- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬದನೆಕಾಯಿ ಮೊಸರು ಗೊಜ್ಜಿ
ಬೇಕಪ್ಪ ಸಾಮಾನುಗೊ:
- 2 ಸಾಧಾರಣ ಗಾತ್ರದ ಬದನೆಕಾಯಿ(ಗುಳ್ಳ ಆದರೆ ಒಳ್ಳೆದು)
- 2-4 ಹಸಿಮೆಣಸು
- 2-3 ಎಳೆ ಕೊತ್ತಂಬರಿ ಸೊಪ್ಪು
- 1.5-2 ಕಪ್(ಕುಡ್ತೆ) ಮೊಸರು
- 2-3 ಚಮ್ಚೆ ಕಾಯಿ ಸುಳಿ (ಬೇಕಾದರೆ ಮಾತ್ರ)
- ರುಚಿಗೆ ತಕ್ಕಸ್ಟು ಉಪ್ಪು
- 1 ಚಮ್ಚೆ ಸಾಸಮೆ
- 1/2 ಚಮ್ಚೆ ಜೀರಿಗೆ
- 3-4 ಬಾಳಕ್ಕು ಮೆಣಸು(ಬೇಕಾದರೆ ಮಾತ್ರ)
- 5-6 ಬೇನ್ಸೊಪ್ಪು
- ದೊಡ್ಡ ಚಿಟಿಕೆ ಇಂಗು
- 2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬದನೆಕಾಯಿಯ ಹೆರಾಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಪೀಶಕತ್ತಿ/ಫೊರ್ಕ್ ಲ್ಲಿ ಕುತ್ತಿ, ಅದರ ಕೆಂಡಲ್ಲಿ/ ಗ್ಯಾಸ್ ಒಲೆಲಿ/ ಮೈಕ್ರೋವೇವ್/ ಓವನ್ ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ.
ಬದನೆಕಾಯಿಯ ಹೆರಾಣ ಚೋಲಿ ತೆಗದು, ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ.
ಕಾಯಿ ಸುಳಿಯ ಮಿಕ್ಸಿಗೆ ಹಾಕಿ, ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ ಮಡುಗಿ.
ಕೊಚ್ಚಿದ ಬದನೆಕಾಯಿ, ಕೊಜಕ್ಕಾದ ಕಾಯಿ, ಕೊತ್ತಂಬರಿ ಸೊಪ್ಪು, ಮೊಸರು, ಉಪ್ಪು, ಬೇಕಪ್ಪಸ್ಟು ನೀರಿನ ಒಂದು ಪಾತ್ರಕ್ಕೆ ಹಾಕಿ ತೊಳಸಿ. (ಮೊಸರು ಹುಳಿ ಇದ್ದರೆ ಬೇಕಪ್ಪಸ್ಟು ಹಾಲು ಹಾಕುಲಕ್ಕು.) ಹಸಿಮೆಣಸಿನ ಲಾಯಿಕಲಿ ನುರಿರಿ.
ಒಗ್ಗರಣೆ ಸಟ್ಟುಗಿಲ್ಲಿ ಬಾಳಕ್ಕು ಮೆಣಸು, ಎಣ್ಣೆ ಹಾಕಿ ಒಂದೆರಡು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಅದು ಚಿನ್ನದ ಬಣ್ಣಕ್ಕೆ ಬಪ್ಪಗ, ಸಾಸಮೆ, ಜೀರಕ್ಕಿ ಹಾಕಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.