- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬದನೆಕಾಯಿ ಪೋಡಿ
ಬೇಕಪ್ಪ ಸಾಮಾನುಗೊ:
- 2 ಸಾಧಾರಣ ಗಾತ್ರದ ಬದನೆಕಾಯಿ
- 1.5-2 ಕಪ್(ಕುಡ್ತೆ) ಕಡ್ಲೆ ಹೊಡಿ
- 1/4 ಕಪ್(ಕುಡ್ತೆ) ಅಕ್ಕಿ ಹೊಡಿ
- 1/2 ಚಮ್ಚೆ ಗರಂ ಮಸಾಲೆ
- 1.5-2 ಚಮ್ಚೆ ಮೆಣಸಿನ ಹೊಡಿ
- ದೊಡ್ಡ ಚಿಟಿಕೆ ಇಂಗು
- ಚಿಟಿಕೆ ಅಡುಗೆ ಸೋಡ
- ರುಚಿಗೆ ತಕ್ಕಸ್ಟು ಉಪ್ಪು
- 1/4 ಚಮ್ಚೆ ಜೀರಿಗೆ
- 15-20 ಓಮ
- ಎಣ್ಣೆ ಹೊರಿವಲೆ
ಮಾಡುವ ಕ್ರಮ:
ಒಂದು ಪಾತ್ರಲ್ಲಿ ರೆಜ್ಜ ಹುಳಿ ಮಜ್ಜಿಗೆ, 4 ಕುಡ್ತೆ ನೀರು, ರೆಜ್ಜ ಉಪ್ಪು ಹಾಕಿ ಮಡುಗಿ. ಬದನೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಉರುಟಿಂಗೆ ಕೊರದು, ಒಂದು 5 ನಿಮಿಷ ಮಜ್ಜಿಗೆ ನೀರಿಲ್ಲಿ ಹಾಕಿ ತೆಗದು ಮಡುಗಿ.
ಒಂದು ಪಾತ್ರಲ್ಲಿ ಅಕ್ಕಿ ಹೊಡಿ, ಕಡ್ಲೆ ಹೊಡಿ, ಅಡುಗೆ ಸೋಡ, ಗರಂ ಮಸಾಲೆ, ಇಂಗು, ಮೆಣಸಿನ ಹೊಡಿ, ಉಪ್ಪು, ಜೀರಿಗೆ, ಓಮವ ಹಾಕಿ, ಅದಕ್ಕೆ ಬೇಕಾದಸ್ಟು ನೀರುದೆ ಹಾಕಿ ಲಾಯಿಕಲಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಸ್ಟು ಹದ ಇರಲಿ.
ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ.
ಅದು ಬೆಶಿ ಆದಪ್ಪಗ, ಬದನೆಕಾಯಿಯ ಹಿಟ್ಟಿಲ್ಲಿ ಅದ್ದಿ ಎಣ್ಣೆಗೆ ಹಾಕಿ ಬೇಶಿ(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.)
ಬೆಶಿ ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಪೋಡಿ ನೋಡಿರೆ, ಹಿಟ್ಟು ರಜಾ ನೀರಾದ ಹಾಂಗೆ ಇದ್ದನ್ನೇ…. ಬಾಯಿಲ್ಲಿ ನೀರ್ ಬಂದೆ ಬಿಟ್ಟತ್ತು.. yummy