Oppanna.com

ಅಂಬಟೆ ಸಾರು

ಬರದೋರು :   ವೇಣಿಯಕ್ಕ°    on   10/12/2013    1 ಒಪ್ಪಂಗೊ

ವೇಣಿಯಕ್ಕ°

ಅಂಬಟೆ ಸಾರು
ಬೇಕಪ್ಪ ಸಾಮಾನುಗೊ:

  • 8-10 ಅಂಬಟೆ
  • 1 ಚಮ್ಚೆ ಮೆಂತೆ ಹೊಡಿ(ಹೊರುದು ಹೊಡಿ ಮಾಡಿದ್ದು)
  • ಚಿಟಿಕೆ ಅರುಶಿನ ಹೊಡಿ
  • 2-3 ಹಸಿಮೆಣಸು
  • 2 ದೊಡ್ಡ ನಿಂಬೆ ಗಾತ್ರದ ಬೆಲ್ಲ
  • 4-5 ಬೆಳ್ಳುಳ್ಳಿ ಎಸಳು
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • 1/2 ಚಮ್ಚೆ ಜೀರಿಗೆ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಇಂಗು
  • 1-2 ಮುರುದ ಒಣಕ್ಕು ಮೆಣಸು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಅಂಬಟೆಯ ಲಾಯಿಕಲಿ ತೊಳದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣ-ಸಣ್ಣಕೆ ಕೆತ್ತಿ. ಹಸಿಮೆಣಸಿನ ಸಿಗುದು ಮಡುಗಿ.

ಒಂದು ಪಾತ್ರಲ್ಲಿ, ಕೊರದ ಅಂಬಟೆ, ಸಿಗುದು ಹಾಕಿದ ಹಸಿಮೆಣಸು, ಬೆಲ್ಲ, ಅರುಶಿನ ಹೊಡಿ, ಉಪ್ಪು ಸಾಧಾರಣ 5 ಕುಡ್ತೆ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಅದಕ್ಕೆ ಮೆಂತೆ ಹೊಡಿಯ ಹಾಕಿ ಸಾರಿನ ಕೊದುಶಿ, 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಳ್ಳುಳ್ಳಿಯ ಚೋಲಿ ತೆಗದು, ಜಜ್ಜಿ ಒಗ್ಗರಣೆ ಸಟ್ಟುಗಿಂಗೆ ಹಾಕಿ. ಇದಕ್ಕೆ ಎಣ್ಣೆ ಹಾಕಿ ಹೊರಿರಿ.
ಅದು ಚಿನ್ನದ ಬಣ್ಣಕ್ಕೆ ಬಪ್ಪಗ ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು ಹಾಕಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಾರಿಂಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ / ಹಾಂಗೆ ಕುಡಿವಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಅಂಬಟೆ ಸಾರು

  1. ವಾಹ್ ! ನೋಡುವಗಳೆ ಅಷ್ಟು ಲಾಯಕಿದ್ದು, ಇನ್ನು ಕುಡುದರೆ ಅದೆಷ್ಟು ಲಾಯಕಿಕ್ಕು. ಶುದ್ದಿ ಓದುವಗಳೆ ನಾಲಗೆಲಿ ನೀರು ಹರುದತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×