- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬದನೆಕಾಯಿ ಸೀವು ಗೊಜ್ಜಿ
ಬೇಕಪ್ಪ ಸಾಮಾನುಗೊ:
- 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು)
- 1-2 ಹಸಿಮೆಣಸು
- ದೊಡ್ದ ನಿಂಬೆ ಗಾತ್ರದ ಬೆಲ್ಲ
- ದ್ರಾಕ್ಷೆ ಗಾತ್ರದ ಹುಳಿ
- ರುಚಿಗೆ ತಕ್ಕಸ್ಟು ಉಪ್ಪು
- ಚಿಟಿಕೆ ಇಂಗು
- 5-6 ಬೇನ್ಸೊಪ್ಪು
- 1/2 ಚಮ್ಚೆ ಸಾಸಮೆ
- 2 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬದನೆಕಾಯಿಯ ಹೆರಾಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಪೀಶಕತ್ತಿ/ಫೊರ್ಕ್ ಲ್ಲಿ ಕುತ್ತಿ, ಅದರ ಕೆಂಡಲ್ಲಿ/ ಗ್ಯಾಸ್ ಒಲೆಲಿ/ ಮೈಕ್ರೋವೇವ್/ ಓವನ್ ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ.
ಹುಳಿಗೆ ರೆಜ್ಜ ನೀರು ಹಾಕಿ, ಪುರುಂಚಿ ಕರೆಲಿ ಮಡುಗಿ. ಬೆಲ್ಲವ ಕೆರಸಿ ಮಡುಗಿ.
ಬದನೆಕಾಯಿಯ ಹೆರಾಣ ಚೋಲಿ ತೆಗದು, ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ.
ಇದರ ಒಂದು ಪಾತ್ರಕ್ಕೆ ಹಾಕಿ, ಹುಳಿ ನೀರು, ಉಪ್ಪು, ಕೆರಸಿ ಮಡುಗಿದ ಬೆಲ್ಲ, ಬೇಕಾದಸ್ಟು ನೀರು ಹಾಕಿ ತೊಳಸಿ. ಹಸಿಮೆಣಸಿನ ಲಾಯಿಕಲಿ ನುರಿರಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಗೊಜ್ಜಿಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಎನಗೆ ಇಷ್ಟದ ಗೊಜ್ಜು ಇದು. ಆಹ್ಹ. ಹೀಂಗೆ ಮಾಡಿರೆ ಲಾಯಿಕಾವುತ್ತು .