- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಕುಂಬಳಕಾಯಿ ಕೊದಿಲು(ಸಾಂಬಾರು)
ಬೇಕಪ್ಪ ಸಾಮಾನುಗೊ:
- 1/2 ಸಾಧಾರಣ ಗಾತ್ರದ ಕುಂಬಳಕಾಯಿ
- 1/2-3/4 ಕಪ್(ಕುಡ್ತೆ) ಕಾಯಿ ತುರಿ
- ಸಣ್ಣ ತುಂಡು ಅರುಶಿನ ಕೊಂಬು ಅಥವಾ 1/8 ಚಮ್ಚೆ ಅರುಶಿನ ಹೊಡಿ
- ಚಿಟಿಕೆ ಮೆಣಸಿನ ಹೊಡಿ
- ದ್ರಾಕ್ಷೆ ಗಾತ್ರದ ಬೆಲ್ಲ
- 4-5 ಒಣಕ್ಕು ಮೆಣಸು
- 3/4 ಚಮ್ಚೆ ಕೊತ್ತಂಬರಿ
- 1/4 ಚಮ್ಚೆ ಜೀರಿಗೆ
- 12-15 ಉದ್ದಿನ ಬೇಳೆ
- 6-8 ಮೆಂತೆ
- ಸಣ್ಣ ದ್ರಾಕ್ಷೆ ಗಾತ್ರದ ಹುಳಿ
- ಚಿಟಿಕೆ ಇಂಗು
- ರುಚಿಗೆ ತಕ್ಕಸ್ಟು ಉಪ್ಪು
- 1/2 ಕಪ್(ಕುಡ್ತೆ) ಬೇಶಿದ ತೊಗರೀ ಬೇಳೆ
- 12-15 ಬೇನ್ಸೊಪ್ಪು (8-10 ಮಸಾಲೆಗೆ + ಒಳುದ್ದು ಒಗ್ಗರಣೆಗೆ)
- 1 ಚಮ್ಚೆ ಸಾಸಮೆ(1/4 ಚಮ್ಚೆ ಮಸಾಲಗೆ + ಒಳುದ್ದು ಒಗ್ಗರಣೆಗೆ)
- 2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕುಂಬಳಕಾಯಿಯ ಹೆರಾಣ ಚೋಲಿ, ಒಳಾಣ ತಿರುಳು, ಬಿತ್ತು ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.
ಕುಂಬಳಕಾಯಿ ಬಾಗವ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಬಾಗ ಬೆಂದಪ್ಪಗ, ಬೇಶಿದ ತೊಗರಿಬೇಳೆಯ ಹಾಕಿ ತೊಳಸಿ.
ಬಾಣಲೆಲಿ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, 1/4 ಚಮ್ಚೆ ಸಾಸಮೆ, ಮೆಂತೆ, ಉದ್ದಿನ ಬೇಳೆ, ಅರುಶಿನ ಕೊಂಬು(ಅರುಶಿನ ಹೊಡಿ ಆದರೆ ಲಾಸ್ಟಿಂಗೆ ಇಂಗಿನ ಒಟ್ಟಿಂಗೆ ಹಾಕಿ), 1 ಸಕ್ಕಣ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಅದು ಪರಿಮ್ಮಳ ಬಪ್ಪಗ ಇಂಗು, ಬೇನ್ಸೊಪ್ಪು(8-10 ಎಲೆ) ಹಾಕಿ 1 ನಿಮಿಷ ಹೊರಿರಿ.
ತೆಂಗಿನಕಾಯಿ ತುರಿ, ಹೊರುದ ಮಸಾಲೆ, ಹುಳಿಯ ಮಿಕ್ಸಿಗೆ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪು ಕಡದು, ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಕೊದಿಲಿಂಗೆ ಹಾಕಿ ತೊಳಸಿ.
ಇದು ರೊಟ್ಟಿ, ದೋಸೆ, ಚಪಾತಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಬೆಂಧಿ ಮಾಡಿ ಉಂಡಾತು. ಎಂಗಳಲ್ಲಿ ಮಿಕ್ಷಿ/ಗ್ರೈಂಡರ್ ಇಲ್ಲೆ, ಕಲ್ಲಿಲ್ಲೇ ಕಡದ್ದು. ಬಾರಿ ಫಸ್ಟ್ ಅಯಿದಪ್ಪ..
ಲಾಯಿಕ ಕಾಣ್ತು… ಆನು ಇನ್ನಾಣ ಸರ್ತಿ ಮಾಡುವಾಗ ಮಸಾಲೆಗೆ ಬೇವಿನ ಸೊಪ್ಪುಮತ್ತು ಸಾಸಮೆ ಸೇರ್ಸೆಕ್ಕು…..