- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನ ಹಣ್ಣಿನ ಹಪ್ಪಳ
ಬೇಕಪ್ಪ ಸಾಮಾನುಗೊ:
- 3 ಲೀಟರ್ ಪಾತ್ರಲ್ಲಿ ತುಂಬ ಹಲಸಿನ ಹಣ್ಣಿನ ಸೊಳೆ
- ರುಚಿಗೆ ತಕ್ಕಸ್ಟು ಉಪ್ಪು(ರೆಜ್ಜ ಸಾಕು)
ಮಾಡುವ ಕ್ರಮ:
ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಸೊಳೆಯ ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ರೆಜ್ಜ ಉಪ್ಪು ಹಾಕಿ 20-30 ನಿಮಿಷ ಹಬೆಲಿ ಬೇಶಿ.
ಇದರ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.
ರೆಜ್ಜ ಹಿಟ್ಟಿನ ತೆಕ್ಕೊಂಡು ಒಂದು ಪ್ಲಾಸ್ಟೀಕು ಶೀಟ್/ ಬಾಳೆ ಎಲೆ / ಮುಂಡಿ ಎಲೆಲಿ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ತೆಳ್ಳಂಗೆ (ಕೈಲಿ ಅಥವಾ ಸೌಟಿಲ್ಲಿ) ಪಸರುಸಿ.
ಇದರ 4-5 ದಿನ ಬೆಶಿಲಿಲ್ಲಿ ಒಣಗುಸಿ ಡಬ್ಬಿಲಿ ತೆಗದು ಮಡುಗಿ. ಇದರ ಹಾಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 20 ಹಪ್ಪಳ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.