- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬನ್ಸ್
ಬೇಕಪ್ಪ ಸಾಮಾನುಗೊ:
- 1.5 ಒಳ್ಳೆ ಹಣ್ಣಾದ ದೊಡ್ಡ ಬಾಳೆ ಹಣ್ಣು
- 1.5 ಕಪ್(ಕುಡ್ತೆ) ಮೈದಾ ಹೊಡಿ
- 1/2 ಕಪ್(ಕುಡ್ತೆ) ಗೋಧಿ ಹೊಡಿ
- 1/2 ಕಪ್(ಕುಡ್ತೆ) ಮೊಸರು
- ಚಿಟಿಕೆ ಅಡುಗೆ ಸೋಡ
- 2-3 ಚಮ್ಚೆ ಸಕ್ಕರೆ
- 1/2 ಚಮ್ಚೆ ಜೀರಿಗೆ
- 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ)
- ರುಚಿಗೆ ತಕ್ಕಸ್ಟು ಉಪ್ಪು
- ಎಣ್ಣೆ
ಮಾಡುವ ಕ್ರಮ:
ಬಾಳೆ ಹಣ್ಣಿನ ಚೋಲಿ ತೆಗದು, ಪುರುಂಚಿ ಒಂದು ಪಾತ್ರಕ್ಕೆ ಹಾಕಿ. ಅದಕ್ಕೆ ಉಪ್ಪು, ಸಕ್ಕರೆ, ಮೊಸರು, ಅಡುಗೆ ಸೋಡ, ಜೀರಿಗೆ, ಬೆಣ್ಣೆ ಹಾಕಿ ಲಾಯಿಕಲಿ ತೊಳಸಿ. ಅದಕ್ಕೆ ಮೈದಾ ಹೊಡಿ, ಗೋಧಿ ಹೊಡಿ ಹಾಕಿ ಹಿಟ್ಟಿನ ಲಾಯಿಕ ಕಲಸಿ. ಮುಚ್ಚಿ ಒಂದು ಕರೆಲಿ 7-8 ಘಂಟೆ ಮಡುಗಿ.
ದೊಡ್ಡ ನಿಂಬೆ ಹಣ್ಣಿನ ಗಾತ್ರದ ಹಿಟ್ಟಿನ ತೆಕ್ಕೊಂಡು, ಚಪಾತಿ ಮಣೆಲಿ ಬೇಕಾದಸ್ಟು ಮೈದಾ ಹೊಡಿ/ಅಕ್ಕಿ ಹೊಡಿ ಹಾಕಿ ಲಟ್ಟುಸಿ. (ಇದರ ಬದಲು ಹಪ್ಪಳದ ಮಣೆಲಿ 2 ಪ್ಲಾಸ್ಟೀಕು ಶೀಟ್ ನ ನಡುಕೆ ಮಡುಗಿ ಒತ್ತಿದರೂ ಆವುತ್ತು)
ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಎಣ್ಣೆ ಬೆಶಿ ಆದಪ್ಪಗ, ಲಟ್ಟುಸಿದ ಬನ್ಸ್ ನ ಎಣ್ಣೆಗೆ ಹಾಕಿ 2 ಹೊಡೆ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಬೆಶಿ ಬೆಶಿ ಬನ್ಸ್ ನ ಚಟ್ನಿ/ಸಾಂಬರಿನ ಒಟ್ಟಿಂಗೆ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ 5-6 ಬನ್ಸ್ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಎನ್ನ ಇಷ್ಟದ ತಿಂಡಿ
Ninga vivarsuvagale baayili neeru batha iddu. Madi nodeku.
ಅಕ್ಕಅ
ಇದರ ನೋಡಿ ಒಂದರಿ ತಾಜುಮಹಲಿಂಗೆ ಹೋಗಿ ಬರೆಕ್ಕಾತಡ ನಮ್ಮ ಸುಭಗ ಬಾವಂಗೆ..
ಪಸ್ಟಾಯಿದು..
ಎನ್ನ ಇಷ್ಟದ ತಿಂಡಿ.
ಅದಕ್ಕಾಗಿ ಒಂದೊಪ್ಪ 🙂
ಎಂಗಳಲ್ಲಿ ಇಂದು ಬನ್ಸ್., ತಿಂದಿಕ್ಕೆ ಬೈಲಿಂಗೆ ಬಂದರೆ ಇಲ್ಲಿಯೂ ಬನ್ಸ್ !!
ಬನ್ಸ್ ತಿಂಬಲೆ ಲಾಯಕ ಆವ್ತು ಮಾಡಿ ಕೊಟ್ರೆ. ಶುದ್ದಿಗೊಂದು ಒಪ್ಪ.