Oppanna.com

ಮಾವಿನಕಾಯಿ ಚಿತ್ರಾನ್ನ

ಬರದೋರು :   ವೇಣಿಯಕ್ಕ°    on   04/06/2013    1 ಒಪ್ಪಂಗೊ

ವೇಣಿಯಕ್ಕ°

ಮಾವಿನಕಾಯಿ ಚಿತ್ರಾನ್ನ

ಬೇಕಪ್ಪ ಸಾಮಾನುಗೊ:

  • 2-3 ಕಪ್(ಕುಡ್ತೆ) ಬೇಶಿದ ಅಶನ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು)
  • 3/4-1 ಕಪ್(ಕುಡ್ತೆ) ತುರುದ ಮಾವಿನಕಾಯಿ
  • 2 -3 ಚಮ್ಚೆ ಕಾಯಿ ತುರಿ
  • 2-3 ಹಸಿಮೆಣಸು
  • 7-8 ಎಳೆ ಕೊತ್ತಂಬರಿ ಸೊಪ್ಪು
  • 8-10 ಬೇನ್ಸೊಪ್ಪು
  • 3 ಚಮ್ಚೆ ನೆಲಕಡ್ಲೆ
  • 2 ಚಮ್ಚೆ ಕಡ್ಲೆ ಬೇಳೆ
  • 1 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ
  • 1/2 ಚಮ್ಚೆ ಜೀರಿಗೆ
  • 1-2 ಮುರುದ ಒಣಕ್ಕು ಮೆಣಸು
  • 1/2-3/4 ಚಮ್ಚೆ ಅರುಶಿನ ಹೊಡಿ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

1 ಕುಡ್ತೆ ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ ತೊಳದು, ಸಾಧಾರಣ 2 ಕುಡ್ತೆ ನೀರು ಹಾಕಿ, ಕುಕ್ಕರಿಲ್ಲಿ ಬೇಶಿ ಕರೆಲಿ ಮಡುಗಿ.

ಮಾವಿನಕಾಯಿಯ ತೊಟ್ಟು ತೆಗದು(ಕೈಕ್ಕುತ್ತರೆ ಚೋಲಿಯನ್ನೂ ತೆಗದು), ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುರುದು ಮಡುಗಿ.
ಹಸಿಮೆಣಸಿನ ಸಿಗುದು ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ.

ಒಂದು ಬಾಣಲೆಲಿ ನೆಲಕಡ್ಲೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಸಿಗುದ ಹಸಿಮೆಣಸು, ಇಂಗು, ಬೇನ್ಸೊಪ್ಪು, ತುರುದ ಮಾವಿನಕಾಯಿ, ಅರುಶಿನ ಹೊಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಸಾಧಾರಣ 5 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ತೊಳಸಿ.

ಬೇಶಿ ಮಡುಗಿದ ಅಶನವ ಹಾಕಿ ತೊಳಸಿ.

ಇದಕ್ಕೆ ಕಾಯಿ ತುರಿ(ಉಪ್ಪು ಬೇಕಾದರೆ) ಹಾಕಿ ತೊಳಸಿ, 2-3 ನಿಮಿಷ ಲಾಯಿಕ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಮಾವಿನಕಾಯಿ ಚಿತ್ರಾನ್ನ

  1. ಅನು ಒಂದರಿ ಚಿತ್ರಾನ್ನ ಮಾಡಿತ್ತು ಓ ಮೊನ್ನೆ. ಭಾರೀ ಲಾಯ್ಕಾಗಿತ್ತು 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×