- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಕುಂಬಳಕಾಯಿ ತಿರುಳಿನ ಸಾಸಮೆ
ಬೇಕಪ್ಪ ಸಾಮಾನುಗೊ:
- 1 ಕಪ್(ಕುಡ್ತೆ) ಕುಂಬಳಕಾಯಿ ತಿರುಳು
- 1 ಕಪ್(ಕುಡ್ತೆ) ಕಾಯಿ ತುರಿ
- 1/4 ಚಮ್ಚೆ ಮೆಣಸಿನ ಹೊಡಿ
- ದೊಡ್ಡ ನಿಂಬೆ ಗಾತ್ರದ ಬೆಲ್ಲ
- 1 ಹಸಿಮೆಣಸು ಅಥವಾ ಒಣಕ್ಕು ಮೆಣಸು
- 1/2 ಕಪ್(ಕುಡ್ತೆ) ಮಜ್ಜಿಗೆ
- ರುಚಿಗೆ ತಕ್ಕಸ್ಟು ಉಪ್ಪು
- 4-5 ಬೇನ್ಸೊಪ್ಪು
- 3/4 ಚಮ್ಚೆ ಸಾಸಮೆ(1/8 ಚಮ್ಚೆ ಕಡವಲೆ + ಒಳುದ್ದು ಒಗ್ಗರಣೆಗೆ)
- 1-2 ಮುರುದ ಒಣಕ್ಕು ಮೆಣಸು
- 1/2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಕುಂಬಳಕಾಯಿ ತಿರುಳಿಂದ ಬಿತ್ತಿನ ತೆಗದು ಲಾಯಿಕಲಿ ತೊಳದು ಮಡುಗಿ.
ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹದಾಕೆ ತುಂಡು ಮಾಡಿ.
ಕುಂಬಳಕಾಯಿ ತಿರುಳಿನ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ತೆಂಗಿನಕಾಯಿ ತುರಿ, ಹಸಿಮೆಣಸು ಅಥವಾ ಒಣಕ್ಕು ಮೆಣಸು, 1/8 ಚಮ್ಚೆ ಸಾಸಮೆಯ ಮಿಕ್ಸಿಗೆ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪು ಕಡದು, ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ. ಇದಕ್ಕೆ ಮಜ್ಜಿಗೆದೆ ಹಾಕಿ ತೊಳಸಿ.(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಸಾಸಮೆಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಮನೆಲಿ ಒಂದು ಕುಂಬಳ ಕಾಯಿ ತಂದು ಮಡುಗಿದ್ದೆ… ಸಾಸಮೆ ಮಾಡ್ಳೆ ಹೇಳೆಕ್ಕು… ಎನಗೇ ಮಾಡ್ಳಕ್ಕು ಹೇಳಿರೆ ಪುರುಸೊತ್ತಿಲ್ಲೆ… ತಿಂಬಲೆ ಮಾಂತ್ರ ಪುರ್ಸೊತ್ತು…. 🙂