Oppanna.com

ಹಯಗ್ರೀವ

ಬರದೋರು :   ವೇಣಿಯಕ್ಕ°    on   15/10/2013    2 ಒಪ್ಪಂಗೊ

ವೇಣಿಯಕ್ಕ°

ಹಯಗ್ರೀವ

ಬೇಕಪ್ಪ ಸಾಮಾನುಗೊ:

  • 3/4 ಕಪ್(ಕುಡ್ತೆ) ಕಡ್ಲೆ ಬೇಳೆ
  • 1 ಕಪ್(ಕುಡ್ತೆ) ಬೆಲ್ಲ
  • 1-2 ಚಮ್ಚೆ ಗೇರು ಬೀಜ
  • 1 ಚಮ್ಚೆ ಒಣ ದ್ರಾಕ್ಷೆ
  • 2 ಲವಂಗ
  • 3-4  ಚಮ್ಚೆ ಕೊಬ್ಬರಿ ತುರಿ
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 1 ಏಲಕ್ಕಿ
  • 2 ಚಮ್ಚೆ ತುಪ್ಪ

ಮಾಡುವ ಕ್ರಮ:
ಕಡ್ಲೆ ಬೇಳೆಯ ನೀರಿಲ್ಲಿ 2-3 ಸರ್ತಿ ಲಾಯಿಕಲಿ ತೊಳದು, ಬೇಕಾದಸ್ಟು ನೀರು ಹಾಕಿ(ಸಾಧರಣ 1.5 ಕುಡ್ತೆ ನೀರು) ಪ್ರೆಶರ್ ಕುಕ್ಕರಿಲ್ಲಿ ಬೇಶಿ.(5-6 ಸೀಟಿ). ಪ್ರೆಶರ್ ಹೋದ ಮೇಲೆ, ಹೆಚ್ಚಿಪ್ಪ ನೀರಿನ ಬಗ್ಗುಸಿ ತೆಗೆರಿ.

ಒಂದು ಬಾಣಲೆಗೆ 1 ಚಮ್ಚೆ ತುಪ್ಪ ಹಾಕಿ ಗೇರು ಬೀಜ, ಒಣ ದ್ರಾಕ್ಷೆ, ಲವಂಗ, ಕೊಬ್ಬರಿ ತುರಿಯ ಒಂದೊಂದೇ ಆಗಿ, ಚಿನ್ನದ ಬಣ್ಣ/ಪರಿಮ್ಮಳ ಬಪ್ಪನ್ನಾರ, ಸಣ್ಣ ಕಿಚ್ಚಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊರಿರಿ. ಏಲಕ್ಕಿಯ ಚೋಲಿ ತೆಗದು ಹೊಡಿ ಮಾಡಿ ಮಡಿಕ್ಕೊಳ್ಳಿ.

ಇನ್ನೊಂದು ಬಾಣಲೆಗೆ ಬೆಲ್ಲ, ರೆಜ್ಜ ನೀರು(ಸಾಧಾರಣ 1/4 ಕುಡ್ತೆ) ಹಾಕಿ, ಕೊದುಶಿ. ಬೆಲ್ಲ ಕರಗಿ ಅಪ್ಪಗ, ಬೇಶಿದ ಕಡ್ಲೆ ಬೇಳೆ, ಚಿಟಿಕೆ ಉಪ್ಪು ಹಾಕಿ ತೊಳಸಿ. ಇದರ ಸಣ್ಣ ಕಿಚ್ಚಿಲ್ಲಿ 4-5 ನಿಮಿಷ ಮುಚ್ಚಲು ಮುಚ್ಚಿ ಬೇಶಿ. ನಿಮಿಷಕ್ಕೊಂದರಿ ತೊಳಸುತ್ತಾ ಇರಿ.

ಹೊರುದು ಮಡುಗಿದ ದ್ರಾಕ್ಷೆ, ಬೀಜ, ಕೊಬ್ಬರಿ ತುರಿ, ಲವಂಗ, ಏಲಕ್ಕಿ ಎಲ್ಲ ಹಾಕಿ ತೊಳಸಿ. ಹಯಗ್ರೀವವ ಸಣ್ಣ ಕಿಚ್ಚಿಲ್ಲಿ 2-3 ನಿಮಿಷ ಮಡುಗಿ.

ಬೆಶಿ-ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

2 thoughts on “ಹಯಗ್ರೀವ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×