- " ಜೀವಸೆಲೆ " - June 10, 2014
- ಜಯನಮೋ - May 18, 2014
- ಓಟುಬಂತದಓಟು! - March 31, 2014
ಬಿಗನಾಶಿ ಮಾಣಿ
” ಏ ಮಾಣಿ ಬಾ ಇತ್ತೆ
ಎಂತಾಕೆ ಬೊಡುಶುತ್ತೆ
ಓ ಇಲ್ಲಿ ತಳಿಯದ್ದೆ ಕೂರು |
ಎಷ್ಟು ಹೇಳಿರು ನಿನಗೆ
ಭಾಷೆ ಎಂಬುದೆ ಇಲ್ಲೆ
ಎನಗೆಡಿಯ ಬೈಗು ಆರಾರು ” |೧|
” ನೀ ಬರೀ ಬಿಗನಾಶಿ
ಬಿಂಗಿ ಪೋಕಿರಿ ಪಿರ್ಕಿ
ನಿನಗೆಂತ ಕೆಮಿಗೆಂಡೆ ಬೆಶಿಮಾಡೆಕೋ ? |
ವರ್ಷ ಹನ್ನೆರಡಾತು
ಬೆನ್ನು ಬಗ್ಗುಸಲೆಡಿಯ
ಸಮಕ್ಕೆ ಬಾರುಸಿ ಕುಂಡೆ ಚೋಲಿ ತೆಗೆಕೋ ” ?|೨|
ದಿನ ನಿತ್ಯ ಇದೆ ರಾಗ
ಆಚ ಮನೆ ಚುಬ್ಬಕ್ಕ
ಒಂದು ಘಳಿಗೆಯು ಮುಚ್ಚ ಅದರ ಬಾಯಿ |
ಇಷ್ಟು ದಿನ ಕೊಂಗಾಟ
ಮಾಡಿ ಸಾಂಕಿದ ಮಗನ
ಆಳುಸಲೆ ಎಡಿತ್ತಿಲ್ಲೆ , ಬಾಯಿ ಬೊಂಬಾಯಿ |೩|
ಮಾಣಿಯೋ ಬರಿ ಲೂಟಿ
ನಿಂದಲ್ಲಿ ನಿಲ್ಲ ಅವ°
ಮನೆಂದ ಹೆರವೇ ಊರ ಮೇಗೆ ತಿರುಗಾಟ |
ಗೆಡುವ ಬಗ್ಗುಸಲೆಡಿಗು
ಮರವ ಬಗ್ಗುಸಲೆಡಿಗೋ
ಹಾಳು ಮಾಡಿತ್ತಬ್ಬೆ , ಅದರ ಕೊಂಗಾಟ |೪|
ಮನೆಂದ ಶಾಲಗೆ ಹೇಳಿ
ಹೋಪದೆಲ್ಲಿಗೊ ಏನೋ !
ಒಂದು ದಿನ ಇತ್ತಿದ್ದ ಮರದ ಕೊಡಿಲಿ |
ಮತ್ತೊಂದು ದಿನ ಅದಾ
ಬಾಯಿಂದ ಹೊಗೆ ಹೋವ್ತು
ಆಂಜಿದಾಂಗಾತೆನಗೆ ಬ್ಯಾರಿ ಅಂಗಡಿಲಿ |೫|
ಕತ್ತಲಪ್ಪಗ ಜೆತಗೆ
ಆರಾರೋ ಇರುತ್ತವಡ
ಸಂಕದಾ ಚಿಟ್ಟೇಲಿ ಕೂರುತ್ತನಾಡ |
ಮೇಗಾಣ ಅಂಗಡಿಲಿ
ಎಂತೆಂತೋ ತಿಂತಾಡ
ಡೋಲು ಪೇಂಟಿನ ಹಾಕಿ ತಿರುಗುತ್ತನಾಡ |೬|
ಈಗ ಮಾಣಿಯೆ ಮನಗೆ
ಬಪ್ಪಲಿಲ್ಲೆಡ ನಿತ್ಯ
ಬಾರದ್ದೆ ಅದ ಎಷ್ಟೋ ದಿನವೇ ಕಳುತ್ತು |
ಹಿಂಗೆಲ್ಲ ಹೇಳಿಂಡು
ಚುಬ್ಬಕ್ಕ ಬೈಂದಾಗ
ದಿನ ನಿತ್ಯ ಕಣ್ಣೀರು ಹಾಕಿ ಕೂಗುತ್ತು |೭|
ಮಾಣಿ ಹೇಂಗೇ ಇರಲಿ
ಹೆತ್ತಬ್ಬೆ ಅಲ್ಲದೋ
ಆರಾರು ಕಂಡಿದಿರೊ ಅದರ ಮಗನ ?|
ಅಲ್ಲೆಲ್ಲಿಯಾದರೂ
ತಿರುಗಿಂಡಿಪ್ಪಲು ಸಾಕು
ಇನ್ನಾದರೂ ಅವಂಗೆ ಬರಲಿ ಒಳ್ಳೆ ಗುಣ |೮|
~~~***~~~
ಮಾವ … ಪದ್ಯ ಓದಿದೆ.ಲಾಯಿಕಾಯಿದು… 🙂
ಹೀಂಗೆ ಮಾಣಿಂಗೊ ಅಪ್ಪಲಾಗ;ಆದರೂ ಅಬ್ಬೆಗೆ ಮಾಣಿ ಬೇಕನ್ನೆ? ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ-ಈ ಶ್ಲೋಕವ ನೆನಪು ಮಾಡಿಸಿತ್ತು.
ಮಾಣಿ ಏವ ರೀತಿಲಿ ಬೆಳವಲಾಗ ಹೇಳುವುದರ ಬಾಲಣ್ಣ ಸೊಗಸಾಗಿ ಪದ್ಯ ರೂಪಲ್ಲಿ ಕೊಟ್ಟಿದವು. ಚುಬ್ಬಕ್ಕನ ಬಾಯಿಲಿ ಬಂದ ಬೈಗುಳ ಸುಪ್ರಭಾತವ ಆ ಮಾಣಿ ಜೀವನಲ್ಲಿ ಸರಿಯಾಗಿ ಹೊಂದುಸಿಕೊಂಡಿದ. ಪದ್ಯ ಒಳ್ಳೇ ರೈಸಿದ್ದು.
😀 ಪಷ್ಟಾಯ್ದು. ರೈಸಿದ್ದು
ಕೊಂಗಾಟಲ್ಲಿ ಸಾ೦ಕಿದ ಮಾಣಿ, ತಿರುಗಾಡಿ ಆದ್ದು ಕವನಲ್ಲಿ ಲಾಯಿಕಲಿ ಮೂಡಿ ಬಯಿಂದು.
ಆಶಯವ ಅಕೇರಿಯಾಣ ಸಾಲುಗಳಲ್ಲಿ ಹೇಳಿದ್ದು ಕೂಡಾ ಲಾಯಿಕ ಆಯಿದು.
ಚಿತ್ರ ಅಲ್ಲದ್ದರೆ ಫಟವನ್ನದರೂ ಹಾಕಿಕ್ಕಿ. ಎಲ್ಲಿ ಹೋದರೂ ಮದಾಲು ಕೇಳೊದು ಅದನ್ನೆ. ಕಲರ್ ಫಟ ತೆಗದು ವ್ಯಾಟ್ಸಾಪಿಲಿ ಹಾಕಿ. ಹುಡ್ಕುವೋ.? ಗೂ ಗೂಲು ಇದ್ದು ನಮ್ಮತ್ರೆ.
ಬಿಗನಾಶಿ ಮಾಣಿಯ ಒಂದು ಚಿತ್ರವೂ ಬರದು ಹಾಕುತಿತ್ತರೆ ಎಲ್ಲಿಯಾದರು ಕಂಡರೆ ಗುರ್ತ ಆವುತಿತ್ತು…. ಎಂತ ಹೇಳ್ತಿ ಬಾಲಣ್ಣ?
ಆ ಮಾಣಿಯ ಅಲ್ಲೆಲ್ಲೋ ವಿಟ್ಲದ ಹೊಡೆಲಿಯೋ,ನೀರ್ಚಾಲ ಹೊಡೆಲಿಯೋ ಕಂಡ ಹಾಂಗಾತಡ ..ಇಂದ್ರಾಣ ಪೇಪೆರಿಲಿ ಇತ್ತಲ್ಲದೋ?( ಶಾಮಣ್ನನ ಪೆನ್ಸಿಲಿಲಿ ಬರಕ್ಕಂಡು ಕಂಡತ್ತು )
ಪೆನ್ಸಿಲಿಲಿ ಇತ್ತಿದ್ದ ಮಾಣಿಯ ಹೆಸರು ನಾಣಿ. ಅವ ಬಿಗನಾಶಿ ಅಲ್ಲ ಆತಾ… ಅವ ಪಾಪ…