Oppanna.com

ಅಂಬಟೆ ಗೊಜ್ಜಿ

ಬರದೋರು :   ವೇಣಿಯಕ್ಕ°    on   24/12/2013    1 ಒಪ್ಪಂಗೊ

ವೇಣಿಯಕ್ಕ°

ಅಂಬಟೆ ಗೊಜ್ಜಿ
ಬೇಕಪ್ಪ ಸಾಮಾನುಗೊ:

  • 6 ಬೆಳದ/ಹಣ್ಣಾದ ಅಂಬಟೆ
  • 1-2 ಹಸಿಮೆಣಸು
  • 2 ನಿಂಬೆ ಗಾತ್ರದ ಬೆಲ್ಲ
  • 1 ಸಣ್ಣ ನೀರುಳ್ಳಿ(ಬೇಕಾದರೆ ಮಾತ್ರ)
  • 4-5 ಎಳೆ ಕೊತ್ತಂಬರಿ ಸೊಪ್ಪು
  • 5-6 ಬೇನ್ಸೊಪ್ಪು
  • 1/2 ಚಮ್ಚೆ ಸಾಸಮೆ
  • 1/4 ಚಮ್ಚೆ ಜೀರಿಗೆ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಮುರುದ ಒಣಕ್ಕು ಮೆಣಸು
  • 1 ಚಮ್ಚೆ ಎಣ್ಣೆ
  • 1 ಚಮ್ಚೆ ತುಪ್ಪ

ಮಾಡುವ ಕ್ರಮ:
ಅಂಬಟೆಯ ಲಾಯಿಕಲಿ ತೊಳದು ರೆಜ್ಜ ಉಪ್ಪು ನೀರು ಹಾಕಿ, ಕುಕ್ಕರಿಲ್ಲಿ ಬೇಶಿ.

ಕುಕ್ಕರಿನ ಪ್ರೆಶರ್ ಹೋದ ಮೇಲೆ, ಅದರ ಲಾಯಿಕಲಿ ಪುರುಂಚಿ. (ಪುರುಂಚಿದ ಚೋಲಿಯ ಬೇಕಾದರೆ ಮಿಕ್ಸಿಗೆ ಹಾಕಿ ತಿರುಗುಸುಲೆ ಅಕ್ಕು.)
ಬೆಲ್ಲವ ಕೆರಸಿ ಹಾಕಿ, ಉಪ್ಪು, ರೆಜ್ಜ/ಬೇಕಪ್ಪಸ್ಟು ನೀರುದೆ ಹಾಕಿ ತೊಳಸಿ.

ನೀರುಳ್ಳಿಯ ಚೋಲಿ ತೆಗದು, ಸಣ್ಣಕೆ ಕೊಚ್ಚಿ. ಕೊತ್ತಂಬರಿ ಸೊಪ್ಪನ್ನೂ ಸಣ್ಣಕೆ ಕೊಚ್ಚಿ. ಹಸಿಮೆಣಸಿನ ಸಿಗುದು ಹಾಕಿ ಅಥವಾ ಗೊಜ್ಜಿಗೆ ನುರಿರಿ.

ಒಂದು ಬಾಣಲೆಲಿ ತುಪ್ಪ ಹಾಕಿ ಬೆಶಿ ಮಾಡಿ, ಕೊಚ್ಚಿದ ನೀರುಳ್ಳಿ ಹಾಕಿ ಸಣ್ಣ ಕಿಚ್ಚಿಲ್ಲಿ ನೀರುಳ್ಳಿ ಬೇವನ್ನಾರ ಬಾಡ್ಸಿ.
ಇದರ ಗೊಜ್ಜಿಗೆ ಹಾಕಿ ತೊಳಸಿ. ಕೊಚ್ಚಿದ ಕೊತ್ತಂಬರಿ ಸೊಪ್ಪನ್ನೂ ಹಾಕಿ ತೊಳಸಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಅಂಬಟೆ ಗೊಜ್ಜಿ

  1. ಎರಡು ಮುಷ್ಟಿ ಅಶನ ಹೆಚ್ಚು ಉಂಡತ್ತು..ಗೊಜ್ಜಿಂದಾಗಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×