Oppanna.com

ಅಕ್ಕಿ ಹಲಸಿನ ಹಣ್ಣು ಪಾಯಸ

ಬರದೋರು :   ವೇಣಿಯಕ್ಕ°    on   11/06/2013    5 ಒಪ್ಪಂಗೊ

ವೇಣಿಯಕ್ಕ°

ಅಕ್ಕಿ ಹಲಸಿನ ಹಣ್ಣು ಪಾಯಸ

ಬೇಕಪ್ಪ ಸಾಮಾನುಗೊ:

  • 1/2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಒಳ್ಳೆದು)
  • 4 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು
  • 2 ಕಪ್(ಕುಡ್ತೆ) ಬೆಲ್ಲ
  • 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 3-4 ಏಲಕ್ಕಿ

ಮಾಡುವ ಕ್ರಮ:

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ.

ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ 2-3 ಸರ್ತಿ ತೊಳದು, ಪ್ರೆಶರ್ ಕುಕ್ಕರಿಂಗೆ ಹಾಕಿ. ಕೊಚ್ಚಿದ ಹಲಸಿನ ಹಣ್ಣು, ಸಾಧರಣ 3 ಕುಡ್ತೆ ಅಪ್ಪಸ್ಟು ನೀರು ಹಾಕಿ ಬೇಶಿ.(2 ಸೀಟಿ)

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಬೇಶಿದ ಅಕ್ಕಿ, ಹಲಸಿನ ಹಣ್ಣಿನ ಪಾತ್ರಕ್ಕೆ ಹಾಕಿ, ಬೆಲ್ಲ, ಚಿಟಿಕೆ ಉಪ್ಪನ್ನೂ ಹಾಕಿ ಕೊದುಶಿ.
ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಸಾಧಾರಣ 5 ನಿಮಿಷ ಮಡುಗಿ.
ಕಾಯಿ ಹಾಲಿನ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

5 thoughts on “ಅಕ್ಕಿ ಹಲಸಿನ ಹಣ್ಣು ಪಾಯಸ

  1. ಓಹ್! ಮಳೆ ಸುರು ಆದ ಕಾರಣವಾ ಸಂದೇಶಣ್ಣಾ?

  2. ಸುಮನಕ್ಕಾ ಇನ್ನು ಹಲಸಿನಹಣ್ಣಿಲಿಯೂ ನೀರು ಬಕ್ಕು ಅಲ್ಲದಾ!!

  3. ಹಲಸಿನ ಹಣ್ಣು ಫೋಟೋ ದೆ, ಪಾಯಸ ಫೋಟೋದೆ ನೋಡುವಗ ಬಾಯಿಲಿ ನೀರು ಬತ್ತಾ ಇದ್ದು ವೇಣೀ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×