- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬದನೆಕಾಯಿ ಖಾರ ಗೊಜ್ಜಿ
ಬೇಕಪ್ಪ ಸಾಮಾನುಗೊ:
- 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು)
- 2-4 ಹಸಿಮೆಣಸು ಅಥವಾ ಗಾಂಧಾರಿ ಮೆಣಸು
- 1/2 ಸಾಧಾರಣ ಗಾತ್ರದ ನೀರುಳ್ಳಿ
- ದ್ರಾಕ್ಷೆ ಗಾತ್ರದ ಹುಳಿ
- ರುಚಿಗೆ ತಕ್ಕಸ್ಟು ಉಪ್ಪು
- ಚಿಟಿಕೆ ಇಂಗು
- 5-6 ಬೇನ್ಸೊಪ್ಪು
- 1/2 ಚಮ್ಚೆ ಸಾಸಮೆ
- 2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬದನೆಕಾಯಿಯ ಹೆರಾಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಪೀಶಕತ್ತಿ/ಫೊರ್ಕ್ ಲ್ಲಿ ಕುತ್ತಿ, ಅದರ ಕೆಂಡಲ್ಲಿ/ ಗ್ಯಾಸ್ ಒಲೆಲಿ/ ಮೈಕ್ರೋವೇವ್/ ಓವನ್ ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ.
ಹುಳಿಗೆ ರೆಜ್ಜ ನೀರು ಹಾಕಿ, ಪುರುಂಚಿ ಕರೆಲಿ ಮಡುಗಿ. ನೀರುಳ್ಳಿಯ ಸಣ್ಣಕೆ ಕೊಚ್ಚಿ ಮಡುಗಿ.
ಬದನೆಕಾಯಿಯ ಹೆರಾಣ ಚೋಲಿ ತೆಗದು, ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ.
ಇದರ ಒಂದು ಪಾತ್ರಕ್ಕೆ ಹಾಕಿ, ಹುಳಿ ನೀರು, ಉಪ್ಪು, ಕೊಚ್ಚಿ ಮಡುಗಿದ ನೀರುಳ್ಳಿ, ಬೇಕಾದಸ್ಟು ನೀರು ಹಾಕಿ ತೊಳಸಿ. ಹಸಿಮೆಣಸಿನ ಲಾಯಿಕಲಿ ನುರಿರಿ. (ನೀರುಳ್ಳಿಯ ಬೇಕಾದರೆ ತುಪ್ಪಲ್ಲಿ ಹೊರುದುದೆ ಹಾಕುಲಕ್ಕು.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಗೊಜ್ಜಿಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಇದೇ ಬದನೆ ತಿರುಳಿಂಗೆ ತೆಂಗಿನ ಕಾಯಿ-ಸಾಸಿವೆ-ಹಸಿಮೆಣಸು ಅರೆದು ಮಜ್ಜಿಗೆ/ಮೊಸರು ಹಾಕಿದ ಪದಾರ್ಥವೂ ಲಾಯ್ಕಾವುತ್ತು. ಗೊಜ್ಜಿಂದು ಒಂದು ರುಚಿ – ಸಾಸಮೆದುದು ಇನ್ನೊಂದು ರುಚಿ. ಎರಡುದೆ ಲಾಯ್ಕವೇ.
ಓ,ನಮ್ಮ ಫೇವರೆಟ್ ಅಯಿಟಮ್ಮು..ಕುಶ್ ಹುವಾ.
ಮಾಡಿ ನೋಡಿ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ..ಃ)
ಅಪ್ಪು ಮೆಣಸು ನುರಿವದರ ಹೇಳ್ಳೆ ಬಿಟ್ಟು ಹೋಯಿದು. ಈಗ ಸರಿ ಮಾಡಿದ್ದೆ. ಹೇಳಿದ್ದಕ್ಕೆ ಧನ್ಯವಾದ.
ಒಪ್ಪ ರುಚಿ….
ಆದರೆ ತೆಗೆದು ಮಡುಗಿದ ಹಸಿ ಮೇಣಸು ಸುರುವಿಂಗೆ ಅಲ್ಲೇ ಬಾಕಿ ಆತನ್ನೆ ವೇಣಿಯಕ್ಕ 🙂
ಮತ್ತೆ ಆನದರ ಕೈಲಿ ನುರಿದು ಹಾಕಿ ತೊಳಸಿದೆ…. ಗಮ್ಮ ಆತು 🙂