ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು!
ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು,ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!!
ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು.ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು.
’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’.
ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ!
ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°.
ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ.
ಆತೋ?ಏ°?
bhala layak iddu
colgate paste haaki brush maadidare 1 hallude ira heli ajja nege maadudu..astu gonthavthilleya??
ಅಜ್ಜನ ಮಾತಿಲಿ ಹೇಳುತ್ತರೆ..
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಹಲ್ಲನುಜ್ಜುವುದನು ಕಂಡೂ…
“estu colgate paste marata aagadde olivale karanave enna nege ” heli greshegondu ajjange nege bandadu agikku.
ಅದಲ್ಲಾ. ಆನು ಉಪಯೋಗ್ಸಿದ್ದು close-up. ನಿಂಗ colgate ಬಗ್ಗೆ ಮಾತಾಡ್ತ ಇದ್ದಿ ಹೇಳಿ ನೆಗಾಡುದು..
ಅಲ್ಲಾ…. ಈ ಪಟ ತೆಗದ್ದು ಆರು….? ಅಜ್ಜಂಗೆ ನೆಗೆ ಬಪ್ಪಲೆ ಕಾರಣ ಪಟ ತೆಗದವರ ಮಾತೋ, ತೆಗೆತ್ತ ‘ಇಷ್ಟೈಲೋ’, ಮೋರೆಯೋ ಆದಿಕ್ಕು….
ಯೇವದೂ ಅಲ್ಲ.
ನಿಂಗೊ ಹೀಂಗೆ ಅಂಗುಡಿಲಿ ಕೂದರೆ ಮನೆಲಿ ಅಜ್ಜಿಗೆ ಅಸಕ್ಕ ಆಗದೋ – ಹೇಳಿ ಕೇಳಿದನಡ, ಪಟತೆಗದ ಯೇನಂಕೂಡ್ಳಣ್ಣ!
ಅದಕ್ಕೇಡ.
ಮೊನ್ನೆ ಸಾಯಿಮಂದಿರಲ್ಲಿ ಸಿಕ್ಕಿ ಹೇಳಿದ°.. 😉
ನೆಗೆಗೆ ಕಾರಣವೆನಗೆ ತಿಳಿದಿದೆ !!! ಎನಗೆ ಗೊಂತಿದ್ದು, ನಿನ್ನೆ ಅಜ್ಜಂಗೆ ಫೋನು ಮಾಡಿ ಕೇಳಿದೆ !!! ಕ್ಯಾಮರ ಹಿಡ್ಕೊಂಡು..ಪುಳ್ಳಿ ’ಇಸ್ಮೈಲ್’ ಹೇಳಿ ಬೊಬ್ಬೆ ಹಾಕಿದಾಡ !! ಅದಕ್ಕೇ ಅಜ್ಜನ ಈ ಪೋಸು !!
ಆನು ಹಲ್ಲು ತಿಕ್ಕಲೆ ಇದರ ಉಪಯೋಗ ಮಾಡಿದ್ದು ತಪ್ಪಾತೋ ಹೇಳಿ ಅಜ್ಜ ಯೋಚನೆ ಮಾಡದ್ದೆ ಇಕ್ಕೋ?
ಪೊಕ್ಕಡೆ ಈ ಕೋಲ್ಗ್ಟು ದಾಯೆ ಪಂಡ್ ಅಜ್ಜೇರ್ ತೆಲಿಪ್ಪುನ… ಈ ಬಟ್ರುನಾಕ್ಲು ಅಯ್ಕುಲಾ ಜಗಳ!
ಅಂದಾ ಬಟ್ಯ…. ಪುರ್ಸೊತ್ತುಂಡ… ತೋಟೊಡು ಮರ್ದು ಬುಡ್ಯಾರಿತ್ತುಂಡು…
😀 😛
ಇದೆಂತ ಶರ್ಮಣ್ಣ, ನಿಂಗೊ ಎಲೆ ತಿಂಬ ಮೊದ್ಲು ಒಂದರಿ ನೆಗೆ ಮಾಡಿಕ್ಕಿ, ತಿಂದು ಬಾಯಿ ಕೆಂಪಾದಪ್ಪಗ ಮತ್ತೊಂದರಿ ನೆಗೆ ಮಾಡಿದ್ದದ?
apu bava.. ele thiniDondu Etide… ajja na Pata Nodi, yellara comment oodiyappaga bayakara Nege bantu.. hange bayi kempu kaNdadu ningo ge.. 😛 ;P
” settu hallu madugidare ennu chanda kanthitu” heli heliddakkaiku..enta helthi??
ಎನ್ನ ಪಟ ಒಪ್ಪಣ್ಣನ ಬಯಲಿಲ್ಲಿ ಹಾಕಿರೆ, ಹೇಂಗೆಲ್ಲಾ ಕಮೆಂಟ್ ಬಕ್ಕು ಹೇಳಿ ಜಾನ್ಸಿಯೇ ಜೋರು ನೆಗೆ ಬಂತು- ಹೇಳ್ತಾ ಇದ್ದವು ಅಜ್ಜ.
ಅಂಗಡಿಯ ಧನಿ ಈ ಅಜ್ಜನ ಪೇಸ್ಟ್ಟ್ ಕಾವಲೆ ಕೂರ್ಸಿಕ್ಕಿ ಹೋದ್ದು ಆದಿಕ್ಕು ಹಲ್ಲಿಲ್ಲದ್ದದು ಪೇಸ್ಟ್ತು ಕದ್ದುಗೊಳ್ಳ ಹೇಳಿ…ಪಟ ತೆಗವಗ ನೆಗೆ ಮಾಡುಲೆ ಆರೊ ಹೇಳಿದವು ಹಾಂಗೆ ನೆಗೆಮಾಡಿತ್ತಾಡಿಕ್ಕು……ಅದರಲ್ಲಿ ಇಸ್ಟ್ಟುದೊಡ್ಡ ಮಾಡುಲೆ ಎಂತ ಇದ್ದು ಹೇಳಿ..???
ನಗೆಗಾರ ಆ ಪಟ ಹಾಕಿರುದೆಮ್ ಹೆಸರು ನಗೆಯಜ್ಜ ಹೇಳಿ ಬದಲ್ಸದ್ರೆ ಸರಿ ಆಗ ಅಲ್ಲದೊ ಮಾವ??
ಅಪ್ಪು!!ಅಜ್ಜ ಈಗ ಸದ್ಯಕ್ಕೆ ಬತ್ತವಿಲ್ಲೆ ಹೇಳಿ ಹೇಳಿದವು..ಈಗಾಣ ಪುಳ್ಳರುಗೊಕ್ಕೆ ಪೇಷ್ಟು ಇಲ್ಲದ್ದೆ ಹಲ್ಲು ತಿಕ್ಕುಲೆ ಎಡಿತ್ತಿಲ್ಲೇಡ.ಹಾಂಗೆ ವ್ಯಾಪಾರ ರಜ್ಜ ಜೋರು.ಮೊದಲು ಜೀನ್ಸು ಅಂಗಡಿಯೂ ಇತ್ತು.ಈಗ ಮಾತ್ರ ಹಲ್ಲಿನ ಡಾಕ್ಟ್ರೋಕ್ಕೋ ಎಲ್ಲ ಇದೇ ಪೇಷ್ಟಿಲಿ ಹಲ್ಲು ತಿಕ್ಕೆಕ್ಕು ಹೇಳಿ ಹೇಳಿದ ಕಾರಣ ಅವರ ಇಡೀ ಅಂಗಡಿಲಿ ಪೇಸ್ಟು ಮಾತ್ರ ಸಿಕ್ಕುದಡ..ಹಾಂಗೆ ನೆಗೆ ಅಜ್ಜ ಆಗಿ ಸದ್ಯಕ್ಕೆ ಬಪ್ಪಲೆ ಪುರುಸೋತ್ತಿಲ್ಲೆ ಹೇಳಿ ಹೇಳಿದವು..
ಅದು ಆ ಕಾಲಕ್ಕೆ ಸರಿ ಅಕ್ಕು.. ಪುಟ್ಟಾ!! ಈಗ ಅವ ಸಣ್ಣ!!!
ನಮ್ಮ ನೆಗೆಗಾರ° ಬಾವ….ಈ ಪಟವ ತನ್ನ ಪಟ ಹೇಳೀ ಹಾಕುತ್ತಾನೋ ಡೌಟಿದ್ದು ಎನಗೆ. ಗಣೇಶ ಮಾವ° ಪೇಟೆಂಟ್ ತೆಕ್ಕೊಂಡಿಕ್ಕಿ ಅತೋ….
ಉಳಿದಂತೆ ಮಹೇಶಣ್ಣನ ಪಾಯಿಂಟಿಗೆ ಎನ್ನದೂ ಸಹಮತ…
Oh! keppa kunchi.. enta maadta idde.. nege maani ushari idda.. ninnannu dongi madugu jaagrate miniyaa..
ಅಕ್ಕು ಭಾವಾ! 🙂
ಹಿ ಹಿ ಹಿ 🙂 ಪಟ ಹಾಕಲೆ ಎನಗೆ option ಕಂಡತ್ತಿಲ್ಲೆ 🙂
ಅಲ್ಲಿ ಮೇಗೆ ಒಪ್ಪಣ್ಣ ಇದ್ದ!!!ಅವನ ಹತ್ರೆ ಕೇಳು ಮಿನಿಯ!!!
🙂 ಏವ ಭಾವನ ನಿಂಗ ಕೇಳಿದ್ದು?
ನಿನ್ನನ್ನೇ ಬಾವೋ….ನಿನಗೆ ಉತ್ತರಿಸಿದ್ದು ಅಲ್ಲದೋ
ಎಂತ ಪ್ರಶ್ನೆ ಮಾರಾಯರೆ, ಪಟ ತೆಗವಾಗ ನೆಗೆ ಮಾಡದ್ರೆ ಹೇಂಗೆ!>>>??? 😀
ಬಾವನ ಪಟ ಎಲ್ಲಿ ಹೋತು…. ನೆಗೆ ಮಾಡಿಯೊಂಡು ಹೊಸ ಪಟ ತೆಗದು ಹಾಕುಲಿದ್ದೋ ಹೇಂಗೆ.. ನವಗರಡಿಯ…
ನಿಂಗ ಪಟಕ್ಕೆ ಎಂತಕೆ ಜಗಳ ಮಾಡ್ತೀರೋ?ವಿಷಯ ಎಂತ್ಸು ಹೇಳಿ….
ಕುಂಞಜ್ಜ .. ಸುದ್ದಿ ಪಟದ ಬಗ್ಗೆ ಅಲ್ಲದೋ..? ಹಾಂಗೆ ಅವನ ಪಟ ಹಾಕುಲಕ್ಕೋ ಕಂಡತ್ತಿದಾ ಅಜ್ಜನ ಪಟದೊಟ್ಟಿಂಗೆ
ಆ ಕಾಲದವರ ಸಂತೋಷ ಈಗೆಲ್ಲಿದ್ದು ಎಲ್ಲಿ ನೋಡಿದರು ವ್ಯವಹಾರ ……….ವ್ಯವಹಾರ ಅದಕ್ಕೆ ಅಜ್ಜ ಈಗಿನವರ ದುಗಡ ನೋಡಿ ನಗೆ ಹೋಡಿತಾ ಇದ್ದಿಪ್ಪ
“ನೆಗೆಗಾರನ ಪಕ್ಷಕ್ಕೆ ಹಿರಿಯ ಮುತ್ಸದ್ದಿ ಸೇರ್ಪಡೆ”
೧. ಇಲ್ಲಿ ನೆಗೆ ಮಾಡುವವರಲ್ಲಿ (ದಂತ) ಪಂಕ್ತಿ, ಪಂಗಡ ಭೇದ ಇಲ್ಲೆ ಹೇಳುವ ವಿಚಾರ ಮೆಚ್ಚಿ ತುಂಬಿದ ಮನಸ್ಸಿಂದ ಭಾರೀ ನೆಗೆಯೊಂದಿಗೆ ಪಕ್ಷದ ಪ್ರವೇಶ ಮಾಡಿದ್ದವು ಈ ಅಜ್ಜ.
೨. ಇದರೆಡಕ್ಕಿಲ್ಲಿ, ಲಾಂಛನಲ್ಲಿ ಪುಳ್ಳಿಯ ನೆಗೆ ತೋರುಸಿ ಅಜ್ಜನ ನೆಗೆ ಪಕ್ಷದವು ಪಕ್ಷಾಂತರ ಮಾಡುಸಿದ್ದದು ಹೇಳಿ ಚಿಂತಾಮಗ್ನ ಪಕ್ಷದವರ ಅಂಬೋಣ.
೩. ಮೊದಲು ಇದ್ದ ಹಲ್ಲು ಕಿಸಿಯುವ ದಾಂಡಿಗನ ಪಟವ ಲಾಂಛನಂದ ತೆಗದು ಇಡ್ಕಿ ಹೊಸ ಪಟ ಹಾಕಿದ್ದದರ ಈ ಸಂದರ್ಭಲ್ಲಿ ನೆಂಪು ಮಾಡ್ಲಕ್ಕು ಹೇಳಿ “ಸಂಶಯ” ಪತ್ರಿಕೆಯವು ವರದಿ ಮಾಡಿರೆ, ನಗೆಗಾರನ ಪಿತೂರಿಯ ಬೈಲಿಂಗೆ ಎಳೆತ್ತೆಯೋ ಹೇಳಿ ಅಪಪ್ರಚಾರ ಪ್ರಿಯರು ಹೆರಟಿದವಡ. ಆದರೆ ಬಯಲಿನವು ಇದರ ನೆಗೆ ಮಾಡಿಯೇ ತಳ್ಳಿ ಹಾಕಿದ್ದವು ಹೇಳಿ ಕಾಣುತ್ತು.
೪. ಬಯಲಿನವು ಮಾತ್ರ ಅವರವರಷ್ಟಕೆ ಕಾರಣ ಹುಡುಕುತ್ತಾ ಇದ್ದವು.
ಕೋಲ್ಗೆಟ್ ಉಪಯೋಗ ಮಾಡಿದ್ದರೆ ಹೀಂಗೆ ಆವ್ತಿತಿಲ್ಲೇ ಹೇಳಿ ಆದಿಕ್ಕು……
Ninga nagyadre hallu kaanistu, nangadre ille..hehehe….
Colgate tooth paste Use maadre yenna hange hallu akku heLe maadari age yengoge phaata kaLushataDu.. 😀 😉
ಹಲ್ಲಿದಾಗ ಕಡಲೆ ಇಲ್ಲ,ಕಡಲೆ ಇದ್ದಾಗ ಹಲ್ಲಿಲ್ಲ ಹೇಳ್ತ ಗಾದೆ ಇದ್ದು..ಅಜ್ಜಂಗೆ ಹಲ್ಲಿಪ್ಪಗ ಹಲ್ಲು ತಿಕ್ಕುವ ಸಾಧನಂಗೊ(ಕೇಲ್ಗೇಟು ಪೇಸ್ಟು) ಇತ್ತಿಲ್ಲೆ ಆದಿಕ್ಕು,ಅದೇ ಈಗ ಸಾಧನ ತಲೆ ಹಿಂದೆಯೇ ಇಪ್ಪಗ ಹಲ್ಲಿಲ್ಲೆ.. ಹಾಂಗಾಗಿ ವಿಪರ್ಯಾಸದ ನೆಗೆ ಆದಿಕ್ಕು.. 😉
ಆದರೂ ಕೋಲ್ಗೇಟು ಕಾಂಬಗ ಬಾಯಿಬಿಟ್ಟು ನೆಗೆ ಮಾಡುವ ಹೇಳಿ ಕಂಡತ್ತಾಯಿಕ್ಕು..
ಹಲ್ಲಿಲ್ಲದ್ದರೆ ಎಂತಾತು,ಹಲ್ಲಿಪ್ಪೋರಿಂದ ಆನೆಂತ ಕಮ್ಮಿ ನೆಗೆ ಮಾಡುದರಲ್ಲಿ ಹೇಳಿ ಕೇಳಿದ ಹಾಂಗಿದ್ದು… 😉
ಕೇಲ್ಗೇಟು????????
ಅದು ಬರಹದ ದೋಷ.. ನಿಂಗೊಗೆ ಅರ್ಥ ಆತನ್ನೇ,ಅಷ್ಟೇ ಸಾಕು.. 😉 ಅದರ ಕೋಲ್ಗೇಟ್ ಹೇಳಿ ಓದಿಗೊಳ್ಳಿ… 😉
ಅದಾ !!!!! ಸೌಮ್ಯ… ನಿಂಗೋ ಮನೇಲಿ ಜಗಳ ಮಾಡ್ತ ಹಾಂಗೆ ಇಲ್ಲಿ ಮಾಡಡಿ ಮಿನಿಯಾ….ಆನು ಮತ್ತೆ ನಿಂಗೋಗೆ ಚೋಕಿ ಕೊಡುವೆ ಆತಾ!!!
O! bailakare baavaa.. ninude iddeyo illi.. entada koosinge..
ಗಣೇಶ ಮಾವಂತ್ರೆಂತ ಜಗಳ ಅಜ್ಜ?? ಮಾವಂದ್ರತ್ರೆ ಜಗಳ ಮಾಡುದಿದ್ದ ಎಲ್ಲಿಯಾದರೂ? ಮಾವಂತ್ರೆ ಬರಹ ದೋಷ ಆಯಿದು ಹೇಳಿ ಹೇಳಿದ್ದಷ್ಟೆ… 🙂
ಇದಕ್ಕೇ ಹೇಳುದು ಕೋಲ್ಗೆಟ್ ಸ್ಮೈಲ್ !!
ಎಂತ ಬಾವ ಅಷ್ಟು ಗೊಂತಾವುತ್ತಿಲ್ಲೆಯಾ.. ನೀರ್ಕಜೆ ಅಪ್ಪಚ್ಚಿಯ ಮೀಸೆ ಜಾಹಿರಾತಿನ ಹಾಂಗೆ ಅಜ್ಜನ ಕನ್ನಡಕದ ಜಾಹೀರಾತು ಅಲ್ಲದೋ.. ಕೊಡೆಯಾಲದ ನಾಯ್ಕನ ಕನ್ನಡಕದ ಅಂಗಡಿಗೆ…..