ಹರೇರಾಮ
1993 ರಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿಲ್ಲಿ ಬಿಡುಗಡೆ ಆಗಿ,
ವಿಮರ್ಶಕರಿಂದ ಪ್ರಶಂಸೆ ಲಭ್ಯವಾಗಿ,
ಪತ್ರಿಕೇಲಿ ಪ್ರಚಾರ ಸಿಕ್ಕಿದ –
ಶೇಣಿ ಅಜ್ಜನ ದಿಗ್ಧರ್ಶನದ “ಪ್ರಥಮ ಹವ್ಯಕ ಯಕ್ಷಗಾನ ಧ್ವನಿ ಸುರುಳಿ” –
ನಾಲ್ಕು ಪ್ರಸಂಗ ಸೇರಿಂಡು ” MP3″ ರೂಪಲ್ಲಿ,
ಶ್ರೀ ಗುರುಗಳ ಅನುಗ್ರಹ ಆಶೀರ್ವಾದ ಪಡಕ್ಕಂಡು ಲೋಕಾರ್ಪಣೆ ಆಯಿದು.
ಸೂರಿಕುಮೇರಿ ಗೋವಿಂದಣ್ಣ, ನಯನಕುಮಾರ, ಪದ್ಯಾಣ, ಮಾಂಬಾಡಿ ಮೊದಲಾದ ಕಲಾವಿದರೆಲ್ಲ ಇದ್ದವು.
ಬಂಧುಗಳ ಸಹಕಾರ ಪ್ರೋತ್ಸಾಹ ಬಯಸುತ್ತೆ.
ಇತಿ / ಗೋವಿಂದಬಳ್ಳಮೂಲೆ, ವರ್ಣಧ್ವನಿ.
ಪ್ರತಿಗೊಕ್ಕೆ ಸಂಪರ್ಕಿಸಿ: facebook.com/govinda.ballamoole
Latest posts by ಗೋವಿಂದ ಮಾವ, ಬಳ್ಳಮೂಲೆ (see all)
- ಕೈಪ್ಪಂಗಳ ಈಶ್ವರೀ ಅಕ್ಕಂಗೆ ಸಹಾಯ ಬೇಕಾತು - June 26, 2014
- ಹವ್ಯಕ "ಯಕ್ಷ ಸಂಗಮ" – ಧ್ವನಿಮುದ್ರಿಕೆ - November 6, 2013
- ಗೇಸ೦ಡೇ ಟ್ರಬಲ್ - July 30, 2012
ಆನು ಒಮ್ದು ಪ್ರತಿ ತೆಕ್ಕೊಂಡಿದೆ. ಲಾಯ್ಕ ಇದ್ದು. ದಕ್ಷಾಧ್ವರದ ಶಿವ-ಸತೀದೇವಿ ಸಂವಾದ ಭಾರೀ ಲಾಯ್ಕ ಆಯಿದು.
ಒಳ್ಳೆ ಕೆಲಸ. ಬಳ್ಳಮೂಲೆ ಮಾವಂಗೂ, ಚೆ.ಭಾವಂಗೂ ಅಭಿನಂದನೆಗೊ.
ನಮಸ್ಕಾರ,
ಭಾರಿ ಒಳ್ಳೆ ಕೆಲಸ. ಓದಿ ಖುಷಿ ಆತು. ಇದರ ಇಂಟರ್ನೆಟ್ ಲಿ ತೆಕ್ಕೊಂಬಲೆ ಎಂತಾರು ವ್ಯವಸ್ಥೆ ಇದ್ದೋ ?. Online money transfer ಮಾಡಿ MP3 ಕಳುಸುವ ಹಾಂಗೆ ಇದ್ದರೆ ಎನಗೆ ತಿಳುಸುತ್ತಿರೋ .
ಧನ್ಯವಾದ,
ಮುರಳಿ
ಓಹೋ.. ಭಾರೀ ಕೊಶಿಯ ಸ೦ಗತಿ.ಕೇಸೆಟಿಲಿ ತಾಟಕಿಯ ಅರ್ಥ ಕೇಳಿತ್ತಿದ್ದೆ,ಭರ್ಜರಿ ರೈಸಿದ್ದು ನಮ್ಮ ಭಾಷೆಲಿ ಅರ್ಥಗಾರಿಕೆ. ಪ್ರತಿಯೊಬ್ಬರೂ ಪ್ರತಿ ತೆಕ್ಕೊ೦ಡು ಪ್ರೋತ್ಸಾಹಿಸೆಕ್ಕಾದ ಪ್ರಯತ್ನ ಇದು.ಅಭಿನ೦ದನೆಗೊ ಮಾವ.
ನಿಂಗಳ ಮಾತು ಎನಗೆ ತುಂಬಾ ಖುಷಿ ಆತು. ನಿಂಗಳ ಯಾವತ್ತೂ ಪ್ರೋತ್ಸಾ ಅಗತ್ಯ. ಧನ್ಯವಾದಂಗೊ.
ಹರೇ ರಾಮ. ಒಳ್ಳೆ ಕಾರ್ಯ
ಇಪ್ಪತ್ತು ವರ್ಷ ಹಿಂದೆ ಮಾಡಿದ ಕೇಸೆಟ್ ರೂಪಲ್ಲಿ ಇಪ್ಪ ಇದರ ಈಗ MP 3 ರೂಪಕ್ಕೆ ಭಾರೀ ತುಂಬಾ ಪ್ರಯತ್ನ ಪಟ್ಟು ನಮ್ಮ ಚೆನ್ನೈ ಅಣ್ಣ ಮಾಡಿ ಕೊಟ್ಟಿದವು. ಇದರ ಮೂಲ ಪ್ರತಿ ಕರಗಲೆ ಸುರುವಾಗಿದ್ದತ್ತು. ಆದರೆ ಯಾವ ಕೊರತ್ತೆ ಬಾರದ್ದ ಹಾಂಗೆ ಅವು ಇದರಲ್ಲಿ ಕೈ ಆಡಿಸಿದ್ದವು. ತಾಯರು ಮಾಡಿ ಕೊಟ್ಟಿದವು. ಅವಕ್ಕೆ ಆನು ಎಂದೂ ಕೃತಜ್ಞ. ಹಾಂಗೆ ಒಪ್ಪಣ್ಣಂಗೂ ಅನಂತಾನಂತ ಧನ್ಯವಾದಂಗೊ