- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದೀಗುಜ್ಜೆ ಚೋಲಿ ಚಟ್ನಿ
ಬೇಕಪ್ಪ ಸಾಮಾನುಗೊ:
- 1-1.5 ಕಪ್(ಕುಡ್ತೆ) ದೀಗುಜ್ಜೆ ಚೋಲಿ
- 2 ಹಸಿಮೆಣಸು
- 3/4-1 ಕಪ್(ಕುಡ್ತೆ) ಕಾಯಿತುರಿ
- ದ್ರಾಕ್ಷೆ ಗಾತ್ರದ ಹುಳಿ
- ದ್ರಾಕ್ಷೆ ಗಾತ್ರದ ಬೆಲ್ಲ(ಬೇಕಾದರೆ ಮಾತ್ರ)
- ರುಚಿಗೆ ತಕ್ಕಸ್ಟು ಉಪ್ಪು
- 1 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು
- 6-8 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ದೀಗುಜ್ಜೆಯ ಹೆರಾಣ ಚೋಲಿಯ ಲಾಯಿಕಲಿ ತೆಗದು, ತೊಳದು ಮಡಿಕ್ಕೊಳ್ಳಿ. ಹಸಿಮೆಣಸಿನ ಸಿಗುದು ಮಡಿಕ್ಕೊಳ್ಳಿ.
ಇದರ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ಉಪ್ಪು, ಹುಳಿ, ಬೆಲ್ಲ, ರೆಜ್ಜ ನೀರು ಹಾಕಿ ಬೇಶಿ.(1-2 ಸೀಟಿ ಬಂದರೆ ಸಾಕು)
ಮಿಕ್ಸಿಗೆ ಕಾಯಿ ತುರಿ, ಬೆಂದ ಬಾಗವ ಹಾಕಿ, ಬೇಕಪ್ಪಸ್ಟು ನೀರು ಹಾಕಿ, ನೊಂಪಿಂಗೆ ಕಡೆರಿ..
ಒಗ್ಗರಣೆ ಸಟ್ಟುಗಿಲ್ಲಿ, ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ರೆಜ್ಜ ಹೊತ್ತು ಮಡುಗಿ, ಚಟ್ನಿಗೆ ಹಾಕಿ, ತೊಳಸಿ.
ಇದು ದೋಸೆ, ಇಡ್ಲಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ವೇಣಿ ಅಕ್ಕ, ದೀಗುಜ್ಜೆ ಚೋಲಿಯ ಚಟ್ನಿ ಮಾಡ್ತ ಕ್ರಮ ಹೇಳಿ ಕೊಟ್ಟದು ಲಾಯ್ಕಾಯಿದು.
ಧನ್ಯವಾದಂಗೊ.