Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಪತ್ರೊಡೆ ಸೀವು ಒಗ್ಗರಣೆ
ಬೇಕಪ್ಪ ಸಾಮಾನುಗೊ:
- 1 ಪತ್ರೊಡೆ
- 1 ಕಪ್(ಕುಡ್ತೆ) ಕಾಯಿ ತುರಿ
- 3/4-1 ಕಪ್(ಕುಡ್ತೆ) ಬೆಲ್ಲ
- 3-4 ಬೇನ್ಸೊಪ್ಪು
- 1 ಚಮ್ಚೆ ಉದ್ದಿನ ಬೇಳೆ
- 1/2 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು
- 2-3 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಹೊಡಿ ಮಾಡಿ ಮಡುಗಿ.
ಬೆಲ್ಲವ ಕೆರಸಿ, ಕಾಯಿ ಸುಳಿಗೆ ಸೇರ್ಸಿ ಲಾಯಿಕ ಬೆರುಸಿ ಮಡುಗಿ.
ಇದರ ಹೊಡಿ ಮಾಡಿದ ಪತ್ರೊಡೆಗೆ ಹಾಕಿ ಬೆರುಸಿ ಮಡುಗಿ.
ಒಂದು ಬಾಣಲೆಲಿ ಎಣ್ಣೆ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಬೆಲ್ಲ ಸುಳಿ ಬೆರುಸಿದ ಪತ್ರೊಡೆಯನ್ನೂ ಹಾಕಿ ತೊಳಸಿ.
ಪತ್ರೊಡೆ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಎನಗೆ ಇದು ಎಷ್ಟು ಪ್ರೀತಿ ಹೇಳಿರೆ ದಿನದ ೪ ಹೊತ್ತುದೆ ತಿಂಬೆ, ಪತ್ರೊಡೆ ಸೀವು ಒಗ್ಗರ್ಸಿದ್ದು,
ವಾಹ್.ಇ೦ದು ನಾಲ್ಕ್ ಹೊತ್ತಿ೦ಗೂ ಇನ್ನ್ ಇದುವೆ.
ಕಡೆಸ್ತ್ ಬತ್ತ್ ನೆಕಳೆಕ್ ಖಾಲಿ ಪ್ಲೇಟ ,ಆತೇ.