- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ
ಬೇಕಪ್ಪ ಸಾಮಾನುಗೊ:
- 4 ಸಾಧಾರಣ ಗಾತ್ರದ ಮಾವಿನಕಾಯಿ ಅಥವಾ 8 ಕಪ್(ಕುಡ್ತೆ) ಕೊಚ್ಚಿದ ಮಾವಿನ ಕಾಯಿ
- 1 ಕಪ್(ಕುಡ್ತೆ) ಕಲ್ಲು ಉಪ್ಪು
- 1.5 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು)
- 1/4 ಕಪ್(ಕುಡ್ತೆ) ಸಣ್ಣ ಸಾಸಮೆ
- 1/2 ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು
ಮಾಡುವ ಕ್ರಮ:
ಹೊರಡಿ ಮಾಡುವ ಕ್ರಮಃ
ಉಪ್ಪಿನಕಾಯಿ ಹೊರಡಿಯ “ಮಾವಿನ ಮೆಡಿ ಉಪ್ಪಿನಕಾಯಿಲಿ” ಹೇಳಿದ ಹಾಂಗೆ ಮಾಡಿ. (ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 1.5 ಕುಡ್ತೆ ಮಸಾಲೆ ಆವುತ್ತು.)
ಉಪ್ಪಿನಕಾಯಿ ಮಾಡುವ ಕ್ರಮಃ
ಮಾವಿನಕಾಯಿಯ ಒಂದು ಒಣಕ್ಕು ವಸ್ತ್ರಲ್ಲಿ ಲಾಯಿಕಲಿ ಉದ್ದಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.
ಇದಕ್ಕೆ ಕಲ್ಲು ಉಪ್ಪು ಹಾಕಿ ಬೆರುಸಿ ಒಂದು ಕರಡಿಗೆ/ಪಾತ್ರಲ್ಲಿ ಮುಚ್ಚಲು ಮುಚ್ಚಿ 1-2 ದಿನ ಮಡುಗಿ. ಇದರ ಉಪ್ಪು ನೀರಿಂದ ತೆಗದು ಒಂದು ಕರೆಲಿ ಮಡುಗಿ.
ಒಂದು ಪಾತ್ರಲ್ಲಿ, ಕಡದ ಹೊರಡಿಯನ್ನೂ, ಮಾವಿನ ತುಂಡನ್ನೂ ಹಾಕಿ ತೊಳಸಿ. (ಹೊರಡಿ ಘಟ್ಟಿ ಇದ್ದರೆ, ರೆಜ್ಜ ಕೊದುಶಿ ತಣುಶಿದ ಉಪ್ಪು ನೀರು ಹಾಕಿ ತೊಳಸಿ.)
ಇದರ ಭರಣಿ ಅಥವಾ ಗ್ಲಾಸು/ಪ್ಲಾಸ್ಟೀಕು ಕರಡಿಗೆಲಿ ಹಾಕಿ, ಮೇಗಂದ ರೆಜ್ಜ ಹೊರಡಿದೆ ಉಪ್ಪುದೆ ಹಾಕಿ, ಒಂದು ವಸ್ತ್ರ ಮುಚ್ಚಿ, ಮುಚ್ಚಲಿನ ಘಟ್ಟಿಗೆ ಹಾಕಿ ತೆಗದು ಮಡುಗಿ.
ಈ ಉಪ್ಪಿನಕಾಯಿಯ ಅದೇ ದಿನ ಅಥವಾ ಮರುದಿನವೇ ಉಪಯೋಗ್ಸುಲೆ ಸುರು ಮಾಡ್ಲೆ ಅಕ್ಕು. ಫ್ರಿಡ್ಜಿಲ್ಲಿ ಮಡುಗಿದರೆ ಉಪ್ಪಿನಕಾಯಿ ಹೆಚ್ಚು ಸಮಯ ಬಾಳತನ ಬತ್ತು.
ನಿತ್ಯಕ್ಕೆ ಉಪಯೋಗ್ಸುವ ಉಪ್ಪಿನಕಾಯಿಯ ರೆಜ್ಜ ತೆಗದು, ಅದಕ್ಕೆ ಸಾಸಮೆ, ಇಂಗು ಹಾಕಿ ಒಗ್ಗರಣೆ ಕೊಟ್ಟು ತೊಳಸಿದರೆ ಪರಿಮ್ಮಳ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.