಲಿ ಪಟ ತೆಗಕ್ಕೊಂಡವು.
ಎದೂರಾಣ ಸಾಲಿಲಿ ನಿಂದ ಕುಂಞಿಮಕ್ಕೊ “ಕರಸೇವೆ ಮಾಡಿದ್ದು” ಹೇಳ್ತ ಬೇನರನ್ನೂ ಹಿಡ್ಕೊಂಡಿತ್ತವು.
ಅಷ್ಟಾವಧಾನಕ್ಕೆ ಪೂರ್ವತಯಾರಿ ಸಭೆ:
ಪಟ ತೆಗದಾದ ಮತ್ತೆ ಕೆಲವು ಜೆನ ಸೀತ ಕೆಲಸಕ್ಕೆ ಹೋದರೂ, ಕೆಲವು ಜೆನ ಕೆಲಸಕ್ಕೆ ಬಪ್ಪಗ ರಜಾ ತಡವಾತು.
ಎಂತಗೆ? ಆಗಳೇ ಹೇಳಿದ ಹಾಂಗೆ, ಅಷ್ಟಾವಧಾನದ ಪೂರ್ವತಯಾರಿಯ ಬಗ್ಗೆ ವಿವಿಧ ಸಮಿತಿಯ ಮಾಡಿ ಅದರ ಮೂಲಕ ಹೇಂಗೆ ಯಶಸ್ವಿ ಗೊಳುಸುಲಕ್ಕು ಹೇಳ್ತದರ ಚಿಂತನೆ ಮಾಡಿ ಆಗಿತ್ತು.
ಸಭೆಲಿ ವಿಶೇಷವಾಗಿ ಉಪ್ಪಂಗಳ ರವಿಮಾವ°, ಕುಕ್ಕಿಲ ಮಾವ°, ಮಳಿಯ ಮಧುಭಾವ°, ಪುಚ್ಚಪ್ಪಾಡಿ ಮಹೇಶಣ್ಣ, ಕೆಂಪತ್ತೆ – ಎಲ್ಲೋರುದೇ ಇದ್ದು ಅವರವರ ಸಲಹೆ ಸೂಚನೆಗಳ ಸೇರ್ಸಿಗೊಂಡವು.
ಅಷ್ಟಾವಧಾನ, ಅದರ ವಿವರಂಗಳ ಸದ್ಯಲ್ಲೇ ಬೈಲಿಂಗೆ ಹೇಳುವೊ°.
ಎಲ್ಲೋರುದೇ ಸೇರಿ ಇದರ ಯಶಸ್ವಿಗೊಳುಸೇಕು ಹೇದು ಹಾರೈಕೆ.
ಗರ್ಭಗುಡಿಯ ಸಿಮೆಂಟ್ ಕೆಲಸ:
ಅತ್ಯಪೂರ್ವವಾದ ದೇವಸ್ಥಾನವೊಂದರ ಗರ್ಭಗುಡಿಯ ಕಾರ್ಯವೇ ಮಾಡ್ಳೆ ಸಿಕ್ಕಿರೆ ಅದರಿಂದ ಕೊಶಿ ಬೇರೆ ಇದ್ದೋ?
ಹಾಂಗೇ ಆತುದೇ. ಅಷ್ಟಾವಧಾನ ಬಗ್ಗೆ ಮಾತಾಡಿಂಡಿಪ್ಪಗಾಳೇ, “ಅಣ್ಣೇರ್ನಾಕ್ಳ್ ಗರ್ಭಗುಡಿ ಕೆಲಸೊಗ್ ಬರೊಡುಗೇ” ಹೇಳಿ ಕರೆ ಬಂತು.
ಸೀತ ಕೊಶೀಲಿ ಎಲ್ಲೋರುದೇ ಹೆರಟವು. ಭಾರತೀಯರಾಗಿ ಅಂಗಿ ತೆಗದು, ಬ್ರಹ್ಮವಸ್ತ್ರ ಕಟ್ಟಿಂಡು- ಸೀತ ದೇವಸ್ಥಾನದ ಒಳ ಹೋದ್ಸು.
ಅಲ್ಲಿ, ಸಿಮೆಂಟು ಕೋಂಗ್ರೇಟು ಕಲಸಿಂಡು ಇತ್ತಿದ್ದವು, ಅದರ ಗರ್ಭಗುಡಿಯ ಮಾಡಿಂಗೆ ಸಾಗುಸುತ್ತ ಕೆಲಸ ಇದ್ದತ್ತು.
ಪ್ಲೇಶ್ಟಿಕ್ ಹೆಡಗೆಗಳಲ್ಲಿ ತುಂಬುಸಿದ ಸಿಮೆಂಟಿನ ಸಾಲಾಗಿ – ರೈಲಿನ ಹಾಂಗೆ – ಒಬ್ಬಂದೊಬ್ಬ° ತೆಕ್ಕೊಂಡು ಬಂದು, ಗರ್ಭಗುಡಿಯ ಬುಡಕ್ಕೆ ತಂದದು ಒಂದು ಚೆಂದ ಆದರೆ,
ವಿವಿಧ ಹಂತಂಗಳಲ್ಲಿ, ಚಿಟ್ಟೆ -ಕಟ್ಟೆ- ಮೆಟ್ಳುಗಳಲ್ಲಿ ಭಾವಯ್ಯಂದ್ರು ನಿಂದು, ಸಿಮೆಂಟು ಹೆಡಗೆಯ ಒಂದೊಂದಾಗಿ ಮೇಲೇರ್ಸಿದ್ದು ಇನ್ನೊಂದು ಚೆಂದ.
ಎಲ್ಲ ಕಾರ್ಯ ಆದಪ್ಪಗ ಭರದಿಂದ ಗೋವಿಂದ ಹಾಕಿ, ಮಹಾಲಿಂಗೇಶ್ವರನ ಸೇವೆಗೆ ಇನ್ನೂ ಶೆಗ್ತಿ ಇದ್ದು – ಹೇಳ್ತದರ ಬೈಲ ನೆಂಟ್ರುಗೊ ತೋರ್ಸಿಂಡವು!
ಉಪಾಹಾರ:
ಹೊತ್ತೋಪಗ ನಾಲ್ಕೂವರೆಗೆ ಲಘು ಉಪಾಹಾರ.
ತಿಂಬಲೆ ಅವಲಕ್ಕಿ, ಕುಡಿಯಲೆ ಛಾಯ; ಯಥೇಷ್ಟ.
ಇನ್ನೊಬ್ಬರು ಪ್ರಾಯೋಜಕತ್ವ ವಹಿಸಿ ನವಗೆಲ್ಲೋರಿಂಗೂ ಹೊಟ್ಟೆತಂಪು ಮಾಡಿದ ಲೆಕ್ಕಲ್ಲಿ, ಎಲ್ಲೋರುದೇ ಸೇರಿ ಪೈಶೆ ಹಾಕಿ ಒಂದು ಮೊತ್ತವ ದೇವಸ್ಥಾನಕ್ಕೆ ಕೊಟ್ಟಿದು – ಇನ್ನೊಂದು ದಿನದ ಊಟದ ಪ್ರಾಯೋಜಕತ್ವದ ಬಾಬ್ತು.
(ಸಂಗ್ರಹ ಆದ ಮೊತ್ತ: ಐದು ಸಾವಿರದ ನಾಲ್ಕುನೂರ ಮೂವತ್ತೆರಡು ರುಪಾಯಿಗೊ)
ಮಂಗಳಮ್
ಗ್ರೇಶಿದಾಂಗೆ, ಶ್ರೀದೇವರಿಂಗೆ ಕರಸೇವೆ ಕೊಟ್ಟು, ಸಾರ್ಥಕ್ಯಲ್ಲಿ ಆ ದಿನವ ಕಳದ್ದಕ್ಕೆ ಎಲ್ಲೋರಿಂಗೂ ಕೊಶಿ ಇದ್ದತ್ತು.
ಬೆಂಗುಳೂರು, ಕೊಡೆಯಾಲ, ಕಾಸ್ರೋಡು, ಸುಳ್ಯ, ಪುತ್ತೂರು, ಮಾಡಾವು – ಹೀಂಗೇ ಹಲವು ಹೊಡೆಂದ ಬಂದ ನೆಂಟ್ರುಗೊ ಒಪಾಸು ಅವರವರ ಮನೆಹೊಡೆಂಗೆ ಹೆರಟವು.
ಬಪ್ಪಲೆಡಿಯದ್ದ ನೆಂಟ್ರುಗೊ ದೂರಂದಲೇ ನವಗೆ ಹುರುಪು, ಪ್ರೋತ್ಸಾಹ ಕೊಟ್ಟು ಸಹಕರುಸಿದವು.
ಮುಂದೆ ಇನ್ನೊಂದರಿ ಬೈಲಿನೋರು ಒಟ್ಟುಸೇರಿ ಮಾಡ್ತ ಕೆಲಸ ಇದ್ದರೆ ತಿಳುಶಿಕ್ಕಿ ಹೇದು ಕೆಲವು ನೆಂಟ್ರುಗೊ ಹೇಳಿದ್ದು ನಿಜಕ್ಕೂ ಕೊಶಿಶುದ್ದಿಯೇ..
ಕರಸೇವೆಯ ಕೆಲವು ಪಟಂಗೊ ಇಲ್ಲಿದ್ದು. ಹೆಚ್ಚಿನ ಪಟಂಗೊ ಯೇನಂಕೂಡ್ಳು, ಹಳೆಮನೆ, ಗಬ್ಲಡ್ಕ, ಪಟ್ಟಾಜೆ – ಇತ್ಯಾದಿ ಕೆಮರಂಗಳಲ್ಲಿ ಇದ್ದು.
ಎಲ್ಲವನ್ನೂ ಸೇರ್ಸಿ, ಎಲ್ಲ ಪಟಂಗಳ ಸದ್ಯಲ್ಲೇ ಬೇರೆ ಶುದ್ದಿಲಿ ಬೈಲಿಂಗೆ ಬಿಡುವೊ°.
ಇದೀಗ ಸದ್ಯಕ್ಕೆ:
ಆಹಾ! ಅದ್ಭುತ ಕರಸೇವೆಯ ಈ ವರದಿ ಓದಿ, ಪಟಂಗಳ ನೋಡಿ ಮನಸ್ಸು ತುಂಬಿತ್ತು. ಈ ಸೇವೆ ಮಾಡ್ಳೆ ಅವಕಾಶ ಸಿಕ್ಕಿದವು ನಿಜಕ್ಕೂ ಅದೃಷ್ಟವಂತರು. ಎನಗೆ ಬಪ್ಪಲಾಗದ್ದದಕ್ಕೆ ತುಂಬ ಬೇಜರಾತು.
ದೇವಸ್ಥಾನದ ಗರ್ಭಗುಡಿಯ ಕಟ್ಟುವಲ್ಲಿ ನಮ್ಮ ಬೈಲಿನವರ ಕರಸೇವೆ ಇದ್ದು ಹೇಳಿ ಹೆಮ್ಮೆ ಆವ್ತಾ ಇದ್ದು. ಮಹಾಲಿಂಗೇಶ್ವರನ ಅನುಗ್ರಹ ನಮ್ಮ ಬೈಲಿನ ಮೇಲೆ ಸದಾ ಇರಳಿ. ಅಷ್ಟಾವಧಾನ ಸಾಂಗವಾಗಿ ನೆರವೇರಲಿ.
ಹರೇರಾಮ.
ಉತ್ತಮ ವರದಿ, ಚಿತ್ರಂಗಳ ನೋಡಿ ಅಪ್ಪಗ ಚೆ, ಭಾಗವಹಿಸುವ ಅವಕಾಶ ತಪ್ಪಿತ್ತಾನೆ ಹೇಳಿ ಕಂಡದಂತೂ ನಿಜ. ನಮ್ಮ ಬೈಲ ಜವ್ವನಿಗರು ಊರ ಪರಊರ ಹವ್ಯಕ ನೆಂಟ್ರ ಒಟ್ಟಿಂಗೆ ಕರ ಜೋಡುಸಿ ಕರಸೇವೆ ಮಾಡಿದ್ದದು ಸ್ತುತ್ಯರ್ಹ. ಹಿರಿಯರಾದ ಅರ್ತಿಕಜೆ ಬಂದದು, ರಾಮಜ್ಜ ಶುಭ ಹಾರೈಸಿದ್ದು ನೋಡಿ ಕೊಶಿ ಆತು.
ವರದಿ ಲಾಯ್ಕ ಆಯ್ದು. ಪಟ ಲಾಯ್ಕ ಬೈಂದು.
ಛೆ….. ಹೋಪಲಾಯ್ದಿಲ್ಲೆನ್ನೇ 🙁
ಶುಭಮಸ್ತು
ಕಾರ್ಯಕ್ರಮದೇ ಒಪ್ಪ ಆಯಿದು. ಮತ್ತೊಂದು ಅಂಶ, ದೇವಸ್ಥಾನದ ಗರ್ಭ ಗುಡಿಯ ಕೆಲ್ಸ ಮಾಡುಲೆ ಸಿಕ್ಕುದೇ ಒಂದು ದೊಡ್ಡ ಸೇವೆ. ಅದು ಈ ಶತಮಾನಲ್ಲಿ ಇನ್ನು ಯಾರಿಗೂ ಸಿಕ್ಕ. ಹಾಂಗಾಗಿ ಒಳ್ಳೆಯ ಕೆಲ್ಸ ಆತು. ಹಾಂಗಾಗಿ ನಾವು ಪುಣ್ಯವಂತರು ಅಲ್ದಾ ?
ಭಾರಿ ಲಾಯಿಕ ಆಯಿದು ಹೇಳಿ ಪಟ , ವಿವರಣೆ ಎಲ್ಲ ನೋಡುವಗ ಗೊಂತಾವುತ್ತು. ಎನಗೆ ಬಪ್ಪಲಾತಿಲ್ಲೆ ಹೇಳಿ ಬೇಜಾರ ಇದ್ದು. ಬೇರೆ ಹಲವಾರು ಗಡಿಬಿಡಿಗೊ, ಎಂತ ಮಾಡುದು? ಪುತ್ತೂರು ದೇವಸ್ತಾನ ಬೇಗ ಎದ್ದು ನಿಲ್ಲಲಿ.ಅಷ್ಟಾವಧಾನ ಯಶಸ್ವಿ ಆಗಲಿ.
ಇತಿ, ಅಜಕ್ಕಳ ಗಿರೀಶ
Intha adbhuta bailina karyakku devara sevepe serle aydile helta bejaridu.adare devara krupeli munde khandita serva hange agli..namma sahakara evattu idu.
“ತನು ಮನ ಧನ ಸಹಕಾರ” ಕ೦ಡು ಮನಸ್ಸು ಕಣ್ಣು ತು೦ಬಿತ್ತು,ಸ೦ತೋಷಲ್ಲಿ.
ಗರ್ಭಗುಡಿಯ ಕಾರ್ಯ ಮಾಡ್ಲೆ ನಿಜಕ್ಕೂ ಯೋಗ ಬೇಕು.ಯೇನ೦ಕೋಡ್ಲಣ್ಣನ ನೆಗೆಲಿಯೂ ಆ ಸಾರ್ಥಕತೆ ಕಾಣುತ್ತು.
ಬೈಲಿನ ಹಿರಿಯರು,ನಮ್ಮ ಸಮಾಜದ ಹಿರಿಯರು ಒಟ್ಟು ಸೇರಿ ಮಾರ್ಗದರ್ಶಕರಾಗಿ ನಿ೦ದವು,ಅರ್ತಿಕಜೆ ಮಾವ ಕೈ ಸೇರ್ಸಿದವು ಈ ಶುದ್ದಿ,ಪಟ ನೋಡಿ ಕೊಶಿಯಾತು.
ಬೈಲಿನ ನೆ೦ಟ್ರ ಒಟ್ಟಿ೦ಗೆ ಸೇವೆ ಮಾಡುವ ಯೋಗ ಎನಗೆ ನಿನ್ನೆ ಸಿಕ್ಕಿತ್ತಿಲ್ಲೆ,ಮು೦ದೆ ಸಿಕ್ಕಲಿ ಹೇಳಿ ಪ್ರಾರ್ಥಿಸುತ್ತೆ.
ಬೆಶಿ ಬೆಶಿ ವರದಿ ಕೊಶಿ ಕೊಟ್ಟತ್ತು.
[ಮುಂದೆ ಇನ್ನೊಂದರಿ ಬೈಲಿನೋರು ಒಟ್ಟುಸೇರಿ ಮಾಡ್ತ ಕೆಲಸ ಇದ್ದರೆ ತಿಳುಶಿಕ್ಕಿ ಹೇದು ಕೆಲವು ನೆಂಟ್ರುಗೊ ಹೇಳಿದ್ದು ] – ಫಟಂಗಳ ಒಟ್ಟಿಂಗೆ ಈ ಒಂದು ಮಾತು ಸಾಕಿದಾ … ನಿನ್ನಾಣ ಕಾರ್ಯಕ್ರಮ ಹೇಂಗಿತ್ತಾಯ್ಕು ಹೇದು ಗ್ರೇಶಲೆ.
ವರದಿಯೋದಿ ತುಂಬ ಕೊಶಿ ಆತು ಶುದ್ದಿಕಾರಣ್ಣೋ°.