- " ಜೀವಸೆಲೆ " - June 10, 2014
- ಜಯನಮೋ - May 18, 2014
- ಓಟುಬಂತದಓಟು! - March 31, 2014
ಪುಟ್ಟು ಚಾಮಿ
“ಉಕ್ಕಾಚು ಮಾಡುತ್ತೆ
ಬಾ ಚಾಮಿ ದೇವರೆ
ಓ ಇಲ್ಲಿ ಕಾಲಿಲ್ಲಿ ಕೂಚ ಪುಟ್ಟು/
ಚಂದಪ್ಪ ಚಾಮಿಯ
ತೋಚುತ್ತೆ ಬಾನಲ್ಲಿ
ನೆಗ್ಗಿ ಹಿಡಿತ್ತೆ ನೀನು ಕೈಲಿ ಮುಟ್ಟು /೧/
‘ಚಪ್ಪ’ ಕಾಲಿಲಿ ಹಾಕಿ
ತಟುಪುಟು ನೆಡಕ್ಕಂಡು
ನವಗಿಂದು ಇದ! ಬೂವ ಹೋಪಲಿದ್ದು /
ಅಪ್ಪನಾ ಬೂಟಿನೊಳ
ಕಾಲು ಸಿಕ್ಕುಸಿ ನೆಡವ
ಚೆಂದವ ಎಲ್ಲೊರುದೆ ನೋಡಲಿದ್ದು/೨/
‘ಅಟ್ಟುಂಬೊಳ’ದ ಒಳವೆ
ಪುಟ್ಟು ಕಾರ್ಬಾರೆಲ್ಲ
ಠಂ ಠಂ ಟಣ ಟಣ ಶಬ್ದ ಕೇಳುತ್ತು/
ಗೋಡೆ ಬಾಗಿಲಿಲೆಲ್ಲ
ಕುಂಞ್ಞಿ ಕೈ ಬೆರಳುಗಳ
ಕಾಲ ಗುರ್ತವು ಕೂಡ ಎದ್ದು ಕಾಣುತ್ತು /೩/.
ಬಣ್ಣ ಕಾಗದ ,ಪೆನ್ನು
ಸೊಪ್ಪು, ಕಾಜಿನ ಬಳೆಯೊ!
ಪೆನ್ಸಿಲ್ಲು ಪುಸ್ತಕ ಆಡೊ ಚೆಂಡೊ /
ಕಲ್ಲು ,ಮರದ ಕೋಲು
ಬಾಚಣಿಗೆ ,ರಬ್ಬರ್ರು
ಲಕ್ಕೋಟೆ ,ಗೋಳಿಕಾಯಿ, ಕಡ್ಡಿ ತುಂಡೊ/೪/
ಮಾರಾಪುನೋಡಿದರೆ
ಎಂತೆಂತೊ ಸಾಮಾನು
“ಇದು ಬೇಕೊ?ಎಂತಕಿದು?”ಹೇಳುಗಪ್ಪ /
ನಿಂಗೊ ಹೀಂಗೇ ಬೆಳದು
ದೊಡ್ಡಾದ್ದದಲ್ಲಾದೊ ?
ಹೇಳುಗು -ಕೇಳಿದರೆ’ ಗೊಂತಿಲ್ಲೆ ,ಉಮ್ಮಪ್ಪ’/೫/
ಹೆಗಲ್ಲಿ ಕೂರುಸಿ ಇವನ
ತೋಂಪಟ ಮಾಡ್ಲಿದ್ದು
ಆರು ಈ’ ದೊಡ್ದ ಜೆನ ‘ಹೇಳಿ ಗೊಂತಿದ್ದೊ?/
ಮನೆ ಇಡಿಯೆ ಕೊಣಿ ಕೊಣಿವ
ಚಿಲಿಪಿಲಿ ಹಕ್ಕಿ ಮರಿ
ಮನೆ ಚಾಮಿ ದೇವರು ‘ಬೇರೆ ಇದ್ದೊ/೬/
~~~***~~~
ಇಶಾನ್ ಚಾಮಿಯ ನೆಂಪು ಆವುತಾ ಇದ್ದು……….ಹಾಡು ಓದುವಗ ……… ಲಾಯಿಕಾಯಿದು
ಇಶಾನ್ ಚಾಮಿಯ ನೆಂಪು ಆವುತಾ ಇದ್ದು……….ಹಾಡು ಓದುವಗ ……… ಒಲ್ಲೆದಾಯ್ದು
ಪುಟ್ಟುಚಾಮಿಯ ಬಾಲ ಲೀಲೆಗಳ ವರ್ಣನೆ-ವಿವರಣೆ ಒಪ್ಪ ಆಯಿದು ಬಾಲಣ್ಣ.
ಪುಟ್ಟುಚಾಮಿಯ ತೋಂಪಟಮಾಡಿ ಹೊರುವ ಸಂಭ್ರಮಕ್ಕೆ ಬೇರೆ ಯಾವದು ಸಾಟಿಯಕ್ಕು? ಈ ಪದ್ಯದ ಸಾಲುಗಳ ಓದುವಾಗ ಎಲ್ಲೋರಿಂಗೂ ಅವು ಅನುಭವಿಸಿದ ಸಂಭ್ರಮದ ಆ ಕ್ಷಣ ಕಣ್ಣ ಮುಂದೆ ಬಪ್ಪದು ಖಂಡಿತಾ. ಆ ಸವಿನೆನಪಿನ ಚಪ್ಪರುಸುವ ಹಾಂಗೆ ಮಾಡಿದ್ದಕ್ಕೆ ಬಾಲಣ್ನ ನಿಂಗೊಗೆ ಚಾಮಿಚಾಮಿ.
ಮುಗ್ಧ ಮನಸ್ಸಿನ ಎಳೆಯ ಮಕ್ಕೊ ಯಾವಗಲೂ ನವಗೆ “ಪುಟ್ಟು ಚಾಮಿ” ಯೇ.
ಮನೆ ಇಡಿಯೆ ಕೊಣಿ ಕೊಣಿವ ಚಿಲಿಪಿಲಿ ಹಕ್ಕಿ ಮರಿ ಮನೆ ಚಾಮಿ ದೇವರು ‘ಬೇರೆ ಇದ್ದೊ- ಈ ಸಾಲು ತುಂಬಾ ಕೊಶೀ ಆತು.
ಇದು ಎನ್ನ ಎರಡು ವರ್ಷದ ಪುಳ್ಲಿ “ಪುಟ್ಟು ಚಾಮಿ”” ಯದ್ದೇ ಕಥೆ. ನಿಂಗೊಗೆ ಹೇಂಗೆ ಗೊಂತಾತು?!!!!…ಆಹಾ…ಒಪ್ಪವೇ…
ಓಹೋ!… ಹಾಂಗೋ ಕತೆ ? ಅಂಬಗ ಆ ‘ ಪುಟ್ಟು ಚಾಮಿ ‘ಗೆ ಒಂದೊಪ್ಪ ..
ಒಪ್ಪ ಇದ್ದು
ಆಹಾ… ಎಟ್ಟು ಒಪ್ಪೊಪ್ಪ ಆಯ್ದೂ…. 🙂
”ಪುಟ್ಟು ಚಾಮಿ” ಬೆಳವ ರೀತಿ ನೈಜವಾಗಿದ್ದು ಬಾಲಣ್ಣ.