Oppanna.com

ಕುಂಬಳಕಾಯಿ ಬೋಳುಕೊದಿಲು

ಬರದೋರು :   ವೇಣಿಯಕ್ಕ°    on   18/02/2014    0 ಒಪ್ಪಂಗೊ

ವೇಣಿಯಕ್ಕ°

ಕುಂಬಳಕಾಯಿ ಬೋಳುಕೊದಿಲು

ಬೇಕಪ್ಪ ಸಾಮಾನುಗೊ:

  • 1/4 ಸಾಧಾರಣ ಗಾತ್ರದ ಕುಂಬಳಕಾಯಿ
  • 1-2 ಹಸಿಮೆಣಸು
  • ಚಿಟಿಕೆ ಅರುಶಿನ ಹೊಡಿ
  • ಸಣ್ಣ ನಿಂಬೆ ಗಾತ್ರದ ಬೆಲ್ಲ
  • ಚಿಟಿಕೆ ಹುಳಿ
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಮುರುದ ಒಣಕ್ಕು ಮೆಣಸು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕುಂಬಳಕಾಯಿಯ ಹೆರಾಣ ಚೋಲಿ, ಒಳಾಣ ತಿರುಳು, ಬಿತ್ತು ಎಲ್ಲ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಹಸಿಮೆಣಸಿನ ಸಿಗುದು ಮಡುಗಿ.

ಕುಂಬಳಕಾಯಿ ಬಾಗವ ಒಂದು ಪಾತ್ರಕ್ಕೆ/ಪ್ರೆಶರ್ ಕುಕ್ಕರಿಲ್ಲಿ ಹಾಕಿ, ಉಪ್ಪು, ಬೆಲ್ಲ, ಅರುಶಿನ ಹೊಡಿ, ಹುಳಿ ನೀರು/ಹೊಡಿ , ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.(ಪ್ರೆಶರ್ ಕುಕ್ಕರಿಲ್ಲಿ ಆದರೆ 1-2 ಸೀಟಿ ಸಾಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಬೋಳುಕೊದಿಲಿಂಗೆ ಹಾಕಿ ತೊಳಸಿ.
ಇದು  ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×