ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು!
ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು,ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!!
ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು.ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು.
’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’.
ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ!
ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°.
ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ.
ಆತೋ?ಏ°?
adu heengadikku:- nayige kaalu bene aada karana adara vaidyarallige karakkondu hopadu; entha helthi?
papa aa aunty adara maga aaru heli confuse aagi naayiya hegalili koorsiddaadikku….. alladre naayiya chainu maneli baaki aadikku…
ಕಂಡದರ ಕಂಡ ಹಾಂಗೆ ನಂಬೆಕ್ಕು ಹೇಳಿ ಎಂತ ಇಲ್ಲೆ ಅನ್ನೆ. ನಾಯಿಗೆ ಸೌಖ್ಯ ಇಲ್ಲದ್ದ ಕಾರಣ ಚೆಚ್ಚೆಕ್ಕಾಗಿ ಬಂತೋ ಏನೋ,ಅಲ್ಲದೋ, ??
ಎಂಗಳ ಚುಭ್ಬ ಹೇಳುಗು ಶ್ರೀಮಂತರ ಮನೆಲಿ ನಾಯಿಯಾಗಿ ಹುಟ್ಟಿರೆ ಸುಖವಾಗಿಪ್ಪಲಾವುತಿತ್ತು ಹೇಳಿ.ಸತ್ಯ.
ಹೀಂಗೆ ಮಾಡಿದರೆ ಎಂತ ಮಾಡುದು!!!!!!!!!!!
ನಾಯಿ ಕಳುದ ಜನ್ಮಲ್ಲಿ ಪುಣ್ಯ ಮಾಡಿಕು???
ಆ ಮಾಣಿಗೆ ಯೋಗ ಎಲ್ಲೆ!!!!
ayyo ningogella samshayave aa elakkondu hopadu nayi kunhi(hodadu badudu madudu adakke mantra)hegalilli kuddade maga no magalo samshayave beda.Hegalilli kuddadara buddiye eddavarinda edarinda hechu nirikshisire tappakkallado?
ಆ ಅತ್ತೆ ನಾಯಿಯ ತೆಚ್ಚಿಗೊಂಡದಕ್ಕೆ ನಿಂಗೊ ಇಷ್ಟೆಲ್ಲ ರಂಪಾಟ ಮಾಡ್ತಿರಲ್ಲದೋ?
ಚೆ ಚೆ, ಮತ್ತೆಂತ – ನಾಯಿ ಅತ್ತೆಯ ನೇಚೆಕ್ಕಾತೋ? ಪಾಪ! ಪಡ್ಚ ಅಕ್ಕು.
ಎಂತರಾ ಮಾತಾಡುದೋ ಏನೋ! 😉
ಹೀಂಗೂ ಇದ್ದಲ್ಲದ!!!
ಮಾಣಿಂದ ಬೆಳಿ ನಾಯಿ ಇದ್ದಲ್ಲದ. ಎಲ್ಲಿಯಾರೂ ಮಣ್ಣು ಆದರೆ ಪಾಪ ಎಂತ ಮಾಡುವದು!!!
ಮಾಣಿ ಬೇರೆಯವರ ಮೈ ಮೇಗಂಗೆ ಹಾರನ್ನೆ. ನಾಯಿಯ ನಂಬಲೆ ಎಡಿಯ. ಕೆಳ ಬಿಟ್ಟರೆ ಆರಾರ ಮೈಗೆ ಹಾರಲೂ ಸಾಕು, ಕಚ್ಚಲೂ ಸಾಕು.
ಒಳ್ಳೆದೇ ಆತು ಬಿಡಿ.
he he he…
ಶರ್ಮಪ್ಪಚ್ಚಿ ಹೇಳುದುದೇ ಸತ್ಯವೇ !!!
ohhhhhhhhhhhh !!!!!!!!!!!!!!!!!!!!!!!!
ಎಂತಾತು ಸುವರ್ಣಿನಿ ಅಕ್ಕಾ??ಕನ್ಯಾನ ಪೇಟೇಲಿ ಮತ್ತು ಹೀಂಗೆ ಆರಾರದರೂ ಕಾಂಬಳೆ ಸಿಕ್ಕಿದ್ದವಾ?
🙂 ಕನ್ಯಾನಲ್ಲಿ …ಉಮ್ಮ ಗೊಂತಿಲ್ಲೆ !!! ಆದರೆ ಹೀಂಗಿಪ್ಪ ಸನ್ನಿವೇಶ ಸುಮಾರು ಸರ್ತಿ ನೋಡಿದ್ದೆ, ನಮ್ಮ ರಾಜಧಾನಿಲಿಯೇ !!
ನಾಯಿಜನ್ಮ ದೊಡ್ಡದು!
ಚಿತ್ರಲ್ಲಿ ಕಾ೦ಬ ಅಮ್ಮ೦ಗೆ ಮಾಣಿಯ ಎತ್ತಿಗೊ೦ಡು ಹೋಪಲೆ ನಾಚಿಕೆಯೋ? ಅಥವಾ ನಾಯಿಯ ಎತ್ತಿರೆ ಹೆಚ್ಚಿಗೆ ಮರ್ಯಾದೆ ಹೇಳುವ ಭಾವನೆಯೋ?
ಅ೦ತೂ ತು೦ಬಾ ಭಾಗ್ಯದ ನಾಯಿ!!!! ಮಾರ್ಗಲ್ಲಿಯೇ ಹೀ೦ಗಿದ್ದರೆ ಇನ್ನು ಮನೆಲಿ ಹೇ೦ಗಿಪ್ಪ ಉಪಚಾರ ಇಕ್ಕು?
ಮನೇಲಿ ಉದಿಯಪ್ಪಗ ಬೆಡ್ ಕಾಪಿ ಆಗಿ ಶಾಲಗೆ ಒಂದರಿ ಹೋಗಿ ಕೂಡ್ಲೇ ಬಪ್ಪದು ನಿತ್ಯದ ಡ್ಯೂಟಿ.ಅಡ
ಕಾಲಸ್ಯ ಕುಟಿಲಾಗತಿ: ಹೇಳಿ ಬಟ್ಟ ಮಾವ ಹೇಳಿದ್ದು ನೆ೦ಪಾವ್ತು ! 😀
ಖಂಡಿತಾ!